Chanakya: ಶತ್ರುತ್ವದಲ್ಲಿ ಚಾಣಕ್ಯನಂತಿರುವ ಆ 5 ರಾಶಿಗಳು!

Published : Oct 14, 2025, 09:44 PM IST
chanakya niti

ಸಾರಾಂಶ

ಕೆಲವು ಜನ್ಮರಾಶಿಯವರು ಶತ್ರುಗಳಾದಾಗ ಅತ್ಯಂತ ಅಪಾಯಕಾರಿಯಾಗಿರುತ್ತಾರೆ. ಚಾಣಕ್ಯನಂತೆ (chanakya) ಸೇಡು ತೀರಿಸಿಕೊಳ್ಳುವ ಸ್ವಭಾವದವರಾಗಿದ್ದು, ಇವರೊಂದಿಗೆ ದ್ವೇಷ ಸಾಧಿಸುವುದು ಸೂಕ್ತವಲ್ಲ. ಹಾಗಾದರೆ ಯಾರವರು? 

ಪ್ರಪಂಚದ ಎಲ್ಲ ಜನರೊಂದಿಗೂ ಸ್ನೇಹಿತರಾಗಿರಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಶತ್ರುಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ, ಕೆಲವೊಮ್ಮೆ ತಿಳಿಯದೇ ಹಾಗೆ ಮಾಡುತ್ತೇವೆ. ಕೆಲವು ಜನ್ಮರಾಶಿಯವರು ಮೆದು ಸ್ವಭಾವದವರು. ಅಂಥವರ ಜತೆ ಕೋಪ ಕಟ್ಟಿಕೊಂಡರೂ ಸಮಸ್ಯೆಯಿಲ್ಲ. ಆದರೆ ಇನ್ನು ಕೆಲವರು ಜನ್ಮತಃ ಕಠೋರ ಸ್ವಭಾವಿಗಳು. ಆದರೆ ಇವರು ಆಚಾರ್ಯ ಚಾಣಕ್ಯರ ಹಾಗೆ. ಒಮ್ಮೆ ಇವರೊಡನೆ ಶತ್ರುತ್ವ ಹೊಂದಿದವರನ್ನು ಫಿನಿಶ್ ಮಾಡದೇ ಬಿಡುವುದಿಲ್ಲ. ಚಾಣಕ್ಯ ನಂದಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ನಿಮಗೆ ಗೊತ್ತು ತಾನೆ? ಅಂಥವರಲ್ಲಿ ದ್ವೇಷ ಹುಟ್ಟುವ ಹಾಗೆ ವ್ಯವಹರಿಸಬಾರದು. ಶತ್ರುಗಳಾಗಿ ಇವರು ಭಯಾನಕ. ರಾಶಿಚಕ್ರದ ಚಿಹ್ನೆಗಳ ಆಧಾರದ ಮೇಲೆ, ಚಕ್ರದಲ್ಲಿ ಅಂತಹ 5 ರಾಶಿಚಕ್ರಗಳು ನಿಮ್ಮ ಶತ್ರುಗಳಾಗಬಾರದು.

ವೃಷಭ ರಾಶಿ (Taurus)

ಈ ರಾಶಿಚಕ್ರದ ವ್ಯಕ್ತಿಗಳು ತುಂಬಾ ಹಠಮಾರಿಗಳು. ನೀವು ಎಂದಿಗೂ ಅವರ ಕೋಪವನ್ನು ಉತ್ತೇಜಿಸಬಾರದು. ಯಾವ ವಿಷಯವು ಅವರಲ್ಲಿ ಕೋಪವನ್ನು ಉಂಟುಮಾಡುತ್ತದೆ ಎಂದು ನಿಮಗೆ ತಿಳಿದ ಬಳಿಕ, ಅದನ್ನು ಹೆಚ್ಚು ಕೆದಕಲು ಹೋಗಬೇಡಿ. ಈ ವ್ಯಕ್ತಿಗಳು ಸಾಕಷ್ಟು ಕೋಪದಿಂದ ಲೋಡ್ ಆಗಿರುತ್ತಾರೆ ಮತ್ತು ನೀವು ಅವರ ಮುಚ್ಚಳ ತೆರೆದರೆ ಭುಸ್ಸೆಂದು ಸ್ಫೋಟಿಸುತ್ತಾರೆ. ಶತ್ರುಗಳನ್ನು ಆಹ್ವಾನಿಸುವ ಸ್ವಭಾವದವರು ಇವರು. ಅವರ ಬಿಗಿಯಾದ ತುಟಿಗಳ ನಗು ನೋಡಿಯೇ ಅರ್ಥ ಮಾಡಿಕೊಳ್ಳಿ. ನಿಮ್ಮಿಬ್ಬರ ನಡುವಿನ ಉದ್ವಿಗ್ನತೆಯನ್ನು ಇವರು ಒಪ್ಪಿಕೊಳ್ಳದಿದ್ದರೂ, ಮೌನವಾಗಿ ಹಗೆ ಸಾಧಿಸಬಹುದು.

ಕಟಕ ರಾಶಿ (Cancer)

ಕರ್ಕಾಟಕ ರಾಶಿಯವರು ಕೋಪಗೊಂಡರೆ ನಿಮ್ಮ ಮೇಲೆ ಭಾವನೆಗಳ ಸುಂಟರಗಾಳಿಯನ್ನು ಹರಿಬಿಡಬಹುದು. ಇದರಿಂದ ನಿಮ್ಮಲ್ಲಿ ಶತ್ರುತ್ವ ಉಂಟಾಗಬಹುದು. ಇವರು ನೇರವಾಗಿ ಏನೂ ಮಾಡದಿರಬಹುದು, ಆದರೆ ಇವರು ನಿಮ್ಮ ಬಗ್ಗೆ ಗಾಸಿಪ್ ಹರಡುತ್ತಾರೆ. ಅವರ ಮಾತುಗಳು ವಿಷಪೂರಿತವಾಗಿರುತ್ತವೆ. ಈ ರಾಶಿಚಕ್ರದವರನ್ನು ನಿಮ್ಮ ಶತ್ರುಗಳನ್ನಾಗಿ ಮಾಡಿಕೊಂಡರೆ ನೀವು ವಿಷಾದಿಸುತ್ತೀರಿ.

ವೃಶ್ಚಿಕ ರಾಶಿ (Scorpio)

ಇವರ ಕೋಪವು ಅಸ್ಥಿರವಾದುದು. ಇವರ ಕೋಪಕ್ಕೆ ಹೆದರುವುದು ಅರ್ಥಹೀನ ಎಂದು ಕಾಣಿಸಬಹುದು, ಆದರೆ ಹಾಗಿಲ್ಲ. ಇವರು ನಿಮ್ಮ ಮುಖಕ್ಕೆ ಹೊಡೆದಂತೆ ಮಾತಾಡುತ್ತಾರೆ, ಜನರ ಮಧ್ಯದಲ್ಲಿ ನಿಮ್ಮನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಾರೆ. ಇವರು ನಿಮ್ಮನ್ನು ಅಷ್ಟು ಸುಲಭವಾಗಿ ಹೋಗಲು ಬಿಡುವುದಿಲ್ಲ. ಇವರ ನಡೆಗಳು ಸಮಯಕ್ಕೆ ತಕ್ಕಂತೆ ಇರುತ್ತವೆ. ವೃಶ್ಚಿಕ ರಾಶಿಯವರ ಮೇಲೆ ನೀವು ಪ್ರತಿದಾಳಿ ಮಾಡಲು ಸಿದ್ಧರಾಗಿರುವುದಿಲ್ಲ, ನೆನಪಿಡಿ.

ಧನು ರಾಶಿ (Sagttarius)

ಇವರ ಸ್ವಭಾವ ತುಂಬಾ ಸೂಕ್ಷ್ಮ ಮತ್ತು ಇವರನ್ನು ನೋಯಿಸುವುದು ತುಂಬಾ ಸುಲಭ. ಆದರೆ ಇವರು ದ್ವೇಷವನ್ನು ಹಿಡಿದಿಟ್ಟುಕೊಳ್ಳುತ್ತಾರೆ ಮತ್ತು ನಿಮ್ಮನ್ನು ಬೇರೆ ಕಡೆ, ಬೇರೆ ಸಮಯದಲ್ಲಿ ಅಟಕಾಯಿಸಿಕೊಳ್ಳುತ್ತಾರೆ. ಕೆಲವು ಸಲ ನೀವು ಇವರ ಬಗ್ಗೆ ಮಾಡುವ ತಮಾಷೆಗಳು ಕೂಡ ಇವರಿಗೆ ಕಿರಿಕಿರಿ ಉಂಟುಮಾಡುತ್ತದೆ.

ಮೇಷ ರಾಶಿ (Aries)

ಇವರನ್ನು ತೀರಾ ಅಪಾಯಕಾರಿಗಳು ಎಂದು ಹೇಳಲಾಗದು. ಆದರೆ ಒಮ್ಮೆ ಇವರಿಗೆ ಯಾರಾದರೂ ಅಪಮಾನ ಮಾಡಿದರೆ, ಕೂಡಲೇ ತಿರುಗೇಟು ನೀಡುತ್ತಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ. ಯಾವುದಕ್ಕೂ ಇನ್ನೊಮ್ಮೆ ಕಾದು ಕುಳಿತು ಪ್ರತಿಯಾಗಿ ತಿರುಗೇಟು ಕೊಡೋಣ ಎಂದು ಕಾಯುವವರಲ್ಲ. ಆದ್ದರಿಂದ ಇವರಿಗೆ ತಕ್ಷಣವೇ ಸಿಟ್ಟು ತರಿಸಬಹುದಾದ ವಿಷಯಗಳ ಬಗ್ಗೆ ಮಾತಾಡುವಾಗ ಆ ಬಗ್ಗೆ ಹುಷಾರಾಗಿರಿ.

ಇನ್ನು ಮಿಥುನ, ಸಿಂಹ, ಕನ್ಯಾ, ತುಲಾ, ಮಕರ, ಕುಂಭ ಮತ್ತು ಮೀನ ರಾಶಿಯವರು ಕೂಡ ಕೋಪಗೊಳ್ಳುತ್ತಾರೆ, ಆದರೆ ಇವರು ಕಾದು ಕುಳಿತು ಸೇಡು ತೀರಿಸಿಕೊಳ್ಳುವವರಲ್ಲ. ಹೀಗಾಗಿ ಮೇಲಿನ ಐದು ಜನ್ಮರಾಶಿಯವರ ಕುರಿತು ನೀವು ಹೆಚ್ಚು ಎಚ್ಚರವಾಗಿ ಇರಬೇಕು.

PREV
Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್