Surya Grahan 2022: ನಾಳೆ ದೇಶಾದ್ಯಂತ ಪಾರ್ಶ್ವ ಸೂರ್ಯಗ್ರಹಣ

By Santosh NaikFirst Published Oct 24, 2022, 5:39 PM IST
Highlights

ದೀಪಾವಳಿ ಸಂಭ್ರಮದಲ್ಲಿರುವ ದೇಶದ ಜನತೆಗೆ ಮಂಗಳವಾರದ ಪಾರ್ಶ್ವ ಸೂರ್ಯಗ್ರಹಣಕ್ಕೆ ಸಿದ್ಧರಾಗಿದ್ದಾರೆ. ನಾಳೆ ಸಂಜೆಯ ವೇಳೆಗೆ ಸೂರ್ಯಗ್ರಹಣ ಗೋಚರವಾಗಲಿದೆ. ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗಲಿದೆ.
 

ಬೆಂಗಳೂರು (ಅ. 24):  ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರದ ಹಲವಾರು ಪ್ರದೇಶಗಳಲ್ಲಿ ಮಂಗಳವಾರ  ಭಾಗಶಃ ಸೂರ್ಯಗ್ರಹಣ ಅಥವಾ 'ಸೂರ್ಯ ಗ್ರಹಣ' ಗೋಚರಿಸುತ್ತದೆ. ಈಶಾನ್ಯ ಪ್ರದೇಶದ ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಭಾರತದ ಬಹುತೇಕ ರಾಜ್ಯಗಳು ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ದೇಶಾದ್ಯಂತ ದೀಪಾವಳಿ ಸಂಭ್ರಮದ ನಡುವೆ ಜನತೆ ಪಾರ್ಶ್ವ ಸೂರ್ಹಗ್ರಹಣ ವೀಕ್ಷಿಸಲು ಸಜ್ಜಾಗುತ್ತಿದ್ದಾರೆ. ನಾಳೆ ಸಂಜೆ 5.15 ನಿಮಿಷಕ್ಕೆ ಸೂರ್ಯ ಗ್ರಹಣ ಗೋಚರವಾಗಲಿದೆ. ಈ ಬಾರಿ ತಾರಾಲಯಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶವಿಲ್ಲ ಎಂದು ಮಾಹಿತಿ ನೀಡಲಾಗಿದ್ದು, ಜನ ಮನೆಯಲ್ಲೆ ಕುಳಿತು ವೀಕ್ಷಣೆ ಮಾಡಬೇಕಾಗಿದೆ. ಆದರೆ, ತಾರಾಲಯದ ಯೂಟ್ಯೂಬ್ ಚಾನೆಲ್ ನೇರ ಪ್ರಸಾರ ವ್ಯವಸ್ಥೆ ಇರಲಿದೆ. ಮಧ್ಯಾಹ್ನ 2.30 ರಿಂದ ಯೂಟ್ಯೂಬ್ ಚಾನಲ್ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

www.taralaya.org ಮೂಲಕ ಸೂರ್ಯಗ್ರಹಣ ವೀಕ್ಷಣೆ ಮಾಡಬಹುದು. ಲಡಾಕ್ ನಿಂದ ಸೂರ್ಯಗ್ರಹಣದ ನೇರಪ್ರಸಾರ ಆಗಲಿದೆ. ಯೂ ಟ್ಯೂಬ್ ಚಾನೆಲ್ ಮೂಲಕ ನೆಹರೂ ತಾರಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ಗ್ರಹಣ ಗೋಚರಕ್ಕೆ ಅಡಚಣೆ ಹಿನ್ನಲೆಯಿಂದ ಲಡಾಕ್‌ನಿಂದ  ನೇರಪ್ರಸಾರ ಆಗಲಿದೆ. ಸೂರ್ಯಾಸ್ತದ ಸಮಯದಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ. ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಗ್ರಹಣ ಗೋಚರ ಆಗಲಿದೆ.

Latest Videos

Solar Eclipse: ನಾಳೆ ಹಲವು ಪ್ರಮುಖ ದೇವಾಲಯಗಳು ಬಂದ್; ಕೆಲವೆಡೆ ಸಮಯ ಬದಲಾವಣೆ

ಬರಿಗಣ್ಣಿನಲ್ಲಿ ನೋಡಬೇಡಿ: ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಲ್ಲಿ ನೋಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ಸೌರಕನ್ನಡಕ ಬಳಸಿ ಗ್ರಹಣವನ್ನು ವೀಕ್ಷಿಸುವಂತೆ ನೆಹರೂ ತಾರಾಲಯದಿಂದ ಮಾಹಿತಿ ನೀಡಲಾಗಿದೆ.

Surya Grahan 2022: ಅನೇಕ ವಿಕೋಪಗಳನ್ನು ಸೃಷ್ಟಿ ಮಾಡುತ್ತೆ: ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀ ಭವಿಷ್ಯ

ದೇಶದ ಪ್ರಮುಖ ನಗರಗಳಲ್ಲಿ ಗ್ರಹಣ ಗೋಚರದ ಸಮಯ

ನಗರ ಸಮಯ
ದೆಹಲಿ 4.30 ರಿಂದ 5.42
ಮುಂಬೈ 4.49ರಿಂದ 6.09
ಚೆನ್ನೈ 5.14ರಿಂದ 5.44
ಕೋಲ್ಕತ್ತಾ 4.52 ರಿಂದ 5.03
ತಿರುವನಂತಪುರಂ 5.29ರಿಂದ 6.02
ಕನ್ಯಾಕುಮಾರಿ 5.32ರಿಂದ 6.00

ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೊತ್ತಿಗೆ ಗ್ರಹಣ ಗೋಚರವಾಗಲಿದೆ ?

ನಗರ ಸಮಯ
ಬೆಂಗಳೂರು  5.12 ರಿಂದ 5.49
ಮೈಸೂರು 5.13 ರಿಂದ 5.51
ಧಾರವಾಡ 5.01 ರಿಂದ 5.47
ರಾಯಚೂರು 5.01ರಿಂದ 5.47
ಬಳ್ಳಾರಿ 5.04 ರಿಂದ 5.48
ಬಾಗಲಕೋಟೆ 5.00 ರಿಂದ 5.47
ಮಂಗಳೂರು 5.10 ರಿಂದ 5.50
ಕಾರವಾರ 5.03 ರಿಂದ 5.48


 

click me!