ಎಸ್(S) ಅಕ್ಷರದ ಹೆಸರಿನವರಿಗೆ ಯಶಸ್ಸು ಸುಲಭವಾಗಿ ಸಿಗಲ್ಲ, ಆದರೆ ಅವರಿಗಿದೆ ಈ ಪ್ಲಸ್ ಪಾಯಿಂಟ್

Published : Sep 02, 2026, 12:18 PM IST
S Name Astrology

ಸಾರಾಂಶ

ಎಸ್ ಅಕ್ಷರದಿಂದ ಹೆಸರು ಆರಂಭವಾಗುವವರಿಗೆ ಜೀವನದಲ್ಲಿ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಯಶಸ್ಸಿಗಾ ಪರಿಶ್ರಮ, ನಿರಂತ ಪ್ರಯತ್ನ ಅಗತ್ಯ. ಆದರೆ ಅವರಿಗೆ ಕೆಲ ಪ್ಲಸ್ ಪಾಯಿಂಟ್‌ಗಳಿವೆ. ಇದರಿಂದ ಯಶಸ್ಸು ಸಿಕ್ಕೇ ಸಿಗುತ್ತೆ.

ಹೆಸರಿನಲ್ಲಿ ಎಲ್ಲವೂ ಇದೆ ಎಂದು ಶಾಸ್ತ್ರಗಳು ಹೇಳುತ್ತವೆ. ವ್ಯಕ್ತಿಯ ಹೆಸರು, ಕಂಪನಿ, ಸಂಸ್ಥೆ ಸೇರಿದಂತೆ ಏನೇ ಆದರೂ ಹೆಸರು ಅತ್ಯಂತ ಮುಖ್ಯ. ಜ್ಯೋತಿಷ್ಯ ಪ್ರಕಾರ ಹುಟ್ಟುವ ಮಗುವಿನ ಸಮಯ, ಜಾತಕ ನೋಡಿ ಯಾವ ಅಕ್ಷರದಿಂದ ಹೆಸರು ಇಡಬೇಕು ಅನ್ನೋದು ನಿರ್ಧರಿಸುತ್ತಾರೆ. ಹೀಗೆ ಎಸ್ ಹೆಸರಿನ ಅಕ್ಷರಿಂದ ಆರಂಭವಾಗುವ ಹೆಸರಿನವರಿಗೆ ಜ್ಯೋತಿಷ್ಯ ಹಾಗೂ ಅಂಕೆಶಾಸ್ತ್ರದ ಪ್ರಕಾರ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಆದರೆ ಅವರಿಗೆ ಕೆಲ ಪ್ಲಸ್ ಪಾಯಿಂಟ್‌ಗಳಿವೆ. ಅವರ ವಿಶೇಷ ಗುಣಗಳು ಅವರನ್ನು ವಿಶೇಷ ವ್ಯಕ್ತಿಗನ್ನಾಗಿಸುತ್ತದೆ.

ಎಸ್ ಹೆಸರಿನ ಸೀಕ್ರೆಟ್

ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಹೆಸರಿನ ಮೊದಲ ಅಕ್ಷಕರ ಅವರ ವ್ಯಕ್ತಿತ್ವ ಹಾಗೂ ಭವಿಷ್ಯದ ಮಮೇಲೆ ಪ್ರಭಾವ ಬೀರುತ್ತದೆ. ಎಸ್ ಅಕ್ಷರದಿಂದ ಆರಂಭವಾಗು ಹೆಸರಿನವರು ಜೀವನದಲ್ಲಿ ಹಲವು ಸವಾಲು ಎದುರಿಸುತ್ತಾರೆ. ಆದರೆ ಧೈರ್ಯವಾಗಿ ಎಲ್ಲಾ ಸವಾಲು ಮೆಟ್ಟಿ ನಿಲ್ಲುತ್ತಾರೆ. ಇವರಿಗೆ ಯಶಸ್ಸು ಸುಲಭವಾಗಿ ಸಿಗುವುದಿಲ್ಲ, ಆದರೆ ಯಶಸ್ಸನ್ನು ಪಡದೇ ಪಡೆಯುತ್ತಾರೆ.

ಎಸ್ ಅಕ್ಷರದಿಂದ ಆರಂಭಾಗುವ ಹೆಸರಿನವರ ಪ್ಲಸ್ ಪಾಯಿಂಟ್

ಎಸ್ ಅಕ್ಷರದ ಹೆಸರಿನವರು ಉದ್ಯಮ, ವ್ಯಾಪಾರ ಆರಂಭಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ ಈ ಉದ್ಯಮ, ವ್ಯಾಪಾರದಲ್ಲಿ ಹಲವು ಸವಾಲುಗಳು ಎದುರಾಗುತ್ತದೆ. ಇವೆಲ್ಲನ್ನು ಮೆಟ್ಟಿ ನಿಂತು ಯಶ್ಸಸು ಸಾಧಿಸುತ್ತಾರೆ. ಹೊಸ ವಿಚಾರ ಕಲಿಯಲು ಸದಾ ಸಿದ್ಧರಿರುತ್ತಾರೆ. ವಿಶೇಷವಾಗಿ ಈ ವ್ಯಕ್ತಿಗಳು ವಿವಿಧ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತಾರೆ. ಪ್ರತಿ ಕೆಲಸದಲ್ಲೂ ಉತ್ತಮ ನಿರ್ವಹಣೆ ತೋರುತ್ತಾರೆ.

ಎಸ್ ಅಕ್ಷರದವರು ಸ್ವತಂತ್ರ ಮನೋಭಾವ ಹೊಂದಿರುತ್ತಾರೆ ಜೊತೆಗೆ ಸ್ವಾಭಿಮಾನಿಯಾಗಿರುತ್ತಾರೆ. ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ. ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. ತಮ್ಮ ಕೆಲಸದಲ್ಲಿ ಶ್ರದ್ಧೆ ಇರುತ್ತೆ, ಶ್ರಮವಹಿಸುತ್ತಾರೆ. ದೃಢ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವ ಇರುತ್ತದೆ. ಹೀಗಾಗಿ ಇವರು ಉತ್ತಮ ನಾಯಕರಾಗುತ್ತಾರೆ. ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸುತ್ತಾರೆ.

ಗುರಿ ಸಾಧಿಸಲು ಯಾವುದೇ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ಯಶಸ್ಸು ಸಿಗಬೇಕು ಅನ್ನೋವಷ್ಟರಲ್ಲಿ ಕೈತಪ್ಪು ಸಾಧ್ಯತೆಗಳು ಇವೆ. ಆದರೆ ಯಶಸ್ಸು ಸಿಗುವ ವರೆಗೂ ಹೋರಾಟ ಮುಂದುವರಿಸುತ್ತಾರೆ. ಎಸ್ ಅಕ್ಷರದ ಹೆಸರಿನವರು ಏನೇ ಆರಂಭಿಸಿದರೂ, ವೃತ್ತಿ ಜೀವನದಲ್ಲೂ ಸತತ ಪ್ರಯತ್ನದ ಮೂಲಕ ಸಾಧನೆ ಮಾಡುತ್ತಾರೆ. ಈ ಗುಣಗಳಿಂದ ಇವರಿಗೆ ಸುಲಭವಾಗಿ ಯಶಸ್ಸು ಸಿಗದಿದ್ದರೂ, ಸಿಗುವವರೆಗೂ ಪರಿಶ್ರಮ ಪಡುತ್ತಾರೆ.

PREV
Read more Articles on
click me!

Recommended Stories

ಶನಿಯಿಂದ ಪಾರಾಗಿ ಕೋಟ್ಯಾಧಿಪತಿಗಳಾಗುವ 2 ರಾಶಿಗಳು, ಸದಾಯಾಗ ಯೋಗದಿಂದ ಇನ್ಮುಂದೆ ಟಾಪ್ ಕ್ಲಾಸ್ ಲೈಫ್
ನಿಜವಾಯ್ತು ಬಾಬ ವಂಗಾ ನುಡಿದ ನೇಪಾಳ ಪ್ರವಾಹ, ಸಾವು ನೋವಿನ ಭವಿಷ್ಯ, ಮುಂದೇನು ಕಾದಿದೆ?