ಮನೆಮನೆಗೆ ರಾಘವ ರಾಮಾಯಣ: ರಾಮಚಂದ್ರಾಪುರ ಮಠದಿಂದ ವಿಶೇಷ ಅಭಿಯಾನ

By Kannadaprabha News  |  First Published Nov 27, 2022, 11:32 AM IST

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀ ಕನ್ನಡದಲ್ಲೇ ಬರೆಯುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.


ಗೋಕರ್ಣ (ನ.27) : ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀ ಕನ್ನಡದಲ್ಲೇ ಬರೆಯುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.

ಪರಮಪೂಜ್ಯರ 30ನೇ ಚಾತುರ್ಮಾಸ್ಯದ ಅಂಗವಾಗಿ ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿದೆ. ಮೊದಲಿಗೆ ಕನ್ನಡದಲ್ಲಿ ಹಾಗೂ ನಂತರ ವಿವಿಧ ಭಾಷೆಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್‌ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

Tap to resize

Latest Videos

Valmiki Jayanti 2022: ಅಂತರಂಗದ ವಲ್ಮಿಯೊಳಗೆ ರೂಪುಗೊಂಡ ಋುಷಿ

ಸಮಗ್ರ ರಾಮಾಯಣ ಮುಗಿಯುವವರೆಗೆ ಧರ್ಮಭಾರತಿ ಮಾಸಿಕದ ಪ್ರತಿ ಸಂಚಿಕೆಯ ಪ್ರತಿ ಪುಟವೂ ರಾಮಾಯಣಮಯವಾಗಿರುತ್ತದೆ. ವಿಶೇಷವೆಂದರೆ ಧರ್ಮಭಾರತಿಯನ್ನು ಉಚಿತವಾಗಿ ವಿತರಿಸುತ್ತದೆ. ಮೊದಲ ಹಂತದಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.

ಹತ್ತಾರು ಲಕ್ಷ ಜನರು ಮೂಲ ರಾಮಾಯಣವನ್ನು ಓದುವಂತೆ ಮಾಡುವ ಪ್ರಯತ್ನ ಇದಾಗಿದೆ. ಲಕ್ಷ ಲಕ್ಷ ಮನೆಗಳಲ್ಲಿ ನೂರಾರು ವರ್ಷ ರಾಮಾಯಣ ಪುಸ್ತಕ ಇರುವಂತೆ ಮಾಡುವ ಮಹದುದ್ದೇಶದ ಯೋಜನೆ ಇದಾಗಿದೆ. ಹಲವು ತಲೆಮಾರುಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

click me!