ವೈಕುಂಠ ಏಕಾದಶಿ: ಆಸ್ತಿಕರಿಗೂ ಸೈ, ನಾಸ್ತಿಕರಿಗೂ ಜೈ

By Web DeskFirst Published Dec 18, 2018, 11:58 AM IST
Highlights

ವಿಷ್ಣುವಿನ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಯಾವ ದೇವಾಲಯದಲ್ಲಿ ನೋಡಿದರೂ ವಿಶೇಷ ಪೂಜೆ ಜತೆಗೆ ಭಕ್ತರು ಉಪವಾಸ, ಜಾಗರಣೆ ಹಾಗೂ ಜಪದಲ್ಲಿ ನಿರತರಾಗಿರುತ್ತಾರೆ. ಈ ದಿನ ಪರಮಾತ್ಮನ ದರ್ಶನ ಪಡೆಯುವ ಜನರು ಜೀವನ ಸಾರ್ಥಕವಾಯಿತೆಂದೇ ಭಾವಿಸುತ್ತಾರೆ.

ಆಚರಣೆ ಹೇಗಿರಬೇಕು?

ಕೆಲವರ ನಂಬಿಕೆಯಂತೆ ಹರಿ ಹೆಸರು ಹೇಳಿ ಯಾವ ಕೆಲಸ ಮಾಡಿದರೂ, ಅವನಿಗೆ ನೇರವಾಗಿ ಸಲ್ಲುತ್ತದೆ ಎಂಬುವುದು ನಂಬಿಕೆ. ಅಷ್ಟೇ ಅಲ್ಲದೆ ಇಂದು ಸತ್ತವರು ಏಳು ದ್ವಾರಗಳನ್ನು ದಾಟಿ ನೇರವಾಗಿಯೇ ಆ ವಿಷ್ಣುವಿನ ಪಾದ ತಲುಪುತ್ತಾರೆಂದೇ ಭಾವಿಸುತ್ತಾರೆ. ಇಂದು ಉಪವಾಸ ಮಾಡಿದರೆ ವರ್ಷದಲ್ಲಿ ಬರುವ 23 ಏಕಾದಶಿಗೆ ಸಮವಾಗಿದ್ದು, ಹಿಂದೂಗಳಿಗೆ ವಿಶೇಷವಾದ ಈ ದಿನವನ್ನು ಜೈನರೂ ಆಚರಿಸುತ್ತಾರೆ.

ಪೌರಾಣಿಕ ಹಿನ್ನೆಲೆ ಏನು?

ಪದ್ಮ ಪುರಾಣದಲ್ಲಿ ಉಲ್ಲೇಖಿಸಿದಂತೆ ಭಗವಾನ್ ವಿಷ್ಣುವು ಸ್ತ್ರೀ ಶಕ್ತಿ ರೂಪವನ್ನು ಹೊಂದಿ ಈ ದಿನ ಮುರಾನ್ ಎಂಬ ಅಸುರನನ್ನು ವಧಿಸಿದ್ದ. ಆ ಮೂಲಕ ದೇವತೆಗಳನ್ನು ರಕ್ಷಿಸಿದ್ದ. ಅದಕ್ಕೆ ಏಕಾದಶಿ ದಿನದಂದು ಉಪವಾಸ ಮಾಡಿದರೆ, ನೇರವಾಗಿ ವೈಕುಂಠಕ್ಕೇ ಹೋಗುತ್ತಾರೆಂಬ ನಂಬಿಕೆ ಇದೆ. ಮುರ ಅಸುರನು ಅಕ್ಕಿಯಲ್ಲಿ ಅಡಗಿ ಕುಳಿತಿದ್ದ ಎಂಬ ನಂಬಿಕೆಯಿದ್ದು, ಆ ಕಾರಣಕ್ಕೆ ಈ ದಿನ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬಾರದು.

  • ಹರಿಯನ್ನು ಜಪಿಸಿ... ವೇದ ಪುರಾಣದ ಪ್ರಕಾರ ಕಲಿಯುಗದಲ್ಲಿ ಶ್ರೀ ಕೃಷ್ಣನನ್ನು ಜಪಿಸಿದರೆ, ಶ್ರೇಷ್ಠ ಎಂಬ ನಂಬಿಕೆ ಇದೆ. ಈ ಮಂತ್ರ ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಹಾಗೂ ಮಾನಸಿಕವಾಗಿ ಮನುಷ್ಯನನ್ನು ಗಟ್ಟಿಯಾಗಿಸುತ್ತದೆ.
  • ಭಗವದ್ ಗೀತ ಓದ ಬೇಕು ಗೀತಾ ಜಯಂತಿಯೂ ವೈಕುಂಠ ಏಕಾದಶಿ ದಿನವೇ ಬರುತ್ತದೆ. ಗೀತ ಜಯಂತಿ ಆಚರಿಸಲು ಕಾರಣ ಏನೆಂದರೆ ಈ ದಿನದಂದು ಶ್ರೀ ಕೃಷ್ಣ ಅರ್ಜುನನಿಗೆ ಆಧ್ಯಾತ್ಮಕ ಜ್ಞಾನ ಕಲ್ಪಿಸುತ್ತಾನೆ.
  • ವಿಷ್ಣುವನ್ನು ದರ್ಶಿಸಿ.... ಇಂದು ವಿಷ್ಣುವಿನ ದೇವಸ್ಥಾನ ಅಥವಾ ಅವನ ಅವತಾರದಲ್ಲಿ ಒಂದಾಗಿರುವ ಗುಡಿಗೆ ಭೇಟಿ ನೀಡಬೇಕು. ದೇವಾಲಯದೊಳಗೆ ಪ್ರವೇಶಿಸಿದಾಕ್ಷಣ ದ್ವಾರವನ್ನು ದಾಟಿ ಹೊರ ಬರಬೇಕು.
  • ಉಪವಾಸ ಕಡ್ಡಾಯ ನೀವು ನಾಸ್ತಿಕರಾದರೂ ಈ ದಿನ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸ ಮಾಡುವರು ಕೆಲವೊಂದು ಆಹಾರವನ್ನು ಮಾತ್ರ ಸೇವಿಸಬೇಕು. ಅಕ್ಕಿ, ಬೇಳೆ ಹಾಗೂ ಭೂಮಿ ಕೆಳಗೆ ಬೆಳೆಯುವ ಆಹಾರ ಸೇವನೆ ಈ ದಿನ ವರ್ಜ್ಯ.
click me!
Last Updated Dec 18, 2018, 12:36 PM IST
click me!