ಈ ವಸ್ತು ಮನೆಯಲ್ಲಿದ್ದರೆ.. ಮನೆಮಂದಿಗೆಲ್ಲ ಒಳಿತಾಗುತ್ತೆ

By Web DeskFirst Published Jan 12, 2019, 3:01 PM IST
Highlights

ಶೋ ಪೀಸ್‌ಗಳಂಥ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಮನೆಯವರ ನೆಮ್ಮದಿ ಹೆಚ್ಚುತ್ತದೆ. ಇದು ಮನೆಯ ಮೇಲೆ ಧನಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾದರೆ ಆ ವಸ್ತುಗಳು ಯಾವುವು?

ಮನೆಯಲ್ಲಿರುವ ಪ್ರತಿಯೊಂದು ಸಾಮಾಗ್ರಿಗಳೂ ಮನೆಯವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮನೆ ಅಲಂಕಾರದಲ್ಲಿ ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನಿಟ್ಟರೆ ಅದರ ಪಾಸಿಟಿವ್ ಅಥವಾ ನೆಗೆಟಿವ್ ಪರಿಣಾಮ ಕೆಲವೇ ದಿನಗಳಲ್ಲಿ ಕಂಡು ಬರುತ್ತೆ..
ವಾಸ್ತುವಿನ ಅನುಸಾರ ಮನೆಯಲ್ಲಿ ಇಡಬಹುದಾದಂತಹ ಕೆಲವೊಂದು ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ..

ಕಂಚಿನ ಸಿಂಹ : ಆತ್ಮವಿಶ್ವಾಸ ಹೆಚ್ಚಲು ಮನೆಯಲ್ಲಿರಲಿ ಕಂಚಿನ ಸಿಂಹದ ಮೂರ್ತಿ. ಇದು ಮನೆಯವರೆಲ್ಲರೂ ಮೇಲೂ ಪರಿಣಾಮ ಬೀರುತ್ತದೆ. ಕಂಚಿನ ಸಿಂಹವನ್ನು ಮನೆಯ ಉತ್ತರ ಪೂರ್ವ ಅಂದರೆ ಈಶಾನ್ಯ ದಿಕ್ಕಿನಲ್ಲಿಡಬೇಕು. ಇದರಿಂದ ಕೆಲವೇ ಸಮಯಲ್ಲಿ ಮನೆಮಂದಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಆಮೆ ಮೂರ್ತಿ: ಆಮೆಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆಮೆ ಮೂರ್ತಿಯನ್ನು ಮನೆಯ ಮುಖ್ಯದ್ವಾರದ ಬಳಿ ಇಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ, ಜೊತೆಗೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸದಂತೆ ತಡೆಯುತ್ತದೆ.ಅಲ್ಲದೆ ಮನೆಯವರ ಅರೋಗ್ಯ ಉತ್ತವಾಗಿರಲು ಸಹಾಯ ಮಾಡುತ್ತದೆ.

ಕುದುರೆ ಲಾಳ: ಇದನ್ನು ಮನೆಯ ಮುಂದಿನ ಬಾಗಿಲಿನ ಮೇಲೆ ತೂಗು ಹಾಕಿದರೆ ಅದರಿಂದ ಪಾಸಿಟಿವ್‌ ಎನರ್ಜಿ ಮನೆ ತುಂಬಾ ಹರಡುತ್ತದೆ. ಮನೆಯಲ್ಲಿ ಭಾಗ್ಯ ವೃದ್ಧಿಯಾಗಲು ಹಾಗೂ ಸಂತೋಷ ಸಮೃದ್ಧಿ ತುಂಬಬೇಕಾದರೆ ಎರಡು ಕುದುರೆ ಲಾಳವನ್ನು ಮನೆಯ ಮುಂಭಾಗದಲ್ಲಿ ನೇತು ಹಾಕಿ.

click me!