ಜುಲೈ 31ಕ್ಕೆ ಶುಕ್ರ ಗೋಚರ; ನಾಲ್ಕು ರಾಶಿಯವರಿಗೆ ಬಂಪರ್ ಲಾಟರಿ, ತೆರೆಯಲಿದೆ ಅದೃಷ್ಟದ ಬಾಗಿಲು

By Mahmad Rafik  |  First Published Jul 28, 2024, 6:30 PM IST

Shukra Gochar 2024: ಶುಕ್ರ ನವಗ್ರಹಗಳಲ್ಲಿ ಒಂದಾಗಿದೆ. ಶುಕ್ರ ಗ್ರಹ ಜುಲೈ 31ರಂದು ಕರ್ಕಾಟಕದಿಂದ ಮೇಷ ರಾಶಿಯನ್ನ ಪ್ರವೇಶಿಸಲಿದೆ. ಶುಕ್ರನ ಈ ಚಲನೆಯಿಂದ ನಾಲ್ಕು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 


Shukra Rashifal August 2024: ಕೆಲವೊಮ್ಮೆ ಜೀವನದಲ್ಲಿ ಕೈ ತುಂಬಾ ಹಣ, ಇರೋದಕ್ಕೆ ಐಷಾರಾಮಿ ಮನೆ, ಓಡಾಡೋದಕ್ಕೆ ವಾಹನಗಳಿದ್ದರೂ ನೆಮ್ಮದಿ ಅನ್ನೋದು ಮಾತ್ರ ಇರಲ್ಲ. ಇದಕ್ಕೆ ರಾಶಿ ಮತ್ತು ಗ್ರಹಗಳ (Rashi And Graha) ಬದಲಾವಣೆಯೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಜೀವನದಲ್ಲಿ ರಾಶಿ ಚಕ್ರಗಳ ಚಲನೆ ಸಕಾರಾತ್ಮಕವಾಗಿದ್ದರೆ, ಜೀವನದಲ್ಲಿ ಸೌಕರ್ಯ, ಸಂಪತ್ತು ಮತ್ತು ಸ್ತ್ರೀ ಸಂತೋಷದ ಜೊತೆಗೆ ನೆಮ್ಮದಿಯೂ ಲಭಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರ ಜಾತಕದಲ್ಲಿ ಶುಕ್ರ ಶುಭ ಸೂಚಕನ ಸ್ಥಾನದಲ್ಲಿರುತ್ತಾನೋ, ಅಂತಹವರಿಗೂ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ. ಶುಕ್ರ ಶುಭ ಸ್ಥಾನದಲ್ಲಿದ್ದರೆ ಆರ್ಥಿಕ ಕಗ್ಗಂಟುಗಳು ಎದುರಾಗಲ್ಲ. ಇದೇ ಜುಲೈ 31ರಂದು ಶುಕ್ರ ಗ್ರಹ ಕರ್ಕಾಟಕದಿಂದ ಮೇಷ ರಾಶಿಗೆ ಚಲಿಸಲಿದೆ. ಶುಕ್ರ ಗ್ರಹದ ಚಲನೆಯಿಂದಾಗಿ ನಾಲ್ಕು ರಾಶಿಗಳ ಜನರಿಗೆ ಶುಭ ಫಲಿತಾಶಂಗಳು ಸಿಗಲಿವೆ. ಆ ನಾಲ್ಕು ರಾಶಿ ಚಕ್ರಗಳು ಯಾವುದು? ಶುಕ್ರನ ಚಲನೆಯಿಂದ (Shukra) ಆಗುವ ಲಾಭಗಳೇನು ಎಂಬುದರ ಬಗ್ಗೆ ನೋಡೋಣ ಬನ್ನಿ. 

1.ಮೇಷ ರಾಶಿಯವರಿಗೆ ಧನ ಲಾಭ 

Tap to resize

Latest Videos

ಶುಕ್ರ ಗ್ರಹ ಜುಲೈ 31ರಂದು ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಈ ಬದಲಾವಣೆ ಮೇಷ ರಾಶಿಯವರ ಮೇಲೆ ಲಾಭದಾಯಕ ಪರಿಣಾಮ ಬೀರಲಿದೆ. ಮೇಷ ರಾಶಿ ಜನಕ್ಕೆ ಪ್ರಬಲ ಯೋಗಕ್ಕೆ ಪಾತ್ರರಾಗಲಿದ್ದಾರೆ. ಉದ್ಯೋಗ-ವ್ಯವಹಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಯಶಸ್ಸು ಸಿಗಲಿದೆ. ವರ್ಷಗಟ್ಟಲೇ ಕಗ್ಗಂಟಾಗಿರುವ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇತ್ಯರ್ಥಗೊಳ್ಳಲಿವೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ಆರಂಭಿಸಿದ್ರೆ ಒಳಿತು ಆಗಲಿದ್ದು, ಯಶಸ್ಸಿನ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

2.ಮಿಥುನ ರಾಶಿಯವರಿಗೆ ತೆರೆಯಲಿದ ಅದೃಷ್ಟದ ಬಾಗಿಲು 

ಶುಕ್ರನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರಾಶಿ ಚಕ್ರದವರಿಗೆ ಶುಕ್ರ ಸಂಪೂರ್ಣ ಶುಭ ಸ್ಥಾನದಲ್ಲಿರಲಿದ್ದಾನೆ. ಕೋರ್ಟ್ ಸೇರಿದಂತೆ ಯಾವುದೇ ಸರ್ಕಾರಿ ಕೆಲಸಗಳಿದ್ರೆ ನಿಮ್ಮ ಪರವಾಗಿಯೇ ಆದೇಶಗಳು ಬರಲಿದೆ. ಪ್ರೀತಿ ಪ್ರಕರಣಗಳು ಬಗೆಹರಿದು ಜೀವನದಲ್ಲಿ ಸ್ತ್ರೀ ಸಂತೋಷ ಸಿಗಲಿದೆ. ಕುಟುಂಬಸ್ಥರ ಜೊತೆ ದೀರ್ಘ ಪ್ರಯಾಣ, ಸಂತಾನ ಭಾಗ್ಯದಂತಹ ಸಂತಸದ ಕ್ಷಣಗಳು ನಿಮ್ಮ ಜೀವನದಲ್ಲಿ ಬರಲಿವೆ. ಮೇಷ ರಾಶಿಯವರ ಕುಟುಂಬಸ್ಥರು ಸಂತೋಷವಾಗಿರುತ್ತಾರೆ.

5 ರಾಶಿಗೆ 8 ದಿನಗಳಲ್ಲಿ ಲಾಭವೋ ಲಾಭ, ಮುಟ್ಟಿದ್ದೆಲ್ಲಾ ಬಂಗಾರ ಬುಧನಿಂದ ಬದಲಾಗಲಿದೆ ಭವಿಷ್ಯ

3.ಸಿಂಹ ರಾಶಿಯವರಿಗೆ ಶುಭ ಲಾಭ

ಶುಕ್ರನ ಚಲನೆ ಸಿಂಹ ರಾಶಿಯವರಿಗೆ ಶುಭ ಲಾಭ ತಂದು ಕೊಡಲಿದೆ. ಹಣದ ಸಮಸ್ಯೆಗಳಿದ್ದರೆ ಶುಕ್ರನ ರಾಶಿ ಬದಲಾವಣೆ ಬಳಿಕ ದೂರವಾಗಲಿವೆ. ಉದ್ಯೋಗಿಗಳಿಗೆ ಪ್ರಮೋಷನ್ ಸಿಗುವ ಸಾಧ್ಯತೆಗಳಿರುತ್ತವೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವಾಗಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪೋಷಕರು ಮಾಡಿಕೊಂಡಿರುವ ಸಾಲುಗಳು ಈ ಸಮಯದಲ್ಲಿ ನಿವಾರಣೆಯಾಗಲಿವೆ. ಇದೆಲ್ಲದರ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. 

4.ಕುಂಭ ರಾಶಿಯವರಿಗೆ ಸಿಗಲಿದೆ ಗುಡ್‌ ನ್ಯೂಸ್ 

ಮೇಷ, ಮಿಥುನ, ಸಿಂಹ ಬಳಿಕ ಕುಂಭ ರಾಶಿಯವರಿಗೂ ಶುಕ್ರ ಶುಭ ಸ್ಥಾನದಲ್ಲಿರುತ್ತದೆ. ಕುಂಭ ರಾಶಿಯವರಿಗೆ ದೊಡ್ಡ ಗುಡ್‌ನ್ಯೂಸ್‌ಗಳು ಲಭ್ಯವಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಹಣ ಹೂಡಿಕೆಗೆ ಸೂಕ್ತ ಸಮಯ ಎಂದು ಹೇಳಬಹುದು. ವಿದ್ಯಾರ್ಥಿಗಳಿಗೂ ಇದು ಒಳ್ಳೆಯ ಸಮಯ ಆಗಿದೆ.

ವ್ಯಭಿಚಾರ ಭಾವನೆಗೆ ಕಾರಣವಾಗೋ ಶುಕ್ರನ ಸ್ಥಾನಪಲ್ಲಟ, ಯಾರಿಗೆ, ಏನು ಫಲ?

Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

click me!