Daily Horoscope: ಈ ರಾಶಿಯವರಿಗಿಂದು ಉದ್ಯೋಗ ಅವಕಾಶ

Published : Nov 30, 2021, 05:14 AM IST
Daily Horoscope: ಈ ರಾಶಿಯವರಿಗಿಂದು ಉದ್ಯೋಗ ಅವಕಾಶ

ಸಾರಾಂಶ

30 ನವೆಂಬರ್ 2021, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕನ್ಯಾ ರಾಶಿಗಿಂದು ಸಮಾಧಾನವೇ ಪ್ರಧಾನ

ಮೇಷ(Aries): ಹಿತೈಷಿಗಳೊಡನೆ ಸಮಾಲೋಚನೆ. ವ್ಯಾಪಾರದಲ್ಲಿ ಒತ್ತಡವಾದರೂ ಲಾಭ. ತಕರಾರುಗಳಲ್ಲಿ ನ್ಯಾಯ ಲಭ್ಯ. ಮಾತಿನಿಂದ ಲಾಭ, ಉಪನ್ಯಾಸಕರಿಗೆ ಉತ್ತಮ ದಿನ. ಸ್ತ್ರೀಯರಿಗೆ ಬಲ, ಶತ್ರುಗಳ ಬಂಧುಗಳ ಜೊತೆ ಎಚ್ಚರ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ವೃಷಭ(Taurus): ವಿಘ್ನ ಸಂಭವ, ಅಸಮಾಧಾನದ ದಿನ, ಸಾಲ ಮಾಡಬೇಕಾದ ಸನ್ನಿವೇಶ. ಸ್ತ್ರೀಯರಿಗೆ ಕಾರ್ಯ ಸಾಧನೆ. ಲೇವಾದೇವಿಗಳಲ್ಲಿ ಒತ್ತಡದ ಜೊತೆ ನಷ್ಟ. ವಿವಾಹಿತರಲ್ಲಿ ವೈಮನಸ್ಸು. ವಿರೋಧಿಗಳಿಂದ ವಿಘ್ನ, ಹೊಸ ಕಾರ್ಯಕ್ಕೆ ಕೈ ಹಾಕಬೇಡಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಮಿಥುನ(Gemini): ಹಾಲು-ಹೈನು-ಕೃಷಿ-ಹಣ್ಣು ವ್ಯಾಪಾರಿಗಳಿಗೆ ಉತ್ತಮ ಫಲ, ತಂದೆ-ಮಕ್ಕಳಿಗೆ ವಿರೋಧ, ಶಾಂತತೆ ಇರಲಿ. ಒಪ್ಪಂದ ವ್ಯವಹಾರಗಳಲ್ಲಿ ಲಾಭ. ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಆಪ್ತರೊಂದಿಗೆ ಪ್ರವಾಸ. ಮನೋಬಲ ವೃದ್ಧಿ. ಲಲಿತಾ ಸಹಸ್ರನಾಮ ಪಠಣ ಮಾಡಿ.

ಕಟಕ(Cancer): ಸಹೋದರರ ಸಹಕಾರ. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗಕ್ಕೆಡೆಯಿದೆ. ಹಣಕಾಸಿನ ಚೇತರಿಕೆ, ಉದ್ಯೋಗಿಗಳಿಗೆ ಬಲ, ಶತ್ರುಪೀಡೆ ಕಡಿಮೆಯಿರುವುದರಿಂದ ಮಾನಸಿಕ ನೆಮ್ಮದಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಮನೆ ದೇವತೆ ಪ್ರಾರ್ಥನೆ ಮಾಡಿ.

ಸಿಂಹ(Leo): ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ಆಹಾರ ಸಮೃದ್ಧಿ. ಆರೋಗ್ಯದ ವಿಷಯದಲ್ಲಿ ಆಸ್ಪತ್ರೆ ಅಲೆದಾಟ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸ. ಸಂದೇಶಗಳ ಆಗಮನ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಸ್ತ್ರೀಯರಿಂದ ಅನುಕೂಲ, ಸಾಲದ ಬಾಧೆ ಇರಲಿದೆ. ವಿರೋಧಿಗಳ ಉಪದ್ರವ. ಕುಟುಂಬದಲ್ಲಿ ಬೆಂಕಿಯ ವಾತಾವರಣ. ಸಾಧ್ಯವಾದಷ್ಟು ತಾಳ್ಮೆ, ಸಮಾಧಾನದಿಂದ ವರ್ತಿಸಿದರೆ ಮಾತ್ರ ಪರಿಸ್ಥಿತಿ ಹತೋಟಿಗೆ ತರಬಹುದು. ಕೆಲಸ ಕಾರ್ಯಗಳಲ್ಲಿ ಅಪೂರ್ಣತೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ತುಲಾ(Libra): ಗಾಯಗಳಾಗುವ ಸಾಧ್ಯತೆ, ಅಧಿಕ ಖರ್ಚು, ಆಪ್ತರು ದೂರಾಗುತ್ತಾರೆ, ಮನಸ್ಸು ಕದಡಿ ಹೋಗುತ್ತದೆ. ಗೃಹ ನವೀಕರಣ ಕಾರ್ಯಗಳು. ನ್ಯಾಯಾಲಯದ ಕೆಲಸಗಳು ವಿಳಂಬ, ಆಸ್ಪತ್ರೆ ಅಲೆದಾಟದಿಂದ ಸುಸ್ತು. ಮನಃಶಾಂತಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ದೇವಾಲಯಕ್ಕೆ ಭೇಟಿ ನೀಡಿ ಆತ್ಮಬಲ ವೃದ್ಧಿ ಮಾಡಿಕೊಳ್ಳಿ. 

ವೃಶ್ಚಿಕ(Scorpio): ಮನದಾಸೆಯ ಪೂರೈಕೆಗಾಗಿ ಧಾರಾಳವಾಗಿ ಖರ್ಚು ವೆಚ್ಚಗಳನ್ನು ಮಾಡುವಿರಿ. ಲಾಭ ಸಮೃದ್ಧಿ, ದೈವಾನುಕೂಲ ಇರಲಿದೆ. ಪೂಜೆಯಲ್ಲಿ ಭಾಗಿಯಾಗುವ ದಿನ, ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ಶತ್ರುಭೀತಿ ಇಲ್ಲವಾಗಿ ನೆಮ್ಮದಿಗೆ ಕಾರಣವಾಗುತ್ತದೆ. ಗ್ರಾಮ ದೇವತಾರಾಧನೆ ಮಾಡಿ.

ಧನುಸ್ಸು(Sagittarius): ಉದ್ಯೋಗಿಗಳಿಗೆ ಉತ್ತಮ ಅವಕಾಶ. ಚೆನ್ನಾಗಿ ಬಳಸಿಕೊಳ್ಳುವುದರಿಂದ ಒಳಿತಾಗಲಿದೆ. ನಿರುದ್ಯೋಗಿಗಳಿಗೆ ಸಿಹಿಸುದ್ದಿ ಕೇಳಿ ಬರಲಿದೆ. ಪ್ರಾಮಾಣಿಕತೆಯಿಂದ ಫಲ ಪಡೆಯುವಿರಿ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ತೋರಿ ಮನೋಭಿಲಾಶೆ ಪೂರೈಸಲಿದೆ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.

ಮಕರ(Capricorn): ದೊಡ್ಡವರ ಮಾತಿನಿಂದ ಬೇಸರ. ಹೆಚ್ಚಿನ ಕಾರ್ಯಕ್ಕೆ ಆತುರತೆ ಬೇಡ. ಯೋಚಿಸಿ, ಚರ್ಚಿಸಿ ಕಾರ್ಯರೂಪಕ್ಕೆ ಇಳಿಸಿ. ಪಾಲುದಾರಿಕೆಯಲ್ಲಿ ವಂಚನೆ ಆಗುವ ಸಾಧ್ಯತೆ. ಉದ್ಯೋಗಿಗಳಿಗೆ ಬಲವಿದೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.  ಗುರು ಚರಿತ್ರೆ ಓದಿ.

ಕುಂಭ(Aquarius): ವೃತ್ತಿಯಲ್ಲಿ ಯಶೋಲಾಭವಿದೆ. ಕಾರ್ಯರಂಗದಲ್ಲಿ ಹೆಚ್ಚಿನ ಹೊಣೆ ತೋರಿ ಅವಿರತ ದುಡಿಮೆ ಇರುವುದು. ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಕಾಟ. ಅವಿವಾಹಿತರಿಗೆ ಕಂಕಣಬಲವಿದೆ.  ಕುಟುಂಬದಲ್ಲಿ ನೆಮ್ಮದಿ, ಹತ್ತಿರದವರಿಂದ ಶುಭಸುದ್ದಿ.ದೂರಪ್ರಯಾಣ ಬೇಡ. ಆದಿತ್ಯ ಹೃದಯ ಪಠಿಸಿ.

ಮೀನ(Pisces): ಸಮಯವರಿತು ಗಮನ ಹರಿಸಿ ಕಾರ್ಯಸಾಧನೆ ಮಾಡಿ. ದಾಖಲೆ ಸಂಬಂಧಿ ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಮನೋನೆಮ್ಮದಿ ಕೆಡಲಿದೆ. ಅಧಿಕ ವ್ಯಯ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ, ಮಡದಿಯಿಂದ ಸಹಕಾರ, ಆದಿತ್ಯ ಹೃದಯ ಪಠಿಸಿ.

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ