Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

By Suvarna News  |  First Published Nov 30, 2021, 10:24 AM IST

ಎಲ್ಲರಿಗೂ ಎಲ್ಲದಕ್ಕೂ ಟೈಂ ಬರಬೇಕು ಅನ್ನುತ್ತೇವೆ. ಕಾಲನ ಕೃಪೆ ಇಲ್ಲದೆ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ಈ ರಾಶಿಯವರಿಗೆ ಈಗ ಹೆಚ್ಚಿನ ಹಣ ಬಂದು ಸೇರಲು ಕಾಲ ಬಂದಿದೆ. ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಅವರ ಕೈಯ್ಯಲ್ಲೇ ಇದೆ. 


ಪ್ರತಿಯೊಬ್ಬರಿಗೂ ಹಲವಾರು ಕನಸುಗಳಿರುತ್ತವೆ. ಶ್ರೀಮಂತರಾಗುವುದು ಅದರಲ್ಲೊಂದು. ಹಣ, ಹೆಸರು, ಸಂಪತ್ತು ಇವೆಲ್ಲ ಯಾರಿಗೆ ಬೇಡ ಹೇಳಿ? ಪ್ರತಿ  ದಿನ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯುವ ದೂರದ ಗುರಿ ಇದೇ ಅಲ್ಲವೇ? ಹಣವಿದ್ದರೆ ಸಂತೋಷ, ಸಮಾಧಾನ ಸಿಗುತ್ತದೆ ಎಂಬುದು ಎಲ್ಲರ  ಯೋಚನೆ. ಶ್ರೀಮಂತ(rich)ರಾಗುವುದು ಎಂದರೆ ಬರೀ ಅದೃಷ್ಟದ ಮಾತಲ್ಲ. ಅದಕ್ಕೆ ತಕ್ಕನಾದ ಹಾರ್ಡ್ ವರ್ಕ್, ಬುದ್ಧಿವಂತಿಕೆ, ಬದ್ಧತೆ ಎಲ್ಲವೂ ಬೇಕು. ತೀರಾ ಹಟವಿದ್ದು, ಅದಕ್ಕೆ ತಕ್ಕನಾದ ಪ್ರಯತ್ನ ಇದ್ದಾಗ ಮಾತ್ರ ಅದೃಷ್ಟವೂ ಜೊತೆಗೂಡುತ್ತದೆ. ನೀವು ಅಂಥ ಬದ್ಧತೆ ಉಳ್ಳವರಾದಲ್ಲಿ ಅದೃಷ್ಟವನ್ನು ತಂದುಕೊಡುವ ಕೆಲಸವನ್ನು ನಿಮ್ಮ ರಾಶಿಚಕ್ರಗಳು ಮಾಡಬಲ್ಲವು. ಈಗ ಕೆಲ ರಾಶಿಯವರಿಗೆ ಈ ಕನಸನ್ನು ನನಸು ಮಾಡಿಕೊಂಡು ಅನುಭವಿಸಲು ಸಮಯ ಸನ್ನಿಹಿತವಾಗಿದೆ.ಈಗ ಸಧ್ಯಕ್ಕೆ ಅಂಥ ಅದೃಷ್ಟ ಈ ಕೆಳಗಿನ ರಾಶಿಯವರಿಗಿದೆ. 

ವೃಷಭ(Taurus)
ಈ ರಾಶಿಯವರು ಸ್ವಭಾವವೇ ಹಾಗಿದೆ. ಅವರು ಕಷ್ಟಪಟ್ಟು ಕೆಲಸ ಮಾಡುವವರು, ಬದ್ಧತೆ  ಹಾಗೂ ತಾಳ್ಮೆ ಉಳ್ಳವರು. ಹಾಗಾಗಿ, ಅವರ ಅಂಗೈ ರೇಖೆಯಲ್ಲಿ ಯಶಸ್ಸು ಬರೆದುಬಿಟ್ಟಿರುತ್ತದೆ. ಇದೊಂತರಾ ಹಟಮಾರಿ ರಾಶಿಯೂ ಆಗಿದ್ದು, ಅದೇ ಹಟ ಬಳಸಿ, ಅವರ ಎಲ್ಲ ಎನರ್ಜಿ, ಪ್ರಯತ್ನವನ್ನೂ ಹಣ ಮಾಡುವಲ್ಲಿಗೆ ಹಾಕಿದರೆ ಖಂಡಿತವಾಗೂ ತಾವು ಬಯಸಿದಷ್ಟು ಶ್ರೀಮಂತರಾಗುವ ಯೋಗ ವೃಷಭ ರಾಶಿಯವರದು. ತಮ್ಮ ಎನರ್ಜಿಯನ್ನು ವ್ಯರ್ಥ ಮಾಡದಂತೆ ಕಾಯ್ದುಕೊಳ್ಳಲು ಇವರು ಗಮನ ಹರಿಸಬೇಕು.

Tap to resize

Latest Videos

undefined

ಸಿಂಹ (Leo)
ಇವರ ಕಾರುಣ್ಯ ಸ್ವಭಾವಕ್ಕೆ ಸಾಥ್ ನೀಡಿರುವುದು ಸೃಜನಶೀಲತೆ (creativity). ಬಹಳ ಬಹಿರ್ಮುಖಿ ಗುಣದವರಾದ ಸಿಂಹ ರಾಶಿಯವರಿಗೆ  ಸಕ್ಸಸ್ ಸದಾ ಎಡತಾಕುತ್ತಲೇ ಇರುತ್ತದೆ. ಇವರ ಸಂವಹನ ಶಕ್ತಿ ಅಗಾಧವಾಗಿರುತ್ತದೆ.  ಈ ಕಮ್ಯೂನಿಕೇಶನ್ ಸ್ಕಿಲ್ ಹಾಗೂ ಕ್ರಿಯೇಟಿವಿಟಿ ಇದ್ದ ಮೇಲೆ ಯಾವುದು ತಾನೇ ತಡೆಯಾದೀತು? ಇದನ್ನೇ ಯಾವುದೇ ಬಿಸ್ನೆಸ್ ಅಥವಾ ಕಂಪನಿ ನಿರೀಕ್ಷಿಸುವುದು. ಹಾಗಾಗಿ, ಇವರ ಯಶಸ್ಸಿನ ಹಾದಿ, ಗಳಿಕೆಯ ಶಕ್ತಿ ಎರಡೂ ಸುಗಮವಿದ್ದು ಸಧ್ಯದಲ್ಲೇ ಶ್ರೀಮಂತಿಕೆಯ ಜೀವನವನ್ನು ಕಾಣಲಿದ್ದಾರೆ. 

Positive Energy at home: ಮನೆಗೆ ತನ್ನಿ ಶುಭ ಕಳೆ

ಕನ್ಯಾ (Virgo)
ಪರ್ಫೆಕ್ಷನಿಸ್ಟ್ ಆಗಿರುವ ಇವರು ದೊಡ್ಡ ಮೊತ್ತದ ಹಣ ಮಾಡಿಯೇ ಸಿದ್ಧ. ಸಣ್ಣಪುಟ್ಟ ಆರ್ಥಿಕತೆಯಲ್ಲಿ ಸಮಾಧಾನ ಪಟ್ಟುಕೊಳ್ಳುವ ಸ್ವಭಾವ ಇವರದಲ್ಲ. ಇವರಿಗೆ ಯಶಸ್ಸು(success) ಬೇಕು, ಶ್ರೀಮಂತಿಕೆ ಬೇಕು, ಹೆಸರು ಬೇಕು. ಹಾಗಂಥ ಅದೆಲ್ಲ ಕನಸು ಕಾಣುತ್ತಾ ಕೈಕಟ್ಟಿ ಕುಳಿತುಕೊಳ್ಳುವವರಿವರಲ್ಲ. ತಮ್ಮ ಗುರಿಸಾಧನೆಗಾಗಿ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಸಧ್ಯದಲ್ಲೇ ಗುರಿ ಸಾಧನೆಯಲ್ಲಿ ಗೆಲ್ಲುವ ಎಲ್ಲ ಅವಕಾಶಗಳು ಈ ರಾಶಿಯವರಿಗಿದೆ.

Palmistry Lines: ಸಂತಾನ ಭವಿಷ್ಯ ತಿಳಿಸುವ ರೇಖೆ ಯಾವುದು ನಿಮ್ಮ ಕೈಯಲ್ಲಿ!

ವೃಶ್ಚಿಕ (Scorpio)
ತಮ್ಮ ಪ್ಯಾಶನ್ನೇ ಗುರಿಯತ್ತ ತಲುಪಿಸುತ್ತದೆ ಎಂದು ನಂಬಿರುವವರು ಇವರು. ವೃಶ್ಚಿಕ ರಾಶಿಯವರು ಬುದ್ಧವಂತರು, ಅತಿ ಉತ್ಸಾಹಿಗಳು, ಛಲವಾದಿಗಳು ಜೊತೆಗೆ ಶ್ರೀಮಂತಿಕೆ ಪಡೆಯಲು ಬೇಕಾದ ದಾರಿ ಆರಿಸಿಕೊಳ್ಳುವಲ್ಲಿ ಅತಿ ಜಾಣರು. ಇವರಿಗೆ ಸದಾ ಕಂಫರ್ಟೇಬಲ್ ಹಾಗೂ ಲಕ್ಷುರಿಯ ಜೀವನ ಮಾಡುವ ಆಸೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಬಲ್ಲರು. ಶ್ರೀಮಂತಿಕೆಯ ಏಣಿ ಹತ್ತಲು ಸಧ್ಯದಲ್ಲೇ ಇವರ ಅವಕಾಶದ ಬಾಗಿಲು ತೆರೆಯಲಿದೆ.

ಮಕರ (Capricorn)
ಸಣ್ಣ ಸಂಬಳದ ಕೆಲಸಕ್ಕೆ ತೃಪ್ತಿ ಪಟ್ಟುಕೊಂಡಿರುವವರಲ್ಲ ಇವರು. ತಮ್ಮ ಬೆಲೆಯೇನು, ತಮ್ಮ ಕೌಶಲ್ಯವೇನು, ತಾವೇನೆಲ್ಲ ಸಾಧಿಸಬಲ್ಲೆವು ಎಂಬ ಶಕ್ತಿಯ ಅರಿವು ಇವರಿಗಿದೆ. ಹಾಗಾಗಿ, ಅವರ ಕಣ್ಣು ಸದಾ ದೊಡ್ಡ ಆದಾಯದ ಕೆಲಸದ ಮೇಲೇ ಇರುತ್ತದೆ. ಇದೇ ಮಹತ್ವಾಕಾಂಕ್ಷೆ ಅವರಿಗೆ ಅವಕಾಶಗಳನ್ನೂ ತಂದುಕೊಡುತ್ತದೆ, ಆರ್ಥಿಕ ಯಶಸ್ಸೂ ತಂದುಕೊಡುತ್ತದೆ. ಬದ್ಧತೆಯಿಂದಲೇ ಯಶಸ್ಸಿನ ಹತ್ತಿರವಾಗಿದ್ದಾರೆ ಅವರು. 

 

click me!