ಭಾರತೀಯರ ಆಚಾರ ವಿಚಾರಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆಯೊಂದಿಗೆ, ವೈಜ್ಞಾನಿಕ ಕಾರಣವೂ ಇದೆ. ಹಳೆ ಆಚಾರ, ಹೊಸ ವಿಚಾರ...ಏನಿದೆ ಓಂಕಾರದ ಹಿಂದಿನ ಸತ್ಯ?
ಸಾಮಾನ್ಯವಾಗಿ ಎಲ್ಲಾ ಮಂತ್ರಗಳೂ ಓಂಕಾರದಿಂದ ಶುರುವಾಗುತ್ತವೆ. ಯೋಗದಲ್ಲೂ ಓಂಕಾರೋಪಾಸನೆ ಇದೆ. ಕೇವಲ ಓಂ ಎಂದು ದೀರ್ಘವಾಗಿ ಪಠಿಸುವುದರಿಂದಲೇ ಹಲವು ಲಾಭಗಳಿವೆ ಎಂದು ಯೋಗ ಗುರುಗಳು ಹೇಳುತ್ತಾರೆ. ಹಾಗೆ ಓಂಕಾರವನ್ನು ಪಠಿಸುವುದಕ್ಕೂ ಬೇರೆ ಬೇರೆ ವಿಧಾನಗಳಿವೆ. ಒಟ್ಟಿನಲ್ಲಿ ಭಾರತೀಯರಿಗೆ ಓಂಕಾರ ಬಹಳ ಪವಿತ್ರ.
ಜಗತ್ತು ಹುಟ್ಟಿದ್ದೇ ಓಂಕಾರದಿಂದ ಎಂಬ ವಾದವಿದೆ. ಇದನ್ನು ಕಾಸ್ಮಿಕ್ ಸೌಂಡ್ ಎಂದು ಕರೆಯುತ್ತಾರೆ. ಬಿಗ್ ಬ್ಯಾಂಗ್ ಥಿಯರಿಯ ಪ್ರಕಾರ ಜಗತ್ತು ಹುಟ್ಟುವುದಕ್ಕೆ ಓಂಕಾರವೇ ಕಾರಣವಂತೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೂ, ಓಂಕಾರದಲ್ಲಿರುವ ಧ್ವನಿ, ತರಂಗ ಹಾಗೂ ನಾದಕ್ಕೆ ಭೌತಶಾಸ್ತ್ರೀಯ ಮಹತ್ವಗಳಿವೆ.
- ಓಂಕಾರದಲ್ಲಿ ಉಕಾರ, ಅಕಾರ ಹಾಗೂ ಮಕಾರಗಳು ಸೇರಿರುವುದರಿಂದ ಅವುಗಳನ್ನು ಒಟ್ಟಿಗೇ ಉಚ್ಛಾರ ಮಾಡಿದಾಗ ಹೊಟ್ಟೆ, ಬೆನ್ನುಹುರಿ, ಗಂಟಲು, ಮೂಗು ಹಾಗೂ ಮೆದುಳಿನ ಭಾಗಗಳು ಕ್ರಿಯಾಶೀಲವಾಗುತ್ತವೆ.
- ಆಗ ಹೊಟ್ಟೆಯಿಂದ ಶಕ್ತಿಯು ಮೆದುಳಿನವರೆಗೆ ಸಂಚರಿಸಿ, ಇಡೀ ದೇಹವನ್ನು ಚುರುಕುಗೊಳಿಸುತ್ತದೆ.
- ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗೂ ಒತ್ತಡ ಕಡಿಮೆಯಾಗುತ್ತದೆ.
- ಎಲ್ಲ ಲೌಕಿಕ ಯೋಚನೆಗಳೂ ಹೊರಟುಹೋಗಿ ಮನಸ್ಸು ಆನಂದದಲ್ಲಿ ಮುಳುಗುತ್ತದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನಗಳೂ ನಡೆದಿವೆ. - ಯಾವತ್ತೂ ಓಂಕಾರವನ್ನು ಪಠಿಸದೆ ಇದ್ದವರ ಮೆದುಳಿನ ತರಂಗಗಳನ್ನು ಅಧ್ಯಯನ ಮಾಡಿ, ನಂತರ ಅವರಿಗೆ ನಿಯಮಿತವಾಗಿ ಓಂಕಾರ ಪಠಿಸಲು ಹೇಳಿ, ನಂತರ ಅವರ ಮೆದುಳಿನ ತರಂಗವನ್ನು ಅಧ್ಯಯನ ಮಾಡಿದಾಗ ಅವರಲ್ಲಿ ಏಕಾಗ್ರತೆ, ಮಾನಸಿಕ ಶಾಂತಿ ಹೆಚ್ಚಿರುವುದು ಮತ್ತು ಒತ್ತಡ ಕಡಿಮೆಯಾಗಿರುವುದು ಕಂಡುಬಂದಿದೆ.
- ಓಂಕಾರವನ್ನು ಪಠಿಸುವುದರಿಂದ ರಕ್ತದೊತ್ತಡ ಕೂಡ ಕಡಿಮೆಯಾದ ಉದಾಹರಣೆಯಿದೆ.
- ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ಶಕ್ತಿ ಓಂಕಾರಕ್ಕಿದೆ ಎಂದೇ ಯೋಗಿಗಳು ಇದರ ಪಠಣಕ್ಕೆ ಧಾರ್ಮಿಕ ಲೇಪನ ಮಾಡಿರಿಸಿರಬಹುದು.
ತೀರ್ಥದಲ್ಲೇಕೆ ತುಳಸಿ ಹಾಕುತ್ತಾರೆ?
ಒಂದೆ ಗೋತ್ರದವರೇಕೆ ಮದುವೆಯಾಗಬಾರದು?
ಮನೆ ಮುಂದೆ ಏಕೆ ರಂಗೋಲಿ ಹಾಕಬೇಕು?
- ಮಹಾಬಲ ಸೀತಾಳಬಾವಿ