ಏಳು ಹೆಜ್ಜೆ ಜತೆಯಾಗಿಟ್ಟು, ಏಳೇಳು ಜನ್ಮಕ್ಕೂ ಜತೆಯಾಗಿರುತ್ತೇವೆ ಎಂದು ಸಾವಿರಾರು ಮಂದಿ ಮುಂದೆ ಪ್ರಮಾಣ ಮಾಡುವ ನವ ದಂಪತಿ ಒಂದೇ ಗೋತ್ರದವರಾಗಿರಬಾರದೆಂಬ ಆಚರಣೆ ಇದೆ. ಏನಿದು, ಈ ಆಚರಣೆ ಹಿಂದಿರೋ ವೈಜ್ಞಾನಿಕ ಕಾರಣ?
ಮದುವೆ ಮಾಡುವಾಗ ಜಾತಕ ನೋಡುವ ಸಮಯದಲ್ಲಿ ಮೊದಲಿಗೆ ಗಮನಿಸುವುದು ಗಂಡು, ಹೆಣ್ಣಿನ ಗೋತ್ರವನ್ನು. ಇಬ್ಬರೂ ಒಂದೇ ಗೋತ್ರದವರಾಗಿದ್ದರೆ ತಕ್ಷಣ ಆ ಜಾತಕಗಳು ರಿಜೆಕ್ಟ್ ಆಗುತ್ತವೆ. ಬೇರೆ ಬೇರೆ ಗೋತ್ರದವರಾಗಿದ್ದರೆ ಮಾತ್ರ ಮುಂದಿನ ಗಣ, ಕೂಟ ಇತ್ಯಾದಿ ಹೊಂದಾಣಿಕೆಗಳನ್ನು ನೋಡಲಾಗುತ್ತದೆ. ಸಾಮಾನ್ಯವಾಗಿ ಒಂದೇ ಗೋತ್ರದವರಿಗೆ ಮದುವೆ ಮಾಡುವುದಿಲ್ಲ. ಇದಕ್ಕೆ ಶಾಸ್ತ್ರದಲ್ಲೂ ನಿಷೇಧವಿದೆ.
ಇದರ ಹಿಂದಿರುವುದು ಜೆನೆಟಿಕ್ಸ್. ಅಂದರೆ ವಂಶವಾಹಿನಿ ವಿಜ್ಞಾನ. ಮನುಷ್ಯರಲ್ಲಿ 23 ಜೊತೆ ಕ್ರೋಮೋಸೋಮ್‌ಗಳಿವೆ. ಇವುಗಳಲ್ಲಿ ಒಂದು ಜೊತೆ ತಂದೆಯಿಂದ, ಮತ್ತೊಂದು ತಾಯಿಯಿಂದ ಬಂದಿರುತ್ತದೆ. ಇವುಗಳಲ್ಲಿ ಒಂದು ಜೊತೆ ಸೆಕ್ಸ್ ಕ್ರೋಮೋಸೋಮ್ ಇರುತ್ತದೆ. ಅದು ಶಿಶುವಿನ ಲಿಂಗವನ್ನು ನಿರ್ಧರಿಸುತ್ತದೆ. ತಂದೆಯಿಂದ ವೈ ಮತ್ತು ತಾಯಿಯಿಂದ ಎಕ್ಸ್ ಕ್ರೋಮೋಸೋಮ್‌ಗಳು ಸೇರಿ ಶಿಶುವಿನ ಲಿಂಗ ನಿರ್ಧರಿಸುತ್ತವೆ. ತಂದೆಯಿಂದ ವೈ ಕ್ರೋಮೋಸೋಮ್ ಗಂಡು ಮಗನಿಗೆ ಮಾತ್ರ ಹರಿದುಬರುತ್ತದೆ. ಹೆಣ್ಣು ಮಗುವಿಗೆ ಬರುವುದಿಲ್ಲ. ನಾನು ಆಂಗೀರಸ ಗೋತ್ರದವನು ಅಂದರೆ, ಆಂಗೀರಸ ಮಹರ್ಷಿಯಲ್ಲಿದ್ದ ವೈ ಕ್ರೋಮೋಸೋಮ್ ನನ್ನವರೆಗೆ ಹರಿದು ಬಂದಿದೆ ಎಂದರ್ಥ.
ಒಂದೇ ಗೋತ್ರದವರು ಮದುವೆಯಾಗಬಾರದು ಎನ್ನುವುದಕ್ಕೆ ವೈಜ್ಞಾನಿಕ ಕಾರಣವಿದೆ. ನಮ್ಮ ಎಲ್ಲ 22 ಕ್ರೋಮೋಸೋಮುಗಳಿಗೆ ಜೊತೆ ಇವೆ. ವೀರ್ಯಾಣು-ಅಂಡಾಣು ರೂಪುಗೊಳ್ಳುವಾಗ ಈ ಕ್ರೋಮೋಸೋಮುಗಳಲ್ಲಿ ಏನಾದರೂ ಏರುಪೇರಾದರೆ, ಅದನ್ನು ಜೊತೆಯಲ್ಲಿರುವ ಕ್ರೋಮೋಸೋಮ್ ಸರಿದೂಗಿಸುತ್ತದೆ. ವೈ ಕ್ರೋಮೋಸೋಮಿನಲ್ಲಿ ಈ ಅನುಕೂಲತೆಯಿಲ್ಲ. ವೈ ಕ್ರೋಮೋಸೋಮುಗಳ ಮೇಲಿರುವ ಶೇ.5 ಜೀನ್‌ಗಳು ತಾಯಿ ಕಡೆಯಿಂದ ಬಂದಿದ್ದು, ಉಳಿದ ಶೇ.95 ತಂದೆಯ ಕಡೆಯಿಂದ ಬಂದಿರುತ್ತದೆ. ಹಾಗಾಗಿ ಮತ್ತೆ ಮತ್ತೆ ಆಂಗೀರಸ ಗೋತ್ರಕ್ಕೆ ಸೇರಿದ ತಾಯಿಯ ಕ್ರೋಮೋಸೋಮುಗಳು ಗರ್ಭಕಟ್ಟಲಾರಂಭಿಸಿದರೆ, ಈ ಶೇ.5 ಕ್ರೋಮೋಸೋಮುಗಳ ಗುಣಮಟ್ಟ ನಶಿಸಲಾರಂಭಿಸುತ್ತದೆ.
ಆಗ ಆನುವಂಶಿಕ ರೋಗಗಳು ಹೆಚ್ಚು ಬರುತ್ತವೆ. ಹಾಗಾಗಿ ಆಂಗೀರಸ ಗೋತ್ರಕ್ಕೆ ಸೇರದ ಹೆಣ್ಣಿನೊಡನೆ ಸಂತಾನವರ್ಧನೆಯನ್ನು ನಡೆಸುವುದುರಿಂದ ವೈ ಕ್ರೋಮೋಸೋಮ್ ವಿನಾಶವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದು. ಆದ್ದರಿಂದಲೇ ಏಕಗೋತ್ರದವರು ಮದುವೆಯಾಗಬಾರದು ಎನ್ನುವುದು.
ತೀರ್ಥದಲ್ಲೇಕೆ ತುಳಸಿ ಹಾಕಿರುತ್ತಾರೆ?
- ಮಹಾಬಲ ಸೀತಾಳಬಾವಿ