
ಇಂದು ವಿಚಾರವೊಂದರಿಂದ ನೀವು ಕೊರಗಬೇಕಾದ ಸ್ಥಿತಿ
ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಧನಸ್ಸು ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.
ಮೇಷ ರಾಶಿ : ಇಂದು ನಿಮ್ಮ ಮನಸ್ಸು ಸ್ವಲ್ಪ ಆತಂಕದಿಂದ ಇರಲಿದೆ. ಮನೋ ವಿಕಾರವಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳು ಕಷ್ಟವೆನಿಸುತ್ತವೆ. ಯಾವುದರಲ್ಲೂ ನಿರಾಸಕ್ತಿ ಮೂಡುತ್ತದೆ. ಸಾಮಾನ್ಯ ದಿನ.
ದೋಷಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ : ಇಂದು ನಿಮ್ಮಲ್ಲಿ ಒಂದು ಹೊಸ ಉತ್ಸಾಹ ಮೂಡುತ್ತದೆ. ಸಹೋದರಿಯರು ನಿಮಗೆ ಗೈಡ್ ಮಾಡ್ತಾರೆ. ನಿಮ್ಮ ಆಪ್ತ ಸಂಗಾತಿ ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತಾರೆ. ಅಂದಹಾಗೆ ಇಂದು ತಾಯಿಯೊಡನೆ ಒಂದು ಗಂಭೀರ ವಿಯಷ ಚರ್ಚಿಸುವ ಸಾಧ್ಯತೆ ಇದೆ.
ದೋಷ ಪರಿಹಾರ : ದುರ್ಗಾ ದೇವಿಗೆ 5 ನಮಸ್ಕಾರ ಹಾಕಿಬನ್ನಿ.
ಮಿಥುನ : ಇಂದು ನೀವು ನಿಮ್ಮ ಬುದ್ಧಿ ಶಕ್ತಿಯನ್ನು ಸರಿಯಾಗಿ ಪ್ರಯೋಗ ಮಾಡಲಿದ್ದೀರಿ. ನಿಮ್ಮಲ್ಲಿರುವ ಸದ್ಗುಣ ಇತರರಿಗೆ ಆದರ್ಶವಾಗಲಿದೆ. ಕೆಲ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರತ್ತೆ. ಹೆಚ್ಚು ಯೋಚನೆ ಬೇಡ.
ದೋಷ ಪರಿಹಾರ : ನಾರಾಯಣ ಮಂತ್ರ ಅಥವಾ ಸ್ಮರಣೆ ಮಾಡಿ
ಕಟಕ : ಇಂದು ನಿಮ್ಮ ಮನಸ್ಸು ಸ್ವಲ್ಪ ಖಿನ್ನವಾಗಿರಲಿದೆ. ಒಂದು ವಿಷಯಕ್ಕಾಗಿ ತುಂಬಾ ಕೊರಗುವ ಸಾಧ್ಯತೆ ಇದೆ. ಹತ್ತಿರದ ಬಂಧುಗಳು ಧೈರ್ಯ ತುಂಬುತ್ತಾರೆ. ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಆಗ ನಿಮ್ಮ ನೋವು ಸ್ವಲ್ಪ ಮರೆಯಾಗುತ್ತದೆ.
ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಕ್ಷೀರ ಸಮರ್ಪಣೆ ಮಾಡಿ.
ಸಿಂಹ : ಇಂದು ನೀವು ಮಾಡಿದ ಒಂದೇ ಒಂದು ಉಪಕಾರ ನಿಮ್ಮನ್ನು ಗೌರವಿಸುವಂತೆ ಮಾಡುತ್ತದೆ. ಪುಟ್ಟ ವಿಯಷವನ್ನೂ ಕಡೆಗಾಣಿಸಬೇಡಿ. ಶ್ರದ್ಧೆಯಿಂದಲೇ ಮಾಡಿ. ಆ ಪುಟ್ಟ ಸಂಗತಿಯೇ ನಿಮ್ಮನ್ನು ವಿಶೇಷ ವ್ಯಕ್ತಿಯನ್ನಾಗಿ ಮಾಡುತ್ತದೆ.
ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ.
ಕನ್ಯಾ : ಒಂದು ಪುಟ್ಟ ಸಹಾಯ ಮಾಡುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಜೊತೆಗೆ ನಿಮ್ಮ ರಾಶಿಯವರಲ್ಲಿ ಒಂದು ಗುಣ ಸ್ತ್ರೀಯರನ್ನು ಓಲೈಸುವುದು. ಸ್ತ್ರೀಯರಿಗಾಗಿ ತುಂಬಾ ಶ್ರಮಿಸಬೇಕಾಗುತ್ತದೆ. ನಿಮ್ಮ ಕಾರ್ಯವೂ ಯಶಸ್ವಿಯಾಗಲಿದೆ. ವಾಹನ ತೊಂದೆರೆಯಾಗಬಹುದು.
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ.
ತುಲಾ : ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಇರಲಿದೆ, ನಿಮ್ಮ ಕಾರ್ಯಕ್ಕೆ ಸ್ವಲ್ಪ ಅಡ್ಡಿಗಳೂ ಆಗಲಿವೆ. ಸಜ್ಜನರ ಸಹವಾಸ. ಗ್ರಹಣದ ತಯಾರಿಯಲ್ಲಿ ದಿನ ಕಳೆದುಹೋಗಲಿದೆ.
ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ
ವೃಶ್ಚಿಕ : ಇಂದು ನಿಮ್ಮ ಪಾಲಿಗೆ ಸ್ವಲ್ಪ ನಿರಾಶಾದಾಯಕ ದಿನ, ನಿಮಗೆ ಬರಬೇಕಿದ್ದ ಅಥವ ದಕ್ಕಬೇಕಿದ್ದ ಅವಕಾಶ ಅನ್ಯರ ಕೈ ಸೇರುತ್ತದೆ. ಹತಾಶರಾಗುವ ದಿನ, ನಿಮ್ಮ ದಿನದ ಪ್ರಾರಂಭಕ್ಕೂ ಮುನ್ನ ಸುಬ್ರಹ್ಮಣ್ಯ ಸೇವೆ ಮಾಡಿ.
ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿ
ಧನಸ್ಸು : ಆತ್ಮೀಯರೇ ಇಂದು ಉದ್ಯೋಗದಲ್ಲಿ ಏರುಪೇರು ಕಾಣಬಹುದು, ಮಡದಿಯಿಂದ ತುಂಬು ಸಹಕಾರ, ನಿಮ್ಮ ನೆಚ್ಚಿನ ಸಂಗಾತಿ ನಿಮ್ಮ ಕಾರ್ಯ ಲಾಭಕ್ಕೆ ಸಹಕಾರಿಯಾಗಬಹುದು. ಮಿತ್ರರಿಂದ ಸಹಾಯ ದೊರೆಯಲಿದೆ. ಆಹಾರದಲ್ಲಿ ವ್ಯತ್ಯಯವಾಗಬಹುದು. ಎಚ್ಚರವಹಿಸಿ
ದೋಷ ಪರಿಹಾರ : ಶಿವಾಯನಮ: ಎಂಬ ಪಂಚಾಕ್ಷರಿ ಮಂತ್ರ 108 ಬಾರಿ ಪಠಿಸಿ
ಮಕರ : ಆತ್ಮೀಯರೇ ನಿಮ್ಮ ಸಂಗಾತಿಯಿಂದ ವ್ಯಾಪಾರದಲ್ಲಿ ಲಾಭ, ನೀರಿನ ವ್ಯಾಪಾರಿಗಳಿಗೆ ಲಾಭದ ದಿನ ಉದ್ಯೋಗದಲ್ಲಿ ಉತ್ತಮ ಪ್ರಗತಿ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತೀರಿ. ಹಿರಿಯ ಜೀವವೊಂದು ನಿಮ್ಮನ್ನು ರಕ್ಷಣೆ ಮಾಡುತ್ತದೆ.
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ದೀಪ ಸಮರ್ಪಣೆ ಮಾಡಿದಲ್ಲಿ ನಿಮ್ಮ ಸಮಸ್ಯೆ ಪರಿಹಾರ.
ಕುಂಭ : ನಿಮ್ಮ ರಾಶ್ಯಾಧಿಪತಿ ಶನಿಯುಕ್ತನಾಗಿರುವುದರಿಂದ ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ವ್ಯತ್ಯಯ, ಹಾಗೂ ನಿಮ್ಮ ಧನ ವ್ಯಯವಾಗುವ ಸಾಧ್ಯತೆ ಇದೆ. ನಾಳೆ ಗ್ರಹಣದ ಪ್ರಭಾವ ಇಂದಿನಿಂದಲೇ ಶುರುವಾಗಲಿದೆ. ಆದಷ್ಟು ಶಿವ ಸ್ಮರಣೆಯಲ್ಲಿ ದಿನವನ್ನು ದೂಡಿ.
ದೋಷ ಪರಿಹಾರ : ಶಿವ ಅಥವಾ ಶನಿ ದೇವಸ್ಥಾನಕ್ಕೆ ಎಳ್ಳು ದಾನ ಮಾಡಿ
ಮೀನ : ಸ್ನೇಹಿತರೆ ಇಂದು ನಿಮ್ಮ ದಿನದಲ್ಲಿ ಸಂಪೂರ್ಣ ಬದಲಾವಣೆಯಾಗಬಹುದು, ನೀವು ಯೋಜಿಸಿದ ಕಾರ್ಯ ಇನ್ನೊಬ್ಬರ ಕೈ ಸೇರುವ ಸಾಧ್ಯತೆ ಇದೆ. ದುಷ್ಟ ಜನರ ಸಹವಾಸ ನಿಮ್ಮನ್ನು ಹೈರಾಣು ಮಾಡುತ್ತದೆ. ಆದಷ್ಟು ಹಣ ಕೊಟ್ಟು ಮೋಸಹೋಗಬೇಡಿ.
ದೋಷ ಪರಿಹಾರ : ಗುರು ದರ್ಶನ ಮಾಡಿ
ಗೀತಾಸುತ.