ಪವಾಡ ಸೃಷ್ಟಿಸೋ ಬಸವಣ್ಣಗಳ ಕತೆ ನಿಮಗೆ ಗೊತ್ತಾ?

By Suvarna News  |  First Published Jan 24, 2020, 4:03 PM IST

ಚಿಕ್ಕರಸಿನಕೆರೆ ಹಾಗೂ ಕಾವಣಾಪುರದ ಮತ್ತು ಜಯಪುರದ ಮೂರೂ ಬಸವಪ್ಪಗಳೂ ಹಲವು ವರ್ಷಗಳಿಂದ ಸುತ್ತಮುತ್ತಲೂ ಪವಾಡದ ಬಸವಪ್ಪಗಳೆಂದೇ ಖ್ಯಾತಿ ಪಡೆದಿವೆ. ಈ ವ್ಯಾಪ್ತಿಯಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳು ಇದ್ದರೂ ಅದನ್ನು ಬಗೆಹರಿಸಲು ಈ ಬಸವಪ್ಪಗಳನ್ನು ಕರೆಲಸಾಗುತ್ತದೆ,


ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಾಲಯದ ಬಸವಣ್ಣನನ್ನು ಇತ್ತೀಚೆಗೆ ಜುಟ್ಟನಹಳ್ಳಿ ಎಂಬ ಗ್ರಾಮಕ್ಕೆ ಪೂಜೆಗಾಗಿ ಕರೆತರಲಾಗಿತ್ತು. ಅದೇ ವೇಳೆಗೆ ಗ್ರಾಮದ ಇಬ್ಬರು ಬಸವನನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ನಕಲಿ ಕೋರಿಕೆ ಇಟ್ಟ ಭಕ್ತನೊಬ್ಬನನ್ನು ಬಸವ ಊರಿನ ತುಂಬ ಅಟ್ಟಾಡಿಸಿಕೊಂಡು ಹೋಗಿದೆ. ಇನ್ನೊಬ್ಬಾತ ಕುದಿ ಅಮಲಿನಲ್ಲಿ ಆಶೀರ್ವಾದಕ್ಕಾಗಿ ಬಂದಾಗ, ಆತನ ಕೈಯ ಮೇಲೆ ಕಾಲಿಟ್ಟು, ಕಣ್ಣೀರು ಹಾಕಿಸಿ, ಆತ ಕ್ಷಮೆ ಕೇಳುವಂತೆ ಮಾಡಿದೆ. ಇದು ದೈವೀ ಸ್ವರೂಪಿ ಎತ್ತು ಎಂಬ ಬಗ್ಗೆ ಈಗ ಗ್ರಾಮಸ್ಥರಿಗೆ ಅನುಮಾನ ಉಳಿದಿಲ್ಲ. ಇಂಥ ಎತ್ತುಗಳು ನಮ್ಮ ರಾಜ್ಯದಲ್ಲೇ ಇನ್ನೂ ಕೆಲವು ಇವೆ.

ಉದಾಹರಣೆಗೆ, ರಾಮನಗರದ ಕೈಲಾಂಚ ಹೋಬಳಿಯ ಕವಣಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಾಲಯದ ಬಸವಣ್ಣನ ಪವಾಡಗಳು ಸುತ್ತಮುತ್ತಲೂ ತುಂಬ ಪ್ರಸಿದ್ಧವಾಗಿವೆ. ಐದು ವರ್ಷದಿಂದ ಬಾಗಿಲು ಹಾಕಿದ್ದ ದೇವಾಲಯದ ಬೀಗವನ್ನೇ ತೆರೆಸಿದ ಪವಾಡಗಾರ ಬಸವಪ್ಪ ಈತ. ಮಂಡ್ಯದ ಗುತ್ತಲು ಲೇಔಟ್‌ ಅರ್ಕೇಶ್ವರದಲ್ಲಿ ಇದ್ದ ರೇಣುಕಮ್ಮ ಯಲ್ಲಮ್ಮ ದೇವಾಲಯಕ್ಕೆ ಕುಟುಂಬ ಕಲಹದಿಂದ ಐದು ವರ್ಷ ಬೀಗ ಬಿದ್ದಿತ್ತು. ಮೂರ್ತಿಯನ್ನೇ ಅರ್ಚಕ ಮನೆಗೆ ಕೊಂಡೊಯ್ದಿದ್ದ. ಈ ಬಸವಪ್ಪ, ಆತನ ಮನೆಗೆ ತೆರಳಿ, ಮೂರ್ತಿಯನ್ನು ದೇವಾಲಯಕ್ಕೆ ತರುವಂತೆ ಮಾಡಿ, ದೇವಾಲಯದ ಬಾಗಿಲು ತೆರೆಸಿದ್ದ. ಜನರೆಲ್ಲ ಈ ಪವಾಡವನ್ನು ನೋಡಿ ಬೆರಗಾಗಿದ್ದರು.

Tap to resize

Latest Videos

undefined

 

ಜಾತಕ ಹೀಗಿದ್ದರೆ ಸಂತಾನ ದೋಷ್ ಗ್ಯಾರಂಟಿ
 

ಈ ಬಸವಣ್ಣ ಕೂಡ ಹಿಂದೊಮ್ಮೆ ಕುಡಿದು ಬಂದು ಕಿಡಿಗೇಡಿತನ ತೋರಿಸಿದ್ದ ಕಿಡಿಗೇಡಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಹೊಲದಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ. ಜೊತೆಗೆ ಈ ಬಸವಣ್ಣ, ಕಾಯಿಲೆಯಿಂದ ನರಳುತ್ತ ತನ್ನ ಬಳಿಗೆ ಬಂದ ಶಿಶುಗಳಿಗೆ, ಸಂಕಷ್ಟದಲ್ಲಿರುವವರಿಗೆ ತಲೆ ಅಲುಗಾಡಿಸಿ ಹೂವು ಉದುರಿಸಿ ಕೊಡುತ್ತಾನೆ. ಅದನ್ನು ಪಡೆದವರು ಗುಣಮುಖರಾಗಿದ್ದಾರೆ ಎನ್ನಲಾಗುತ್ತದೆ. ಈತ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಗ್ರಾಮದ ದರ್ಗಾಗೆ ತೆರಳಿ ಅಲ್ಲಿ ಪೂಜೆ ಪಡೆದಿದ್ದ. ಗ್ರಾಮದ ಉತ್ಸವದ ವೇಳೆ ಮನೆಮನೆಗೆ ತೆರಳಿ ಪೂಜೆ ಸ್ವೀಕರಿಸುವ ಬಸವಣ್ಣ, ದಾರಿಯಲ್ಲಿದ್ದ ದರ್ಗಾಗೆ ತೆರಳಿ, ಎಲ್ಲರ ವಿಸ್ಮಯಕ್ಕೆ ಕಾರಣನಾಗಿದ್ದ. ಅಲ್ಲಿದ್ದವರು ಪೂಜೆ ಸಲ್ಲಿಸದೆ ಹೊರಗೆ ಬರಲು ಆತ ಒಪ್ಪಿರಲೇ ಇಲ್ಲ! ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ, ಅಳುತ್ತಿದ್ದ ಮಗುವೊಂದರ ತೊಟ್ಟಿಲನ್ನು ಕೊಂಬಿನಿಂದ ತೂಗಿ ತೂಗಿ ಮಲಗಿಸಿ ನಿದ್ರೆ ಮಾಡಿಸಿ, ಅಚ್ಚರಿಗೆ ಕಾರಣವಾಗಿದ್ದ ಈ ಬಸವಣ್ಣ.

 

ನಿಮ್ಮ ಜನ್ಮರಾಶಿಗೆ ಹೊಂದುವ ಡ್ರೆಸ್ ಧರಿಸಿದ್ರೆ ಲಕಲಕ!

 

ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಬಸವ, ಇನ್ನೊಂದು ಇಂಥದೇ ಪವಾಡ ನಡೆಸುವ ಸಾಮಥ್ರ್ಯ ಹೊಂದಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಈತ, ದೇವಾಲಯವೊಂದರ ಗುಡ್ಡಪ್ಪನನ್ನು ನೇಮಿಸಿ ಜನಪ್ರಿಯನಾಗಿದ್ದ.ಮಂಡ್ಯದ ಹೊಸಹಳ್ಳಿ- ರಾಮಹಳ್ಳಿಯ ಶ್ರೀ ತಂಪಿನ ಮಾರಮ್ಮ ದೇವಸ್ಥಾನಕ್ಕೆ, ನೂರಾರು ಜನರ ಗುಂಪಿನ ನಡುವೆ ನಿಂತಿದ್ದ ಒಬ್ಬ ವ್ಯಕ್ತಿಯನ್ನು ಗುಡ್ಡಪ್ಪ ಸ್ಥಾನಕ್ಕೆ ಸೂಚಿಸಿ, ನೆರೆದವರು ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿತ್ತು. ಶುದ್ದಲೂರಿನ ಮಾರಮ್ಮ ದೇವಾಲಯದ ಅರ್ಚಕರ ನೇಮಕಾತಿ ವಿಷಯ ಕಗ್ಗಂಟಾಗಿ ೧೮ ವರ್ಷಗಳಿಂದ ಹಾಗೆಯೇ ಉಳಿದಿತ್ತು. ಬಸವ ತನ್ನ ಕೊಂಬಿನಿಂದ ವ್ಯಕ್ತಿಯನ್ನು ಅರ್ಚಕ ಸ್ಥಾನಕ್ಕೆ ಸೂಚಿಸಿದೆ.

 

ಅಮಿತಾಭ್‌, ಸಲ್ಮಾನ್‌, ರಾಣಿ ಮುಖರ್ಜಿ ಈ ಹರಳು ಧರಿಸಿ ಸ್ಟಾರ್‌ಗಳಾದರು

 

ಚಿಕ್ಕರಸಿನಕೆರೆ ಹಾಗೂ ಕಾವಣಾಪುರದ ಮತ್ತು ಜಯಪುರದ ಮೂರೂ ಬಸವಪ್ಪಗಳೂ ಹಲವು ವರ್ಷಗಳಿಂದ ಸುತ್ತಮುತ್ತಲೂ ಪವಾಡದ ಬಸವಪ್ಪಗಳೆಂದೇ ಖ್ಯಾತಿ ಪಡೆದಿವೆ. ಈ ವ್ಯಾಪ್ತಿಯಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳು ಇದ್ದರೂ ಅದನ್ನು ಬಗೆಹರಿಸಲು ಈ ಬಸವಪ್ಪಗಳನ್ನು ಕರೆಲಸಾಗುತ್ತದೆ, ಅನೇಕ ವರ್ಷಗಳಿಂದ ಪೊಲೀಸ್‌ ಸ್ಟೇಶನ್‌, ಕೋರ್ಟ್‌ ಎಂದು ಅಲೆದಾಡಿ ಪರಿಹಾರ ಕಾಣದ ಸಮಸ್ಯೆಗಳು ಬಸವಣ್ಣದ ಒಂದು ಕೊಂಬಿನ ಸೂಚನೆ, ತಲೆ ಅಲುಗಿಸುವ ಆಜ್ಞೆ, ಕಾಲು ಮುಂದಿಡುವ ಅಥವಾ ಹಿಂದಿಡುವ ನಿಲುವು ಇತ್ಯಾದಿಗಳ ಮೂಲಕ ಕ್ಷಣಾರ್ಧದಲ್ಲಿ ಪರಿಹಾರ ಆಗುತ್ತಿವೆ. ಇದು ವಿಶೇಷವೇ ಅಲ್ಲವೇ!

click me!