ಕ್ಲಾಕ್ ಇಂಡಸ್ಟ್ರಿಯಲ್ಲಿ ಹೊಸ ಆವಿಷ್ಕಾರ, ಗಡಿಯಾರ ನೋಡಿ, ಯಾವ ಮಾಸ, ನಕ್ಷತ್ರ ಅಂತ ಹೇಳ್ಬೋದು

By Vinutha PerlaFirst Published Jan 20, 2023, 11:13 AM IST
Highlights

ಇದು ಯಾವ ಮಾಸ, ಇವತ್ತು ಯಾವ ತಿಥಿ, ಇವಾಗ ಯಾವ ನಕ್ಷತ್ರ ನಡೆಯುತ್ತಿದೆ.. ಇದಕ್ಕೆಲ್ಲ ಉತ್ತರ  ಕೇಳಿದ್ರೆ ತಕ್ಷಣ ನೀವು ಪಂಚಾಗ ಹುಡುಕುತ್ತೀರಾ ಅಲ್ವಾ.. ಇನ್ಮುಂದೆ ಹಾಗಿಲ್ಲ ನೀವು ಗಡಿಯಾರ ನೋಡಿಯೇ ಇದಕ್ಕೆಲ್ಲ ಉತ್ತರಿಸ ಬಹುದು. ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ವರದಿ: ರಕ್ಷಾ 

ತಿಥಿ, ನಕ್ಷತ್ರ, ರಾಶಿ, ಮಾಸಗಳು  ಹಿಂದೂ ಸಂಪ್ರದಾಯದಲ್ಲಿ ವಿಶೇಷ ಪಾತ್ರ ವಹಿಸುತ್ತವೆ. ಹಬ್ಬ ಹರಿದಿನಗಳ ಆಚರಣೆ, ಪೂಜೆ ಪುರಸ್ಕಾರಗಳಲ್ಲಿ ತೊಡಗುವಿಕೆ, ಮದುವೆ (Marriage), ನಾಮಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಹಿಂದುಗಳು ಪಂಚಾಂಗದ ಆಧಾರದಲ್ಲಿಯೇ ನಡೆಸೋದು. ಇದನ್ನು ಪರಿಗಣನೆಯಲ್ಲಿಟ್ಟು ಕೊಂಡು ಮಾರುಕಟ್ಟೆಯಲ್ಲಿ ವಿಶೇಷ ಗಡಿಯಾರವೊಂದು ಬಂದಿದೆ. ಇದೇ ಪಂಚಾಂಗ ಗಡಿಯಾರ (ಅಸ್ಟ್ರೋ ಟೈಮ್). ಸೋನಾ ಗ್ರೂಪ್‌ ಮಾಲಿಕರಾದ ಯಜ್ಞನಾರಾಯಣ್ ಅಸ್ಟ್ರೋ ಟೈಮ್ ಕಂಪನಿಯಿಂದ ಈ ಗಡಿಯಾರವನ್ನು ಆವಿಷ್ಕರಿಸಲಾಗಿದೆ.‌ ಮೂರು ವರ್ಷಗಳ ಹಿಂದೆ ಈ ಪಂಚಾಂಗದ ಗಡಿಯಾರದ (Clock) ಪರಿಕಲ್ಪನೆಯನ್ನು ಹರಿನಾಥ್ ಶುರುವಿಟ್ಟಿದ್ದು ಸಧ್ಯ ಇದೀಗಾ ಕ್ಲಾಕ್ ಇಂಡಸ್ಟ್ರಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಲಭ್ಯವಿರುವ ಈ ಪಂಚಾಂಗದ ಗಡಿಯಾರ ರಾಶಿ, ನಕ್ಷತ್ರ, ತಿಥಿ,ಏಕಾದಶಿ, ದ್ವಾದಶಿ, ಹಬ್ಬ  ಹರಿದಿನಗಳನ್ನು ತಿಳಿಸುತ್ತದೆ. ಸೂರ್ಯ, ಚಂದ್ರ ಹಾಗೂ ಭೂಮಿಯ ಚಲನವಲನಗಳನ್ನು ಸಹ ತಿಳಿಸುತ್ತದೆ.

Bad luck Remedies: ದುರದೃಷ್ಟ ಓಡಿಸ್ಬೇಕಾ? ಇಲ್ಲಿವೆ ಪರಿಹಾರ ಮಾರ್ಗಗಳು

ಖಗೋಳ ಶಾಸ್ತ್ರದ ಮೇಲೆ ನಡೆಯುವ ಪಂಚಾಂಗದ ಬಗ್ಗೆ ಸಾಮಾನ್ಯ ಜ್ಞಾನವನ್ನು ನೀಡುವ ಈ ಗಡಿಯಾರದಲ್ಲಿ ನಾವು ಸೂರ್ಯೋದಯ , ಸೂರ್ಯಾಸ್ತದ ಜೊತೆಗೆ ಚಂದ್ರೋದಯ, ಚಂದ್ರ ಹಸ್ತಗಳನ್ನು ಸಹ ತಿಳಿಯ ಬಹುದಾಗಿದೆ. ಅಮವಾಸ್ಯೆ ಹಾಗೂ ಪೂರ್ಣಿಮೆಗಳಂದು ಸೂರ್ಯ ಚಂದ್ರರ ನಡೆಗಳು ಖಗೋಳದಲಾಗೋ ಬದಲಾವಣೆಗಳು ಹೀಗೆ ಹಲವು ವಿಸ್ಮಯ (Wonder)ಗಳನ್ನು ತಿಳಿಯಲು ಈ ಪಂಚಾಂಗದ ಗಡಿಯಾರ ಮಾರ್ಗದರ್ಶಿಯಾಗಲಿದೆ. 

ಎಲ್ಲ ಸ್ಥಳಗಳಿಗೆ ಹೊಂದಾಣಿಯಾಗುವಂತೆ ಸಾಫ್ಟ್ ವೇರೆ ಫಿಕ್ಸ್ ಮಾಡಲಾಗಿದೆ. ಒಂದು ಸಾಫ್ಟ್ ವೇರೆ ಹಾಗೂ ಮೂರು ಮೋಟರ್ ಗಳಿಂದ ಈ ಗಡಿಯಾರ ಕಾರ್ಯನಿರ್ವಹಿಸಲಿದೆ. ಎಂಟು ಗಂಟೆಗಳ ಬ್ಯಾಟರಿ ಬ್ಯಾಕ್ ಅಪ್ ಸಹ ಒಳಗೊಂಡಿದ್ದು, ಹೊರ ಭಾಗದಲ್ಲಿ ಚೌಕಾಕಾರದ ಆಕೃತಿ ಹಾಗೂ ಒಳಭಾಗದಲ್ಲಿ ವೃತ್ತಕಾರದಲ್ಲಿರುವ ಗಡಿಯಾರವು ಕೆಂಪು, ನೀಲಿ, ಹಸಿರು ಬಣ್ಣಗಳಲ್ಲಿ ಹಾಗೂ ಐದು ಭಾಷೆಗಳಲ್ಲಿ (Language) ಲಭ್ಯವಿದೆ. ಗಡಿಯಾರ ಕೊಂಡುಕೊಳ್ಳಲು ಇಚ್ಚಿಸುವವರು http://Www.shriastrotime.com ನಲ್ಲಿ ಸಂಪರ್ಕಿಸ ಬಹುದಾಗಿದೆ. 

Astrology Tips: ದೇವಸ್ಥಾನಕ್ಕೆ ಹೋಗ್ವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಈಗಾಗ್ಲೇ ಹಲವು ದೇವಸ್ಥಾನ (Temple)ಗಳಿಂದ ಬೇಡಿಕೆ ಹೆಚ್ಚಿದ್ದು, ಪ್ರತಿ ಹಿಂದುಗಳ ಮನೆಯಲ್ಲೊಂದು ಪಂಚಾಂಗದ ಗಡಿಯಾರವಿದ್ರೆ ನಮ್ಮ ಸಂಸ್ಕೃತಯನ್ನು ಮುಂದಿನ ಪೀಳಿಗೆಗೆ ಹಂಚಿದಂತಗುತ್ತೆ ಅನ್ನೋದು ಹಲವರ ಅಭಿಪ್ರಾಯ.

click me!