Nostradamus Afshin Eemranis Prediction: ಇರಾನ್​ಗೆ ಮಹಿಳಾ ನಾಯಕಿ, ಭಾರತಕ್ಕೆ... ಹೇಳಿದ್ದೆಲ್ಲಾ ಸತ್ಯವಾಗ್ತಿರೋ ಇಮ್ರಾನಿ ಭವಿಷ್ಯವಾಣಿಯಲ್ಲಿ ಇರೋದೇನು?

Published : Jun 23, 2025, 11:16 PM IST
Afshin Eemranis prediction

ಸಾರಾಂಶ

ಇರಾನ್​ ಯುದ್ಧ, ಇಸ್ರೇಲ್​ ಕಾಳಗ, ಅಮೆರಿಕದ ಬಾಂಬ್​ ಸೇರಿದಂತೆ ಇಲ್ಲಿಯವರೆಗಿನ ಎಲ್ಲಾ ಭವಿಷ್ಯದ ಬಗ್ಗೆ 2023ರಲ್ಲಷ್ಟೇ ತಿಳಿಸಿದ್ದ ಖ್ಯಾತ ಜ್ಯೋತಿಷಿ ಅಫ್ಶಿನ್ ಇಮ್ರಾನಿ ಭಾರತದ ಬಗ್ಗೆ ಹೇಳಿದ್ದೇನು? 

ಇದಾಗಲೇ ಜಗತ್ತಿನ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. 3ನೇ ಮಹಾಯುದ್ಧಕ್ಕೂ ಜಗತ್ತು ರೆಡಿಯಾಗುವ ಹಾಗಾಗಿದೆ ಸ್ಥಿತಿ. ಎಲ್ಲಿ ನೋಡಿದರೂ ಯುದ್ಧದ ಭೀತಿ. ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಅಗ್ನಿ ಅವಘಡ, ಮತ್ತೊಂದೆಡೆ ಊಹಿಸಲು ಸಾಧ್ಯವಿಲ್ಲದ ರೀತಿಯ ಅಪಘಾತಗಳು, ಸಾವು-ನೋವುಗಳು... ಹೀಗೆ ಕಳೆದೊಂದು ವರ್ಷದಿಂದ ಇನ್ನಿಲ್ಲದಂಥ ಸ್ಥಿತಿ ಇಡೀ ಜಗತ್ತಿನಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಇದಾಗಲೇ ಹಲವು ಕಾಲಜ್ಞಾನಿಗಳು, ಜ್ಯೋತಿಷಿಗಳು ಭವಿಷ್ಯ ನುಡಿದದ್ದು ಕೂಡ ನಿಜವಾಗಿದೆ. ಆದರೆ ಕುತೂಹಲ ಎನ್ನುವಂತೆ 2023ರಲ್ಲಿ ಇಸ್ರೇಲಿಗಳು ಆಧುನಿಕ ನಾಸ್ಟ್ರಾಡಾಮಸ್ ಎಂದೇ ಕರೆಯುವ ಅಫ್ಶಿನ್ ಇಮ್ರಾನಿ ಬರೆದಿರುವ ಭವಿಷ್ಯವಾಣಿ ಅಕ್ಷರಶಃ ನಿಜವಾಗಿರುವುದು ಈಗ ಬೆಳಕಿಗೆ ಬಂದಿದೆ.

ಇರಾನ್​-ಇಸ್ರೇಲ್​ ಯುದ್ಧದ ಬಗ್ಗೆ ಸೇರಿದಂತೆ ಜಗತ್ತಿನ ಹಲವು ವಿಷಯಗಳ, ಆಗುಹೋಗುಗಳ ಬಗ್ಗೆ ಈತ 2023ರಲ್ಲಷ್ಟೇ ಬರೆದಿಟ್ಟಿದ್ದು, ಅದೀಗ ಬೆಳಕಿಗೆ ಬಂದಿದೆ. ಇದರಲ್ಲಿ ಜಗತ್ತಿನ ವಿವಿಧ ದೇಶಗಳ ಸ್ಥಿತಿಗತಿಗಳ ಬಗ್ಗೆ ಇದೆ. ಭಾರತದ ಸ್ಥಿತಿಯ ಬಗ್ಗೆಯೂ ಉಲ್ಲೇಖವಾಗಿದೆ. ಪಾಕಿಸ್ತಾನವು ತನ್ನೆಲ್ಲಾ ಆಕ್ರಮಿತ ಭೂಮಿಯನ್ನು ಭಾರತಕ್ಕೆ ಮರಳಿಸುವ ಸ್ಥಿತಿ ಬರುತ್ತದೆ, ಮತ್ತು ಪಾಕಿಸ್ತಾನ ಸಂಪೂರ್ಣವಾಗಿ ಪರಮಾಣು ನಿಶ್ಯಸ್ತ್ರೀಕರಣಗೊಳ್ಳುತ್ತದೆ ಎಂದು ಆತ ಬರೆದಿದ್ದಾನೆ. ಇನ್ನೊಂದು ಕುತೂಹಲದ ವಿಷಯ ಇದರಲ್ಲಿ ಇರುವುದು ಏನೆಂದರೆ, ಬಾಂಗ್ಲಾದೇಶ ಅಸ್ತಿತ್ವದಲ್ಲಿ ಇರುವುದಿಲ್ಲ, ಬಾಂಗ್ಲಾದೇಶದ ಎಲ್ಲಾ ಭೂಮಿ ಕೂಡ ಭಾರತಕ್ಕೆ ಮರಳುತ್ತದೆ. ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಟಾಪ್​ಮೋಸ್ಟ್​ ಸ್ಥಾನದಲ್ಲಿರುವ ಚೀನಾದ ಆರ್ಥಿಕತೆಯು ದಿಢೀರ್​ ಎಂದು ಕುಸಿಯುತ್ತದೆ ಮತ್ತು ಅದು ಎಲ್ಲಾ ಆಕ್ರಮಿತ ಪ್ರದೇಶಗಳನ್ನು ಕಳೆದುಕೊಳ್ಳುತ್ತದೆ ಎಂದು ಇದರಲ್ಲಿ ಬರೆಯಲಾಗಿದೆ. ಆದರೆ ಭಾರತದ ಪಾಲಿಗೆ ಮಾತ್ರ ಇದು ಒಳ್ಳೆಯ ಯುಗವಾಗಿರಲಿದೆ. ಭಾರತೀಯ ಶತಮಾನ ಪ್ರಾರಂಭವಾಗಿದೆ ಎಂದು ಅಫ್ಶಿನ್ ಇಮ್ರಾನಿ ಬರೆದಿದ್ದಾನೆ.

 

ಇನ್ನು ಇಸ್ರೇಲ್​ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ. ಇಸ್ರೇಲ್​ ಗಾಜಾವನ್ನು ಬಲಿಪಡೆಯಲಿದೆ. ಹಮಾಸ್​ ಯುಗ ಅಂತ್ಯವಾಗಲಿದೆ. ಇರಾನ್​ನ ಪರಮಾಣು ಬಾಂಬ್​ಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಸೌದಿ ಅರೇಬಿಯಾದಿಂದ ಶಾಂತಿಯ ಯೋಜನೆ ರೂಪಿತಗೊಳ್ಳುತ್ತದೆ. ಹಿಜ್​ಬುಲ್ಲಾ ಅಂತ್ಯವಾಗುತ್ತದೆ... ಇತ್ಯಾದಿಯಾಗಿಯೂ ಇದರಲ್ಲಿ ಭವಿಷ್ಯವಿದೆ. ಕುತೂಹಲದ ವಿಷಯ ಎಂದರೆ, ಶೀಘ್ರದಲ್ಲೇ, ಇರಾನ್‌ಗೆ ಒಬ್ಬ ಮಹಿಳಾ ಆಡಳಿತಗಾರ್ತಿ ಇರುತ್ತಾಳೆ ಮತ್ತು ಆಕೆ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಾಳೆ ಎಂದು ಆತ ಬರೆದಿದ್ದಾನೆ.

ಇನ್ನು ಇಸ್ರೇಲ್​ ಯುದ್ಧದ ಬಗ್ಗೆಯೇ ಆಗ ಪ್ರತ್ಯೇಕವಾಗಿ ಬರೆಯಲಾಗಿದ್ದು, ಅದರಲ್ಲಿ ಇದು ಎಲ್ಲಾ ಯುದ್ಧಗಳನ್ನು ಕೊನೆಗೊಳಿಸುವ ದೊಡ್ಡ ಯುದ್ಧವಾಗಲಿದೆ. ಇಸ್ರೇಲ್ ಇದನ್ನು ಕೊನೆಗೊಳಿಸಲು 100% ಬದ್ಧವಾಗಿದೆ. ಗಾಜಾವನ್ನು ನೆಲಸಮ ಮಾಡಲಾಗುತ್ತದೆ. ಹಮಾಸ್ ಅಂತ್ಯವಾಗುತ್ತದೆ. ಎಲ್ಲಾ ಪ್ಯಾಲೆಸ್ಟೀನಿಯನ್ನರನ್ನು ಬಲವಂತವಾಗಿ ಹೊರಹಾಕಲಾಗುವುದು. ಈಜಿಪ್ಟ್‌ಗೆ. ಜೋರ್ಡಾನ್‌ಗೆ ಅವರನ್ನು ಕಳುಹಿಸಲಾಗುತ್ತದೆ ಎಂದಿರುವ ಅಫ್ಶಿನ್ ಇಮ್ರಾನಿ ನಾನು ಹೇಳುತ್ತಿರುವುದು ಹುಚ್ಚುತನ ಎಂದು ನನಗೆ ಅರಿವಿದೆ. ಆದರೆ ಇದು ನಿಜವಾಗುತ್ತದೆ ಎಂದಿದ್ದಾನೆ. ಅಮೆರಿಕವು ಇರಾನ್‌ನ ಪರಮಾಣು ಬಾಂಬ್‌ಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಇದು ವಿಶ್ವ ಯುದ್ಧವಾಗಿ ಕೊನೆಗೊಳ್ಳುವುದಿಲ್ಲ. ಇದು ಪ್ರಪಂಚದ ಅಂತ್ಯವಾಗುವುದಿಲ್ಲ. ಇದು ಪರಮಾಣು ಆಗುವುದಿಲ್ಲ. ಆದರೆ ಇದು ಇಸ್ರೇಲ್‌ಗೆ ದಶಕಗಳ ಶಾಂತಿಯನ್ನು ನೀಡುವ ಯುದ್ಧವಾಗಿ ಪರಿಣಮಿಸುತ್ತದೆ ಎಂದಿದ್ದಾನೆ.

PREV
Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ