ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?

Published : Dec 15, 2018, 06:50 AM IST
ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?

ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ದಾಂಪತ್ಯದಲ್ಲಿ ಹೊಂದಾಣಿಕೆ, ಸಾಮರಸ್ಯ, ರಾಜಕಾರಣಿಗಳಿಂದ ಕ್ಷೇತ್ರ ಸಂಬಂಧಿ ಕೆಲಸಗಳ ಅನುಕೂಲ, ಶುಭ ದಿನವಾಗಿರಲಿದೆ. ಮನಸ್ಸಿನಲ್ಲಿ ಉಲ್ಲಾಸ ಸಂಗಾತಿಯಿಂದ ಸಂತಸದ ಮಾತುಗಳು. 
  
ದೋಷಪರಿಹಾರ :  ತೊಗರಿ ಬೇಳೆಯನ್ನು ದಾನ ಮಾಡಿ.

ವೃಷಭ :  ಇಂದು ನಿಮ್ಮ ಸಹೋದರಿ ನಿಮ್ಮ ಹಣ ವ್ಯಯಕ್ಕೆ ಕಾರಣವಾಗಬಹುದು, ನಿಮ್ಮ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯೂ ಆಗಬಹುದು. ಮಂಡಿ ಹಾಗು ತೊಡೆ ಭಾಗದಲ್ಲಿ ನೋವಾಗುವ ಸಾಧ್ಯತೆ ಇರುತ್ತದೆ. ವೈದ್ಯರನ್ನು ಭೇಟಿ ಮಾಡಿ. 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ.

ಮಿಥುನ :  ಇಂದು ನಿಮ್ಮ ಹಣ ದ್ವಿಗುಣವಾಗಿ ಬರಲಿದೆ. ನೀರಿನ ವ್ಯಾಪಾರಿಗಳಿಗೆ  ವಿಶೇಷ ಲಾಭ, ನಿಮ್ಮ ಮಕ್ಕಳು ನಿಮಗೆ ಸಹಾಯಕವಾಗುತ್ತಾರೆ. ಕುಟುಂಬದಲ್ಲಿ ಸ್ವಲ್ಪ ಮಾತಿನ ಘರ್ಷಣೆಯೂ ಆಗಬಹುದು ಎಚ್ಚರವಾಗಿರಿ.

ದೋಷ ಪರಿಹಾರ : ಮಹಾಕಾಳೇಶ್ವರ ದರ್ಶನ ಮಾಡಿ

ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಕಿರಿಕಿರಿ,  ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ವಿರಸ ಭಿನ್ನಾಭಿಪ್ರಾಯಗಳು ಮೂಡಬಹುದು. ಮಾನಸಿಕವಾಗಿ ನೀವು ಎದೆಗುಂದುವ ಸಾಧ್ಯತೆಯೂ ಇದೆ. ದುರ್ಗಾ ದೇವಿ ದರ್ಶನ ಮಾಡಿ
  
ದೋಷ ಪರಿಹಾರ : ಲಲಿತಾ ಸಹಸ್ರನಾಮ ಪಠಿಸಿ

ಸಿಂಹ : ನಿಮ್ಮ ಮನಸ್ಸಿಗೆ ಭಾರವಾಗುವ ದಿನ, ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಯ, ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟವಾಗಬಹುದು, ಮಾತಿನಲ್ಲಿ ಹಿಡಿತವಿರಲಿ. 

ದೋಷ ಪರಿಹಾರ : ಶಿವನಿಗೆ ಬಿಲ್ವಾರ್ಚನೆ ಮಾಡಿಸಿ

ಕನ್ಯಾ : ಇಂದು ನಿಮ್ಮ ಪಾಲಿಗೆ ಧನಾಗಮನ, ನಿಮ್ಮ ಬಂಧುಗಳ ಆಗಮನವೂ ಇದೆ, ಪ್ರಯಾಣದಲ್ಲಿ  ಸಹಾಯ,  ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಸಂಭವಿಸುತ್ತದೆ. ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ.
  
ದೋಷ ಪರಿಹಾರ : ಪಂಚಾಕ್ಷರಿ ಜಪ ಪಠಿಸಿ

ತುಲಾ :  ನಿಮ್ಮ ದೇಹದಲ್ಲಿ ಚೇತರಿಕೆ, ಆರೋಗ್ಯ ವೃದ್ಧಿ ಕೂಡ ಇದೆ. ಆದರೆ ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಜೊತೆಗೆ ನಿಮ್ಮ ಮನೆ  ಜಾಗದಲ್ಲಿ ಅಥವಾ ನಿಮ್ಮ ವಾಹನದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ.

ದೋಷ ಪರಿಹಾರ : ಗಣಪತಿಗೆ ಮೋದಕ ಸಮರ್ಪಣೆ ಮಾಡಿ

ವೃಶ್ಚಿಕ : ಮನಸ್ಸಿಗೆ ಸಮಾಧಾನದ ದಿನ, ಮನೆ ಕೆಲಸಗಳಲ್ಲಿ ನಿರಾಸಕ್ತಿ ಇದ್ದು ನಿಮ್ಮ ಸುಖ ಸಂತೋಷಕ್ಕೆ ಹೆಚ್ಚು ಗಮನ ಕೊಟ್ಟು ವಿಹಾರ ಹಾಗೂ ಮನೋರಂಜನೆಗಳಲ್ಲಿ ಭಾಗಿಯಾಗುತ್ತೀರಿ. 

ದೋಷ ಪರಿಹಾರ : ನಾಗ ದೇವರ ಪ್ರಾರ್ಥನೆ ಮಾಡಿ

ಧನಸ್ಸು : ನಿಮ್ಮ ಮಗಳು ನಿಮ್ಮ ಸಹಕಾರಕ್ಕೆ ಬರುತ್ತಾಳೆ, ನಿಮ್ಮ ಆದಾಯ ವೃದ್ಧಿಸುತ್ತದೆ, ನಿಮ್ಮ ಅಕ್ಕಪಕ್ಕದವರು ನಿಮ್ಮ ಅನುಕೂಲಕ್ಕೆ ಬರುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡುವ ಸಮಯ ಒದಗಲಿದೆ.

ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ

ಮಕರ :  ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ, ನಿಮ್ಮ ಮನೆ ಜಾಗದಲ್ಲಿ ನೀರು ಲಭ್ಯವಾಗುತ್ತದೆ, ಜೊತೆಗೆ ಉದ್ಯೋಗದಲ್ಲಿ ಅಭಿವೃದ್ಧಿ ಲಾಭವೂ ಇರಲಿದೆ. ಉತ್ತಮದಿನವಾಗಿರಲಿದೆ.
  
ದೋಷ ಪರಿಹಾರ : ಎಳ್ಳು ದಾನ ಮಾಡಿ

ಕುಂಭ : ನಿಮ್ಮ  ಆದಾಯ ವೃದ್ಧಿಯಾಗಲಿದೆ. ನಿಮ್ಮ ಸಹೋದರಿ ಸಮಾನರು ನಿಮಗೆ ಅನುಕೂಲ ಮಾಡುವುದಕ್ಕಿಂತ ಕಿರಿಕಿರಿ ಮಾಡುತ್ತಾರೆ. ಉದ್ಯೋಗದಲ್ಲಿ ಭರವಸೆ ಮೂಡುವ ದಿನಗಳು. ಗೆಳೆಯರಿಂದ ಸಹಕಾರ ದೊರೆಯುವ ದಿನ.

ದೋಷ ಪರಿಹಾರ :  ಶಿವನಿಗೆ ಜಲಾಭಿಷೇಕ ಮಾಡಿಸಿ.
  
ಮೀನ : ಇಂದು ನಿಮ್ಮ ಪಾಲಿದೆ ಧನಾಗಮನ, ಕುಟುಂಬ ಸೌಖ್ಯ, ತಾಯಿ ಕಡೆಯಿಂದ ಅನುಕೂಲ, ಮಕ್ಕಳಿಂದಲೂ ಧನ ಲಾಭ, ಉತ್ತಮ ದಿನವಾಗಿರಲಿದೆ. ಸ್ತ್ರೀಯರಿಂದ ಅನುಕೂಲ.
  
ದೋಷ ಪರಿಹಾರ : ದುರ್ಗಾ ದೇವಿ ದರ್ಶನ ಮಾಡಿ

ವಾಞ್ಮಯೀ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ