ಈ ರಾಶಿಗೆ ಹಬ್ಬದ ದಿನವು ಲಾಭದಾಯಕ

Published : Nov 08, 2018, 07:06 AM IST
ಈ ರಾಶಿಗೆ ಹಬ್ಬದ ದಿನವು ಲಾಭದಾಯಕ

ಸಾರಾಂಶ

ಸಮಸ್ತ ಓದುಗ ಮಿತ್ರರಿಗೂ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು. ಕಾರ್ತೀಕ ಮಾಸ ನಿಮ್ಮ ಬದುಕಲ್ಲಿ ಹೊಸ ಬೆಳಕನ್ನು ಮೂಡಿಸಲಿ, ಎಲ್ಲರ ಖಜಾನೆ ಭರ್ತಿಯಾಗಲಿ, ಸದ್ಭಾವನೆಗಳು ವೃದ್ಧಿಯಾಗಲಿ, ಬದುಕು ಆನಂದಮಯವಾಗಿರಲಿ. ಸರ್ವರಿಗೂ ಶುಭಾಶಯಗಳು.  

08-11-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಪ್ರತಿಪತ್ ತಿಥಿ
ವಿಶಾಖ ನಕ್ಷತ್ರ 

ರಾಹುಕಾಲ  01.30 ರಿಂದ 02.57
ಯಮಗಂಡ ಕಾಲ  06.17 ರಿಂದ 07.43
ಗುಳಿಕ ಕಾಲ  09.10 ರಿಂದ 10.37
 

ಸಮಸ್ತ ಓದುಗ ಮಿತ್ರರಿಗೂ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು. ಕಾರ್ತೀಕ ಮಾಸ ನಿಮ್ಮ ಬದುಕಲ್ಲಿ ಹೊಸ ಬೆಳಕನ್ನು ಮೂಡಿಸಲಿ, ಎಲ್ಲರ ಖಜಾನೆ ಭರ್ತಿಯಾಗಲಿ, ಸದ್ಭಾವನೆಗಳು ವೃದ್ಧಿಯಾಗಲಿ, ಬದುಕು ಆನಂದಮಯವಾಗಿರಲಿ. ಸರ್ವರಿಗೂ ಶುಭಾಶಯಗಳು.

ಮೇಷ ರಾಶಿ :  ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ತ್ರೀರಿಂದ ಸ್ವಲ್ಪ ಚುಚ್ಚು ಮಾತು ಕೇಳಬೇಕಾಗುತ್ತದೆ, ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಳ್ಳುತ್ತದೆ, ಹಬ್ಬದ ಸಡಗರದಲ್ಲಿ ಮೈಮರೆಯ ಬೇಡಿ, ಮನೆಯಲ್ಲಿ ವಿಷ ಜಂತುಗಳ ಓಡಾಟದಿಂದ ಭಯ ಉಂಟಾಗಲಿದೆ. ಎಚ್ಚರದಿಂದ ಓಡಾಡಿ.
ದೋಷಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ.

ವೃಷಭ : ಆರೋಗ್ಯದಲ್ಲಿ ಚೇತರಿಗೆ, ಸ್ತ್ರೀಯರಲ್ಲಿ ಸೌಮ್ಯತ್ವ  ತುಂಬಿಕೊಳ್ಳಲಿದೆ, ಪ್ರಯಾಸದ ಕೆಲಸಗಳನ್ನೂ ಸಲೀಸಾಗಿ ಮಾಡುವ ದಿನ, ಅನ್ಯರ ಸಹಕಾರ ದೊರೆಯಲಿದೆ, ಸೊಂಟದ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.      
ದೋಷ ಪರಿಹಾರ : ದುರ್ಗಾಪರಮೇಶ್ವರಿಗೆ ಹಾಲಿನ ಅಭಿಷೇಕ ಮಾಡಿಸಿ

ಮಿಥುನ : ಪೂರ್ವಜರು ಮಾಡಿದ ತಪ್ಪಿನಿಂದ ನೀವು ಫಲ ಅನುಭವಿಸಬೇಕಾದ ದಿನ, ನಿಮ್ಮ ಮಕ್ಕಳು ಮಾತುಕೇಳದೆ ಹೋಗುತ್ತಾರೆ, ಆರೋಗ್ಯದಲ್ಲಿ ವ್ಯತ್ಯಯ ಕಾಣುತ್ತೀರಿ, ವೈದ್ಯರ ಸಲಹೆ ಪಡೆಯಿರಿ.
ದೋಷ ಪರಿಹಾರ : ಗಣಪತಿ ದೇವಸ್ಥಾನಕ್ಕೆ ಗರಿಕೆ ಸಲ್ಲಿಸಿ.

ಕಟಕ : ನಿಮ್ಮ ದೇಹದಲ್ಲಿ ಆಯಾಸ, ಸುಸ್ತು ಉಂಟಾಗಲಿದೆ, ಕೆಲವರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ, ಹಿರಿಯರಿಂದ ಮನಸ್ಸಿಗೆ ಬೇಸರ, ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಯ ಕಾಣುತ್ತೀರಿ, ದಾಂಪತ್ಯದಲ್ಲೂ ಸ್ವಲ್ಪ ವಿರಸ ಉಂಟಾಗಲಿದೆ.
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಹಾಲಿನ ಅಭಿಷೇಕ ಮಾಡಿಸಿ

ಸಿಂಹ :  ಸಹೋದರರಲ್ಲಿ ಭಿನ್ನಾಭಿಪ್ರಾಯ, ನಿಮ್ಮ ಅಕ್ಕ ತಂಗಿಯರು ನೆರವಿಗೆ ಬರುತ್ತಾರೆ, ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ, ಮಕ್ಕಳಿಂದ ಅಸಹಕಾರ, ಉದ್ಯೋಗದಲ್ಲಿ ಶತ್ರುಗಳ ಕಾಟ, ಮಾನಸಿಕ ನೆಮ್ಮದಿಗೆ ಲಲಿತಾಸಹಸ್ರನಾಮ ಪಠಿಸಿ

ದೋಷ ಪರಿಹಾರ : ಶಿವಾರಾಧನೆ ಮಾಡಿ

ಕನ್ಯಾ : ನಿಮ್ಮ ಸಹೋದರರಿಗೆ ಗುರು ಸಮಾನರಿಂದ ಅನುಗ್ರಹ, ನಿಮ್ಮ ಕುಟುಂಬಕ್ಕೆ ಧನ ಸಹಾಯ, ಮಿತ್ರರಿಂದ ಕಾರ್ಯಾನುಕೂಲ, ನೀವು ಮಾಡಲಾಗದ್ದನ್ನು ನಿಮ್ಮ ಸಂಗಾತಿ ಮಾಡುತ್ತಾರೆ.  
  
ದೋಷ ಪರಿಹಾರ : ಜಲ ದುರ್ಗೆಯ ಆರಾಧನೆ ಮಾಡಿ

ತುಲಾ :   ಕೆಲವರಿಗೆ ಹಬ್ಬದ ರಜೆ, ಕೆಲವರಿಗೆ ಉದ್ಯೋಗದಲ್ಲಿ ಕಿರಿಕಿರಿ,  ಜಲ ಪ್ರದೇಶದಲ್ಲಿ ವಾಸಿಸುವವರಿಗೆ ಜಂತುಗಳ ಸಮಸ್ಯೆ. ಎಚ್ಚರವಾಗಿರಿ. ಆಂತರಿಕ ಕಲಹ ಮತ್ತೊಂದು ಪ್ರಮಾದ ಉಂಟುಮಾಡುವ ಸಾದ್ಯತೆ ಇದೆ.

ದೋಷ ಪರಿಹಾರ : ದಂಪತಿಗಳಿಗೆ ವಸ್ತ್ರ ದಾನ ಮಾಡಿ

ವೃಶ್ಚಿಕ :  ನಿಮ್ಮ ನಿಪುಣತ್ವದಿಂದ ಶ್ಲಘನೆ ಸಿಗಲಿದೆ, ಆದರೆ ಗಳಿಸಿದ ಹಣ ಸಂಪೂರ್ಣ ವ್ಯಯವಾಗುತ್ತದೆ, ಕಳ್ಳಕಾಕರರ ಭಯ, ನಿರ್ಧಾರಗಳಲ್ಲಿ ತೊಡಕಾಗುವ ಸಂಭವ, ಓಡಾಟದಲ್ಲಿ ತೊಂದರೆ, ಮೂಳೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಚ್ಚರವಾಗಿರಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನಸ್ಸು :  ದೇಹಾಯಾಸ, ಧನವೂ ನಷ್ಟ, ಇಂದು ನಿಮ್ಮ ಪಾಲಿ ಸ್ವಲ್ಪ ಬೇಸರ ಸ್ವಲ್ಪ ಸಮಾಧಾನವಾಗಿರಲಿದೆ, ನಿಮ್ಮ ತಂದೆಯ ಮಾರ್ಗದರ್ಶನ ಅನುಕೂಲವನ್ನು ಉಂಟುಮಾಡುತ್ತದೆ. ಧೈರ್ಯವಾಗಿರಿ.  

ದೋಷ ಪರಿಹಾರ : ಎದ್ದ ತಕ್ಷಣ ಸೂರ್ಯ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿ.

ಮಕರ : ಕೆಲವರಿಗೆ  ಉದ್ಯೋಗದಲ್ಲಿ ಅಧಿಕ ಒತ್ತಡ, ಕಾರ್ಯ ಸಾಧನೆಗೆ ಮೇಲಧಿಕಾರಿಗಳ ಅಡ್ಡಿ, ಬೇಸರದಿಂದ ಕಾರ್ಯದಲ್ಲಿ ತೊಡಕು, ನಿಮ್ಮ ಬಂಧುಗಳ ಸಹಾಯ, ತಾಯಿಯಿಂದ ಅನುಕೂಲ ದೊರೆಯುತ್ತದೆ.
  
ದೋಷ ಪರಿಹಾರ : ಶಿವಾನಂದ ಲಹರಿ ಪಾರಾಯಣ ಮಾಡಿ

ಕುಂಭ :   ನೀವು ಅಂದುಕೊಂಡದ್ದು ನೆರವೇರುವ ಕಾಲ, ಹೊಸ ನಿರ್ಧಾರಗಳಿಗೆ ಚಾಲನೆ ದೊರೆಯುತ್ತದೆ, ಕಾರ್ಯ ಕ್ಷಮನತೆಯಿಂದ ಪ್ರಶಂಸೆ, ನಿಮ್ಮ ಸಲಹೆಗಳು ಇತರರಿಗೆ ಉತ್ತಮ ಫಲ ನೀಡಲಿವೆ, ಪರರ ಹಿತಾಸಕ್ತಿ ನಿಮ್ಮನ್ನು ಕಾಪಾಡಲಿದೆ. 

ದೋಷ ಪರಿಹಾರ : ನರಸಿಂಹ ಸ್ವಾಮಿ ಧ್ಯಾನ ಮಾಡಿ
  
ಮೀನ : ನಿಮ್ಮ ಭಾಗ್ಯದ ಬಾಗಿಲು ತೆಗೆಯಲಿದೆ , ಹಬ್ಬದ ಸಂಭ್ರಮವನ್ನು ಹಿರಿಯರಜೊತೆ ಹಂಚಿಕೊಳ್ಳುವ ಕಾಲ, ಮನಸ್ಸಿಗೆ ಉಲ್ಲಾಸ, ಶುಭದಿನವಾಗಿರಲಿದೆ. ಹೊಸ ಕಾರ್ಯಗಳಲ್ಲಿ ಯಶಸ್ಸು. 
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ವಾಞ್ಮಯೀ.

PREV
click me!

Recommended Stories

ನಾಳೆ ಡಿಸೆಂಬರ್ 12 ರಂದು ಲಕ್ಷ್ಮಿ ನಾರಾಯಣ ಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಅದೃಷ್ಟ
ಶನಿಯಿಂದ ಈ ರಾಶಿಚಕ್ರ ಚಿಹ್ನೆಗಳ ಜೀವನವು 2027 ರವರೆಗೆ ಕಷ್ಟಕರ