ನಿಜವಾಯ್ತು ಬಾಬ ವಂಗಾ ನುಡಿದ ನೇಪಾಳ ಪ್ರವಾಹ, ಸಾವು ನೋವಿನ ಭವಿಷ್ಯ, ಮುಂದೇನು ಕಾದಿದೆ?

Published : Sep 02, 2026, 11:29 AM IST
Baba Vanga Nepal Flood Prediction

ಸಾರಾಂಶ

ಬಾಬಾ ವಂಗಾ 2026ರ ಕುರಿತು ಹೇಳಿದ ಭವಿಷ್ಯಗಳು ಒಂದೊಂದಾಗಿ ನಿಜವಾಗುತ್ತಿದೆ. ಯುದ್ಧ ಭವಿಷ್ಯದ ಬೆನ್ನಲ್ಲೇ ಇದೀಗ ನೇಪಾಳ ಕುರಿತ ಭವಿಷ್ಯ ನಿಜವಾಗಿದೆ. 2026ರಲ್ಲಿ ಬಾಬಾ ವಂಗಾ ಹೇಳಿದ ಭವಿಷ್ಯದಲ್ಲಿ ಮುಂದೇನು ಕಾದಿದೆ?

2026ರ ಕುರಿತು ಖ್ಯಾತ ಜ್ಯೋತಿಷಿ ಬಾಬಾ ವಂಗಾ ನುಡಿದ ಭವಿಷ್ಯಗಳು ಒಂದೊಂದಾಗಿ ನಿಜವಾಗುತ್ತಿದೆ. ಪಾಶ್ಚಿಮಾತ್ಯ ಯುದ್ಧ ಭವಿಷ್ಯ ನಿಖರವಾದ ಬೆನ್ನಲ್ಲೇ ಇದೀಗ ನೇಪಾಳದ ಪ್ರವಾಹ ಸಾವಿನ ನೋವಿನ ಕುರಿತು ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿದೆ. 2026ರಲ್ಲಿ ಭೂಮಿಯ ಶೇಕಡಾ 7 ರಿಂದ 8 ಭಾಗ ನಾಶವಾಗಲಿದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಪ್ರವಾಹ, ಭೂಕಂಪ, ಜ್ವಾಲಾಮುಖಿ ಸ್ಫೋಟ, ಬರಗಾಲ ಸೇರಿದಂತೆ ಹಲವು ಘಟ್ಟಗಳ ಭವಿಷ್ಯ ನುಡಿದಿದ್ದಾರೆ. ನೇಪಾಳ ಪ್ರವಾಹದ ಬೆನ್ನಲ್ಲೇ ಇದೀಗ ಬಾಬಾ ವಂಗಾ ಭವಿಷ್ಯ ಭಾರಿ ಚರ್ಚೆಯಾಗುತ್ತಿದೆ.

2026ರಲ್ಲಿ ಯುದ್ಧ ಜೊತೆ ನೈಸರ್ಗಿಕ ದುರಂತ

2026ರ ವರ್ಷದಲ್ಲಿ ಜನರು ಯುದ್ಧ ಆತಂಕದ ಜೊತೆ ನೈಸರ್ಗಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ಭೂಕಂಪ, ಜ್ವಾಲಾಮುಖಿ ಸ್ಫೋಟ, ಅತಿಯಾದ ಮಳೆ, ಹಲವೆಡೆ ಬರಗಾಲ, ಭೂಕುಸಿತ, ಪ್ರವಾಹ ಸಂಭವಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ನೈಸರ್ಗಿಕ ವಿಕೋಪಹಳಿಂದ ಭೂಮಿಯ ಶೇಕಜಾ 7 ರಿಂದ 8 ಭಾಗ ನಷ್ಟವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇರಾನ್, ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಬಾಬಾ ವಂಗಾ ಹೇಳಿದಂತೆ ನೇಪಾಳದಲ್ಲಿ ಯಾರೂ ಊಹಿಸಿದ ರೀತಿಯಲ್ಲಿ ಪ್ರವಾಹ ಸೃಷ್ಟಿಯಾಗಿ ದುರಂತ ಸಂಭವಿಸಿದೆ. ಅಪಾರ ಭೂಮಿ ನಷ್ಟವಾಗಿದೆ. ಸಾವಿನ ಸಂಖ್ಯೆ ಸಾವಿರ ದಾಟಿದೆ. ನಾಪತ್ತೆಯಾದವರ ಸಂಖ್ಯೆ 4000ಕ್ಕೂ ಅಧಿಕ.

2026ರಲ್ಲಿ ಮುಂದೇನು ಕಾದಿದೆ

ಬಾಬಾ ವಂಗಾ ಹೇಳಿದಂತೆ ಈಗಾಗಲೇ ದೊಡ್ಡ ಪ್ರಮಾಣದ ಭೂಕಂಪ, ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ. ಆದರೆ ಇಲ್ಲಿಗೆ 2026ರ ಕುರಿತು ಬಾಬಾ ವಂಗಾ ಹೇಳಿದ ಭವಿಷ್ಯ ಮುಗಿದಿಲ್ಲ. ಬಾಬಾ ವಂಗಾ ಪ್ರಕಾರ 20206ರಲ್ಲಿ ಕೆಲವೆಡೆ ಭೂಕಂಪಗಳು ಸಂಭವಿಸಲಿದೆ ಎಂದಿದ್ದಾರೆ. ಈ ಕಂಪನ ಮುಂದುವರಿಯಲಿದೆ ಎಂದಿದ್ದಾರೆ. ಇನ್ನು ಪರಿಸರ ಅತೀ ಹೆಚ್ಚು ನಾಶವಾಗಲಿದೆ. ಯೂರೋಪ್‌ನ ಅನೇಕ ಭಾಗಗಳು ಬೆಂಕಿಯಲ್ಲಿ ಕರಗಲಿದೆ ಎಂದಿದ್ದಾರೆ. ಇನ್ನು ಮನುಷ್ಯರು ಮೊದಲ ಬಾರಿಗೆ ಏಲಿಯನ್ ಸಂಪರ್ಕಕ್ಕೆ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೇ ವರ್ಷ ಅಧಿಕಾರ ತ್ಯಜಿಸುವ ಸಾಧ್ಯತೆ ಇದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಬಾಬಾ ವಂಗಾ 1911ರಿಂದ 1996ರ ವರೆಗೆ ಜೀವಿಸಿದ್ದರು. ವಿಶ್ವದಲ್ಲಿ ನಡೆಯಬಹುದಾದ ಪ್ರಮುಖ ಘಟನೆಗಳು, ಆಪತ್ತು, ಸಂಭ್ರಮಗಳ ಕುರಿತು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಬಾಬಾ ವಂಗಾ ಹಲವು ರೀತಿಯಲ್ಲಿ ಭವಿಷ್ಯಗಳನ್ನು ನುಡಿದಿದ್ದಾರೆ. ಆದರೆ ಅವು ಇದೇ ವರ್ಷಕ್ಕೆ ಹೇಳಿದ್ದು ಅನ್ನೋದಕ್ಕೆ ಸ್ಪಷ್ಟ ದಾಖಲೆಗಳು ಇಲ್ಲ. ಬಾಬಾ ವಂಗಾ ನುಡಿಗಳಂತೆ ಹಲವು ಘಟನೆಗಳು ನಡೆದಿದೆ. ಬಾಬಾ ಸ್ವತ ಬರೆದಿರುವ ಭವಿಷ್ಯವಾಣಿಗಳ ದಾಖಲೆಗಳು ಇಲ್ಲ. ಬಾಬಾ ವಂಗಾ ಹೇಳಿದಂತೆ ಅನುಯಾಯಿಗಳು ಬರೆದ ಹಲವು ಭವಿಷ್ಯವಾಣಿಗಳಿವೆ.

PREV
Read more Articles on
click me!

Recommended Stories

6 ರಾಶಿಗೆ 2026 ರ ಕೊನೆಯ 4 ತಿಂಗಳು ಬಿರುಗಾಳಿ, ಶನಿಯ ಪ್ರಭಾವ ಹೆಚ್ಚು, ಅತ್ಯಂತ ಕಠಿಣ ಅವಧಿ ಪ್ರಾರಂಭ
ಇದು ಮನಿಪ್ಲಾಂಟ್ ಅಲ್ಲ, ಇಲ್ಲಿದೆ ನೋಡಿ ಕುಬೇರನಿಗೆ ಪ್ರಿಯವಾದ ಸಂಪತ್ತು ನೀಡೋ ಸಸ್ಯ