ಉಡುಪಿಯ ಅಂಬಲ್ಪಾಡಿ ಮಹಾಕಾಳಿ ಶಕ್ತಿ ಅಪಾರ!

By Web DeskFirst Published Dec 27, 2018, 4:01 PM IST
Highlights

ಉಡುಪಿ ಜಿಲ್ಲೆ ಹತ್ತು ಹಲವು ದೇವಸ್ಥಾನಗಳಿಗೆ ಪ್ರಸಿದ್ಧ. ಅದರಲ್ಲಿ ಅಂಬಲ್ಪಾಡಿ ಮಹಾಕಾಳಿ ದೇವಸ್ಥಾನವೂ ಒಂದು. ಈ ದೇವಿ ಮಹಿಮೆ ಏನು?

ಕೃಷ್ಣ ಜನ್ಮಸ್ಥಳ ಉಡುಪಿಯಲ್ಲಿರುವ ಅಂಬಲ್ಪಾಡಿಯೂ ಬಹಳ ಶಕ್ತಿ ಹೊಂದಿರುವ ಪುಣ್ಯ ಕ್ಷೇತ್ರ. ಇಲ್ಲಿನ ಮಹಾಕಾಳಿ ದೇವಿ ಮಹಿಮೆಅಪಾರ. ಏನೀ ದೇವಿ ಮಹಾತ್ಮೆ? 

  • ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ತುಳುವಿನಲ್ಲಿ ಬೆಟ್ಟದ ತುದಿ ಎಂದರ್ಥ. ಅಂದರೆ ಬೆಟ್ಟದ ಮೇಲಿರುವ ತಾಯಿ ಎಂದರ್ಥ. 
  • ಪ್ರತಿ ಶುಕ್ರವಾರ ಸಂಜೆ 5.00 ರಿಂದ 9.00ರವರೆಗೂ ಭಕ್ತರು ಈ ದೇವಿಯೊಂದಿಗೆ ಮಾತನಾಡಬಹುದು. ಈ ರೀತಿ ಮಾಡಾಡುವುದನ್ನು ಪಾತ್ರಿ ಎನ್ನುತ್ತಾರೆ. ಈ ವೇಳೆ ಜನರು ಅವರು ವೈಯಕ್ತಿಕ ಜೀವನದ ತೊಂದರೆಯನ್ನು ದೇವಿಯೊಂದಿಗೆ ಹಂಚಿಕೊಳ್ಳುತ್ತಾರೆ.
  • ಇಲ್ಲಿ ನಡೆಯುವ ತರ್ಥಿ ಸ್ನಾನ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಸಪ್ತ ಋಷಿ ಪಾರಾಯಣ, ಚಂದ್ರಿಕಾ ಹೋಮ, ರಕ್ಷ ಯಂತ್ರ ಹಾಗೂ ಮಹಾ ಪೂಜೆ ವಿಶೇಷವಾದವು. 
  • ಮಹಾಕಾಳಿ ಮೂರ್ತಿಯನ್ನು ಮರದಿಂದ ಮಾಡಿದ್ದು, 6 ಅಡಿ ಎತ್ತರವಿದೆ. ಸಾಮಾನ್ಯವಾಗಿ ಶಕ್ತಿ ಮಾತೆ ಗುಡಿ ಸುತ್ತ ಪರಮೇಶ್ವರನ ಸನ್ನಿಧಾನವಿರುತ್ತದೆ. ಆದರೆ ಇಲ್ಲಿ ಲಕ್ಷ್ಮಿ ಜನಾರ್ದನನ ಗುಡಿಯಿದೆ. ಅಷ್ಟೇ ಅಲ್ಲದೆ ಗುಡಿಯ ಸುತ್ತ ಅಯ್ಯಪ್ಪ ಹಾಗೂ ಆಂಜನೇಯನ  ಸನ್ನಿಧಾನವಿದೆ. 

ಎಲ್ಲಿದೆ?

ಈ ದೇವಾಲಯವು ಉಡುಪಿ ಮಠದಿಂದ 2-3 ಕಿಲೋ ಮೀಟರ್ ಅಂತರದಲ್ಲಿದೆ. 

ತ್ರಿ ದೇವಿ ಸ್ವರೂಪಿ ಕೊಲ್ಲೂರು ಮೂಕಾಂಬಿಕೆ ಮಹಿಮೆ ಅಪಾರ

ಮಹಿಮೆ ಏನು?

ಈ ದೇವಿ ಹತ್ತಿರ ಬೇಡಿಕೊಂಡರೆ ಅಂದುಕೊಂಡಿದ್ದು ನೆರವೇರುತ್ತದೆ ಎಂದೇ ಭಕ್ತರು ನಂಬುತ್ತಾರೆ. ಈ ಮಹಾ ಶಕ್ತಿ ಸ್ಥಳದ ಬಗ್ಗೆ ಹಲವು ಕಥೆಗಳಿವೆ. 

  • -ರಾಜಸ್ಥಾನದ ರಾಜ ಮನೆತನದ ಹುಡುಗಿ ಓದಲೆಂದು ಬೆಂಗಳೂರಿಗೆ ಬಂದಿದ್ದಳು. ಆಗ, ತನ್ನ ಮನೆತನದ ಹಿರಿಮೆಯನ್ನು ಸಾರುವ ಸರವೊಂದನ್ನು ಕಳೆದುಕೊಂಡಿದ್ದಳು. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಆಗ ಯಾರೋ ಈ ದೇವಿ ಪವಾಡದ ಬಗ್ಗೆ ಮಾತನಾಡಿಕೊಂಡಿದ್ದನ್ನು ಕೇಳಿಸಿಕೊಳ್ಳುತ್ತಾಳೆ. ಅಂಬಲ್ಪಾಡಿಗೆ ಬಂದು ಪ್ರಶ್ನಿಸಿದಾಗ, ಕಳೆದದ್ದು ವಾರದಲ್ಲಿಯೇ ಸಿಗುತ್ತದೆ ಎಂದು ಪಾತ್ರಿ ಹೇಳಲಾಗಿತ್ತು. ವಾರ ಕಳೆಯುತ್ತದೆ. ಆದರೂ ಸಿಗಲೇ ಇಲ್ಲ. ಮತ್ತೆ ದೇವಿಯ ಸಾನಿಧ್ಯಕ್ಕೆ ತೆರಳುತ್ತಾಳೆ.  ಏನಾಶ್ಚರ್ಯ! ರಾಜವಂಶಸ್ಥರ ಅದೇ ಸರ ಹಾಕಿ ಕೊಂಡು ಮಹಿಳೆಯೊಬ್ಬಳು ದೇವಸ್ಥಾನಕ್ಕೆ ಆಗಮಿಸುತ್ತಾಳೆ. ಕಳೆದ ಸರ ಸುಲಭವಾಗಿ ಸಿಗುತ್ತದೆ. 
  • ಬಡ ರೈತನೊಬ್ಬನ ಮಗ ಮನೆಯಲ್ಲಿ ಹೇಳದೇ, ಕೇಳದೇ ಹೋಗಿರುತ್ತಾನೆ. ಎಷ್ಟು ದಿನವಾದರೂ ಮಗನ ಸುಳಿವು ಸಿಗದ ರೈತ ಕಂಗಾಲಾಗಿ ದೇವಿ ಬಳಿ ಬರುತ್ತಾನೆ. ದೇವಿಯನ್ನು ಪ್ರಾರ್ಥಿಸಿಕೊಂಡು ಹೋದ ವಾರದಲ್ಲಿಯೇ ಮಗ ದಿಲ್ಲಿಯಲ್ಲಿ ಸುರಕ್ಷಿತವಾಗಿ ಇರುವುದಾಗಿ ಪತ್ರ ಬರೆಯುತ್ತಾನೆ. 

ಇಂಥ ಹತ್ತು ಹಲವು ಘಟನೆಗಳು ಈ ದೇವಿಯ ಮಹಿಮೆ ಹಾಗೂ ಪವಾಡಗಳಿಗೆ ಸಾಕ್ಷಿಯಾಗಿವೆ.

ಹೊರನಾಡು ಅನ್ನಪೂರ್ಣೇಶ್ವರಿಗೆ ಶರಣೋ ಶರಣು!

click me!