ಈ ರಾಶಿಯವರಿಂದು ಎಚ್ಚರದಿಂದ ಇರುವುದು ಒಳಿತು

First Published Jul 6, 2018, 7:07 AM IST
Highlights

ಈ ರಾಶಿಯವರಿಂದು ಎಚ್ಚರದಿಂದ ಇರುವುದು ಒಳಿತು

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ನಿಮ್ಮ ದಿನವನ್ನು ಪ್ರಾರಂಭೀಸುವ ಮುನ್ನ ಸೂರ್ಯ ದರ್ಶನ 10 ನಿಮಿಶಗಳ ಕಾಲ ಮಾಡಲೇ ಬೇಕು. ಆನಂತರವೇ ದಿನ ಪ್ರಾರಂಭ ಮಾಡಿ. ಇಂದು ನಿಮ್ಮ ರಾಶಿಯಿಂದ ವ್ಯಯ ಸ್ಥಾನದಲ್ಲಿ ಚಂದ್ರನಿದ್ದಾನೆ. ಮಾನಸಿಕ ಅಶಾಂತಿ, ಮಕ್ಕಳಿಂದ ಕಿರಿಕಿರಿ, ತಂದೆ ಹಾಗೂ ಸಹೋದರರಲ್ಲಿ ಭಿನ್ನಾಭಿಪ್ರಾಯ ಮತ್ತೆ ಹಾಗೆಯೇ ಸರಿಹೋಗುತ್ತದೆ.   

ದೋಷಪರಿಹಾರ : ಸೂರ್ಯ ಮಂತ್ರೋಪಾಸನೆ ಮಾಡಿ. ಓಂ ಆದಿತ್ಯಾಯ ನಮ: ಹೇಳಿಕೊಳ್ಳಿ.

ವೃಷಭ : ಇಂದು ನೀವು ಪಾರ್ವತಿ ದೇವಸ್ಥಾನಕ್ಕೆ ಹೂವು ನಿಮಗೆ ಸಾಧ್ಯವಾದಷ್ಟು ಕೆಂಪು ಹೂವು ಹಾಗೂ ಬಿಳಿ ಹೂವನ್ನ ಸಮರ್ಪಿಸಿ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ಇಂದು ನಿಮ್ಮ ಸಹೋದರಿಯರಿಂದ ಸಹಾಯ ಹಾಗೂ ನಿಮ್ಮ ಮಿತ್ರರಿಂದ ಸಹಾಯದೊರೆಯಲಿದೆ.  

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಸ್ಮರಣೆ ಮಾಡಿ

ಮಿಥುನ : ಸ್ನಾನವಾದ ನಂತರ ಒಂದು ಮಾರು ತುಳಸಿ ಹಾರವನ್ನು ವಿಷ್ಣು ದೇವಾಲಯಕ್ಕೆ ಕೊಟ್ಟು ಬಂದ ನಂತರವೇ ನಿಮ್ಮ ದಿನ ಪ್ರಾರಂಭವಾಗಲಿ. ಇಂದು ನಿಮ್ಮ ಮನೆಯ ಸ್ತ್ರೀಯರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ನಿಮ್ಮ ಕುಟುಂಬದಲ್ಲಿ ಅಂದರೆ ಮಡದಿಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಗಲಾಟೆಗೆ ಆಸ್ಪದ ಕೊಡಬೇಡಿ. 

ದೋಷ ಪರಿಹಾರ : ಲಕ್ಷ್ಮೀ ಸಹಿತ ಶ್ರೀನಿವಾಸ ದರ್ಶನ ಮಾಡಿ. 

ಕಟಕ : ದಿನ ಪ್ರಾರಂಭಿಸುವ ಮುನ್ನ ಓಂ ಶಂಕರಾರ್ಧಶರೀರಿಣೇ ನಮ: ಮಂತ್ರವನ್ನು 58 ಬಾರಿ ಪಠಿಸಿ. ಇಂದು ನಿಮ್ಮ ಹಳೆ ಮಿತ್ರರು ಸಿಗಲಿದ್ದಾರೆ. ಕೋರ್ಟು ಕಚೇರಿ ಕೆಲಸದಲ್ಲಿ ಸ್ವಲ್ಪ ಆಶಾಭಾವನೆ ಮೂಡುತ್ತದೆ. ಆದರೆ ಧನ ನಷ್ಟ. ಸ್ವಲ್ಪ ತಲೆ ನೋವಿನ ದಿನವೂ ಆಗಿದೆ.
  
ದೋಷ ಪರಿಹಾರ : ಲಲಿತಾ ದೇವಿಯ ಉಪಾಸನೆ ಮಾಡಿ.   

ಸಿಂಹ : ಆತ್ಮೀಯರೇ ನಿಮ್ಮ ದಿನವನ್ನು ಪ್ರಾರಂಭ ಮಾಡುವ ಮುನ್ನ ಶಿವ ದೇವಸ್ಥಾನಕ್ಕೆ 1 ಕೇಜಿಯಷ್ಟಾದರೂ ಗೋಧಿಯನ್ನು ಸಮರ್ಪಿಸಿ ಬನ್ನಿ. ತಂದೆಯಿಂದ ಲಾಭ, ಸ್ತ್ರೀಯರಲ್ಲಿ ಕಲಹ, ಮನೆಯಲ್ಲಿ ಗೊಂದಲವಾತಾವರಣ, ಕಚೇರಿಗೆ ಹೊರಡುವ ಮುನ್ನ ಸ್ವಲ್ಪ ಕಿರಿಕಿರಿ.

ದೋಷ ಪರಿಹಾರ : ಓಂ ಶಿವತರಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ

ಕನ್ಯಾ : ಪ್ರಿಯರೇ ಇಂದು ಶ್ರೀನಿವಾಸ ದೇವಸ್ಥಾನಕ್ಕೆ ಸ್ವಲ್ಪ ಕೈಲಾದಷ್ಟು ತುಪ್ಪ ಸೇವೆ ಮಾಡಿ. ಮಿತ್ರರು ನಿಮ್ಮ ಧನ ನಷ್ಟವನ್ನು ತುಂಬುತ್ತಾರೆ. ಸಹಾಯವಿದೆ. ಉತ್ತಮ ದಿನವಾಗಿರಲಿದೆ. ವಿದ್ಯಾರ್ಥಿಗಳಿಗೆ ಸಹೋದರರಿಂದ ಸಮಸ್ಯೆ, ಅಂಥಾ ಸಮಸ್ಯೆ ಏನೂ ಇಲ್ಲ.
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಣೆಯೇ ಉತ್ತಮ ಫಲ ಕೊಡುತ್ತದೆ. 

ತುಲಾ :  ದಿನದ ಪ್ರಾರಂಭಕ್ಕೆ ಮುನ್ನ ಗುರು ದರ್ಶನ ಮಾಡಿ ಇಲ್ಲಾ ತಂದೆ ತಾಯಿಗಳಿಗೆ ನಮಸ್ಕಾರ ಮಾಡಿ. ಇಂದು ಕಾರ್ಯಾನುಕೂಲವಿದೆ. ಆದರೆ ಆತ್ಮ ಶಕ್ತಿ ಸ್ವಲ್ಪ ಕುಂದಲಿದೆ. ಅಷ್ಟೇ ಅಲ್ಲ ಧೃತಿಗೆಡುವ ಅಂದರೆ ಧೈರ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಆರೋಗ್ಯವೂ ವ್ಯತ್ಯಯವಾಗಲಿದೆ.  

ದೋಷ ಪರಿಹಾರ : ಗುರು ಪ್ರಾರ್ಥನೆಯೇ ಸರ್ವ ದೋಷ ನಿವಾರನೆ ಮಾಡುತ್ತದೆ. 

ವೃಶ್ಚಿಕ : ಇಂದು ಬೆಳಗ್ಗೆ ಎದ್ದ ಕೂಡಲೇ ಸುಬ್ರಹ್ಮಣ್ಯ ದರ್ಶನ ಮಾಡಿ. 5 ನಮಸ್ಕಾರ ಮಾಡಿ. ಇಂದು ನಿಮಗೆ ಮಾತಿನಿಂದ ಸಮಸ್ಯೆ, ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಇತರರ ಸಲಹೆ ಸ್ವೀಕರಿಸಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ  

ಧನಸ್ಸು : ದಿನದ ಪ್ರಾರಂಭಕ್ಕೂ ಮುನ್ನ ಸೂರ್ಯನಿಗೆ 11 ನಮಸ್ಕಾರ ಮಾಡಿ.  ಇಂದು ಆರೋಗ್ಯದಲ್ಲಿ ಕೊಂಚ ಏರುಪೇರು. ಕಳ್ಳರ ಭಯ, ಲಾಭ ಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಲಾಭದ ದಿನ, ಕುಟುಂಬದವರ ಸಹಾಯ ಸಿಗಲಿದೆ.

ದೋಷ ಪರಿಹಾರ : ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.

ಮಕರ :  ಇಂದು ಶಿವ ಧ್ಯಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸಿ. ಶುಭದಿನವಾಗಿರಲಿದೆ. ಹೊಸ ಕಾರ್ಯಕ್ಕೆ ಉತ್ಸಾಹಿಗಳಾಗುತ್ತೀರಿ. ಶ್ರಮದಿಂದ ಗೆಲುವು ದುಪ್ಪಟ್ಟಾಗಲಿದೆ. ಬಡ್ತಿ ಸಿಗಲಿದೆ.
  
ದೋಷ ಪರಿಹಾರ : ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ 

ಕುಂಭ :   ಪ್ರಿಯರೇ ನೀವು ಇಂದು ನಿಮ್ಮ ಕಾರ್ಯವನ್ನು ಪ್ರಾರಂಭಿಸುವ ಮುನ್ನ ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ. ನಿಮ್ಮ ಮನೆಯಲ್ಲಿ ಸ್ತ್ರೀಯರ ಸಹಾಯ, ತಾಯಿ ನೆರವಾಗುತ್ತಾಳೆ. ಸಮಾಧಾನದ ದಿನ. ಒಂದು ವಸ್ತು ಖರೀದಿಸುವ ಮನಸ್ಸಾಗಲಿದೆ. ಮಿತ್ರರ ಸಹಾಯವೂ ಇರಲಿದೆ. 

ದೋಷ ಪರಿಹಾರ : ಶಿವ ಸ್ಮರಣೆಯೇ ಉತ್ತಮ
  
ಮೀನ : ಎದ್ದ ಕೂಡಲೇ ಶ್ರೀ ಚಕ್ರಕ್ಕೆ ನಮಸ್ಕಾರ ಮಾಡಿ.  ಇಂದು ನಿಮ್ಮ ದೇಹದಲ್ಲಿ ವ್ಯತ್ಯಾಸವಾಗುತ್ತದೆ. ತಂದೆ ನಿಮ್ಮನ್ನು ಔಷಧೋಪಚಾರ ಮಾಡಿ ಸಲಹುತ್ತಾರೆ. ನಿಮ್ಮ ಬಂಧುಗಳ ಆಗಮನ. 
  
ದೋಷ ಪರಿಹಾರ : ತೊಗರಿ ಬೇಳೆ ದಾನ ಮಾಡಿ

ಗೀತಾಸುತ.

click me!