ಪಂಪನ ಬನವಾಸಿ ದೇಶದ ಮಧುಕೇಶ್ವರ ದೇಗುಲದೊಳ್....!

By Vaishnavi ChandrashekarFirst Published Jan 21, 2019, 1:11 PM IST
Highlights

'ಚಾಗದ ಭೋಗದ.....' ಎಂದ ಪಂಪನ ಪದ್ಯದ ಮೂಲಕವೇ ಬನವಾಸಿ ನಮಗೆ ಚಿರಪರಿಚಿತ. ಆದಿ ಕವಿಯ ಊರೆಂಬ ಹೆಮ್ಮೆ ನಮಗೆ. ಇಂಥ ಊರಿನಲ್ಲಿರೋ ಮುಧಕೇಶ್ವರ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕುವ ಬನ್ನಿ....

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗ 

ಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ 

ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌ 

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌....

ತನ್ನೂರಿನ ದೇಶ ಪ್ರೇಮವನ್ನು ಆದಿಕವಿ ಪಂಪ ಅಭಿವ್ಯಕ್ತಿಗೊಳಿಸಿದ್ದು ಹೀಗೆ... ಚಿಕ್ಕವರಿದ್ದಾಗ ಕಷ್ಟಪಟ್ಟು ಕಂಠಪಾಠ ಮಾಡಿದ ಈ ಪದ್ಯದ ಮೂಲಕವೇ ಬನವಾಸಿ ಬಗ್ಗೆ ನಮಗೋ ವಿಶೇಷ ಅಭಿಮಾನ, ಒಲವು....

ಐತಿಹಾಸಿಕ ಹಿನ್ನೆಲೆಯುಳ್ಳ ಬನವಾಸಿ ದೇಶದೊಳ್ ಇದೆ ಮದುಕೇಶ್ವರ ದೇವಾಲಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಈ ದೇವಾಲಯವನ್ನು ಜೀವನದಲ್ಲೊಮ್ಮೆ ನೋಡಲೇ ಬೇಕು. 

ಐತಿಹಾಸಿಕ ಮಹತ್ವ:

ಕದಂಬರ ಆಳ್ವಿಕೆಯಲ್ಲಿದ್ದಾಗ ಬನವಾಸಿಯೇ ಕರ್ನಾಟಕದ ಮೊದಲ ರಾಜಧಾನಿಯಾಗಿತ್ತು. ಈ ಸ್ಥಳವನ್ನು ಹಿಂದೆ ನಂದನವನ, ವನವಾಸಿಕ ಹಾಗೂ ಕೊಂಕಣಪುರ ಎಂದೆಲ್ಲಾ ವಿಭ್ನಿನ ನಾಮಗಳಿಂದ ಕರೆಯುತ್ತಿದ್ದರೂ, ಬನವಾಸಿಯೇ ನಮ್ಮೆಲ್ಲರಿಗೂ ಪಂಪನಿಂದ ಚಿರಪರಿಚಿತ. 

ರಾಮೇಶ್ವರ ರಾಮನಾಥನ ದರ್ಶನ ಭಾಗ್ಯ ಪಡೆಯಿರಿ..

ಇಂಥ ಆದಿಕವಿ ಪಂಪನ ತವರೂರು ಬನವಾಸಿಯಲ್ಲಿ ಎಲ್ಲರನ್ನೂ ಆಕರ್ಷಿಸುವ ಸ್ಥಳವೇ ಮಧುಕೇಶ್ವರ ದೇವಸ್ಥಾನದ ಜೇನು ತುಪ್ಪದ ಬಣ್ಣದಲ್ಲಿರೋ  ಶಿವಲಿಂಗ.  ಅಲ್ಲದೇ ಮೋನೋಲಿತಾ ಆಸ್ತಾನ ಮಂಟಪ, ತ್ರಿಲೋಕ ಮಂಟಪ, ಹಾಗೂ ದೊಡ್ಡ ನಂದಿ. ಅಷ್ಟೇ ಅಲ್ಲದೇ ದ್ರಾವಿಡರ ಕಾಲದ ವೀರಭದ್ರ ದೇವಾಲಯವೂ ಎಂಥ ಅರಸಿಕರನ್ನೂ ಆಕರ್ಷಿಸುತ್ತದೆ.

ದೇವಾಲಯ ಪ್ರವೇಶಿಸುವಾಗ ಮೊದಲು ಎದುರಾಗುವುದು ಎರಡು ಆನೆಗಳ ಆಕೃತಿಗಳು. ಮತ್ತೊಂದು ಸುತ್ತಿನಲ್ಲಿ 7 ಅಡಿ ಎತ್ತರದ  ಏಕಶೀಲ ನಂದಿ ನಿಮ್ಮನ್ನು ಸ್ವಾಗತಿಸುತ್ತದೆ.  ಈ ನಂದಿಯ ಒಂದು ಕಣ್ಣು ಮಧುಕೇಶ್ವರನ ಕಡೆಗೆ ದೃಷ್ಟಿ ನೆಟ್ಟರೆ, ಮತ್ತೊಂದು ಗುಡಿಯಲ್ಲಿರುವ ಪಾರ್ವತಿಯತ್ತ ನೋಡುತ್ತಿರುವುದು ವಿಶೇಷ. ಗುಡಿಯನ್ನು ಎಷ್ಟು ಸೂಕ್ಷ್ಮವಾಗಿ ನಿರ್ಮಿಸಲಾಗಿದೆ ಎಂದರೆ ಯಾವ ಕಂಬವೂ ದೇವರಿಗೆ ಎಲ್ಲಿಂದರೂ ಅಡ್ಡವಾಗುವುದಿಲ್ಲ. 

ಕಾಶಿಯೊಂದಿಗಿದೆ ಲಿಂಕ್....

ಇಲ್ಲಿ ಇನ್ನೊಂದು ವಿಶೇಷವೂ ಇದೆ. ಇದಕ್ಕೂ ವಾರಣಾಸಿಗೂ ನೇರ ಸಂಬಂಧವಿದೆ. ಇಲ್ಲಿರುವ ಗಣೇಶನ ಆಕೃತಿಯ ಇನ್ನರ್ಧ ಭಾಗ ವಾರಣಾಸಿಯಲ್ಲಿದೆ!

ಕರ್ನಾಟಕ ರಾಜ್ಯ ಸರಕಾರ ಇಲ್ಲಿ ವರ್ಷಕೊಮ್ಮೆ ಡಿಸೆಂಬರ್‌ನಲ್ಲಿ ಕದಂಬೊತ್ಸವ ಆಯೋಜಿಸುತ್ತದೆ. ಇದರಲ್ಲಿ ರಾಜ್ಯದ ಪ್ರಖ್ಯಾತ ಹಾಗೂ ಪ್ರಸಿದ್ಧ ಸಂಗೀತಗಾರರು, ಸಿನಿಮಾ ನಟರು, ಕವಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅದರಲ್ಲಿಯೂ ಯುಕ್ಷಗಾನ ಕಲಾ ರಸಿಕರನ್ನು ಹೆಚ್ಚು ಸೆಳೆಯುತ್ತದೆ.

ಉಡುಪಿಯ ಅಂಬಲ್ಪಾಡಿ ಮಹಾಕಾಳಿ ಶಕ್ತಿ ಅಪಾರ!

ಹೋಗುವುದು ಹೇಗೆ?

ಶಿರಸಿಯಿಂದ 25 ಕಿ. ಮಿ.

ಶಿವಮೊಗ್ಗದಿಂದ 115 ಕಿ. ಮಿ.

ಬೆಂಗಳೂರಿನಿಂದ 380 ಕಿ.ಮಿ.

click me!
Last Updated Dec 11, 2020, 8:35 AM IST
click me!