ಈ ವರ್ಷ ಶನಿ ಜಯಂತಿಯನ್ನು ಜೂನ್ 6 ರಂದು ಆಚರಿಸಲಾಗುತ್ತದೆ. ಜೂನ್ 6 ಸಂಜೆ 7.12ರವರಗೆ ಅಮವಾಸ್ಯೆಯ ತಿಥಿ ಇರುತ್ತದೆ.
ಶನಿದೇವನನ್ನು ನ್ಯಾಯದ ಅಧಿಪತಿ ಎಂದು ಕರೆಯಲಾಗುತ್ತದೆ. ಶನಿದೇವನ ರಾಶಿ ಚಕ್ರಕ್ಕೆ ಪ್ರವೇಶ ಕೆಲವರಿಗೆ ಲಾಭ, ಮತ್ತೊಂದಿಷ್ಟು ಜನಕ್ಕೆ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಜನರ ಕಠಿಣ ಪರಿಶ್ರಮಕ್ಕೆ ಖಂಡಿತವಾಗಿ ಶನಿದೇವ ಆಶೀರ್ವಾದ ನೀಡುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದೇ ಜೂನ್ 6ರಂದು ಶನಿ ಜಯಂತಿ ಬರಲಿದೆ. ಶನಿದೋಷ ನಿವಾರಣೆಗಾಗಿ ಈ ಬಾರಿ ಶನಿ ಜಯಂತಿಯನ್ನು ಹೀಗೆ ಆಚರಿಸಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ, ಶನಿ ದೋಷ ಉಂಟಾಗುತ್ತದೆ. ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ರೆ ಜೂನ್ 6ರಂದು ಕೆಲಸಗಳನ್ನು ಮಾಡಿ.
undefined
ಎರಡು ವರ್ಷಗಳಿಗೊಮ್ಮೆ ಶನಿದೇವ ತನ್ನ ಸ್ಥಳವನ್ನು ಬದಲಾಯಿಸುತ್ತಿರುತ್ತಾನೆ. ಶನಿಯ ಚಲನೆ ನಿಧಾನವಾಗಿರುವ ಕಾರಣ ಅದರ ಪ್ರಭಾವ ಸಹ ತುಂಬಾ ದೀರ್ಘವಾಗಿರುತ್ತದೆ. ಶನಿಯ ಸಾಡೇ ಸಾತಿಯ ದೋಷಕ್ಕೆ ತುತ್ತಾದ್ರೆ ಈ ಸಮಯದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಾಡೇಸಾತಿ ದೋಷಕ್ಕೆ ತುತ್ತಾದವರು, ಶನಿ ದೇವರ ಕೋಪಕ್ಕೆ ಒಳಗಾಗಿರುತ್ತಾರೆ. ಹಾಗಾಗಿ ದೀರ್ಘ ಸಮಯದವರೆಗೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಐದು ರಾಶಿಗಳ ಮೇಲೆ ಶನಿ ಪ್ರಭಾವ
ಸದ್ಯ ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಇದರ ಪರಿಣಾಮ ಮಕರ, ಕುಂಭ, ಕರ್ಕ, ಮೀನ ಮತ್ತ ವೃಷಭ ರಾಶಿಗಳ ಮೇಲೆ ಶನಿಯ ಪ್ರಭಾವ ಬೀರುತ್ತದೆ. ಹಾಗಾಗಿ ಐದು ರಾಶಿಯ ಜನರು ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡುವಂತೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
Astrology Tips: ಶನಿ ದೋಷದಿಂದ ಮುಕ್ತಿ ಪಡೆಯಲು ಈ ರತ್ನ ಧರಿಸಿ
ಶನಿ ಜಯಂತಿಯಂದು ಮಾಡಬೇಕಾದ ಕೆಲಸಗಳು
1.ಈ ದಿನದಂದು ಅರಳಿ ಮರಕ್ಕೆ ನೀರಿ ಹಾಕಬೇಕು. ಇದರಿಂದ ಪೂರ್ವಜರು ಸಂತೋಷರಾಗುತ್ತಾರೆ. ಈ ಮೂಲಕ ಶನಿದೋಷದಿಂದ ಪರಿಹಾರ ಪಡೆದುಕೊಳ್ಳಬಹುದು.
2.ಶನಿ ಜಯಂತಿಯಂದು ವಾಯುಪುತ್ರ ಆಂಜನೇಯನನ್ನುಮ ಆರಾಧಿಸಬೇಕು. ಹೀಗೆ ಮಾಡೋದರಿಂದ ಹನುಮಂತ ಸಾಡೇ ಸಾತಿಯ ಪ್ರಭಾವವನ್ನು ಕಡಿಮೆ ಮಾಡುತ್ತಾನೆ.
3.ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ಸಾಸಿವೆ ಎಣ್ಣೆ ಅಥವಾ ಕರಿ ಎಳ್ಳಿನಿಂದ ಪೂಜಿಸಿದ್ರೆ ಶನಿದೋಷ ನಿವಾರಣೆ ಆಗುತ್ತೆ ಎಂಬ ನಂಬಿಕೆ ಇದೆ.
Vastu Tips: ಶನಿ ದೋಷ ಶುರುವಾಗಿದ್ಯಾ? ಈ ಸಸ್ಯದಿಂದ ದೋಷ ನಿವಾರಿಸಿಕೊಳ್ಳಿ..
ಶನಿ ದೋಷದ ಲಕ್ಷಣಗಳು
ಜಾತಕದಲ್ಲಿ ಶನಿದೋಷವಿದ್ದರೆ ಆ ವ್ಯಕ್ತಿಯ ಹಣ ಮತ್ತು ಆಸ್ತಿ ಕ್ರಮೇಣ ಅನಗತ್ಯ ಚಟುವಟಿಕೆಗಳಿಗೆ ವ್ಯಯವಾಗತೊಡಗುತ್ತದೆ. ಶನಿದೋಷದಿಂದಾಗಿ ಚರ್ಚೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಕ್ತಿಯ ವಿರುದ್ಧ ಸುಳ್ಳು ಆರೋಪ ಬರುತ್ತದೆ. ಮದ್ಯಪಾನ, ಜೂಜು ಮತ್ತಿತರ ಕೆಟ್ಟ ಚಟಗಳೂ ಶನಿ ದೋಷಕ್ಕೆ ಕಾರಣವಾಗುತ್ತವೆ. ಮಾಡುವ ಕೆಲಸದಲ್ಲಿ ಅಡೆತಡೆಗಳು, ಸಾಲದ ಹೊರೆ, ಮನೆಯಲ್ಲಿ ಬೆಂಕಿ, ಮನೆ ಮಾರಾಟ ಅಥವಾ ಅದರ ಯಾವುದೇ ಭಾಗ ಕುಸಿಯುವುದು ಇತ್ಯಾದಿಗಳನ್ನು ಸಹ ಶನಿ ದೋಷದ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ.