
ನಿಮಗೆ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆ ಇದ್ದರೆ, ಜನ್ಮಸಂಖ್ಯೆಯ ಬಗ್ಗೆ ಅರಿವು ಇರಬಹುದು. ಪ್ರತಿಯೊಬ್ಬನಿಗೂ ಒಂದು ಜನ್ಮಸಂಖ್ಯೆ ಇರುತ್ತದೆ. ಮತ್ತು ಈ ಪ್ರತೀ ಅದೃಷ್ಟಸಂಖ್ಯೆಗೂ ಒಂದೊಂದು ಬಗೆಯ ಗುಣ, ಸ್ವಭಾವ, ದೇವತೆ ಇರುತ್ತವೆ. ಹಾಗೇ ಪ್ರತೀ ಲಕ್ಕೀ ನಂಬರ್‌ಗೂ ಒಂದೊಂದು ಪ್ರಾಣಿ ಲಿಂಕ್ ಆಗಿರುತ್ತದೆ ಹಾಗೂ ಅದರ ಸ್ವಭಾವ ನಿಮ್ಮಲ್ಲಿ ಇರುವುದು ಖಂಡಿತ. ಬೇಕಿದ್ದರೆ ಈ ಕೆಳಗೆ ನೀಡಿದ ಸಂಖ್ಯೆಗಳು ಹಾಗೂ ಅದಕ್ಕೆ ಅನುಗುಣವಾದ ಪ್ರಾಣಿ ಸ್ವಭಾವಗಳನ್ನು ಹೋಲಿಸಿಕೊಂಡು ನೀವೇ ನಿರ್ಧರಿಸಿ.
ಮೊದಲಿಗೆ, ಜನ್ಮಸಂಖ್ಯೆ ನಿರ್ಧರಿಸುವುದು ಹೇಗೆ? ಅದು ಹೀಗೆ- ಉದಾಹರಣೆಗೆ ನಿಮ್ಮ ಬರ್ತ್‌ಡೇ 18-06-1989 ಎಂದಿಟ್ಟುಕೊಳ್ಳಿ. ಈಗ ಈ ಎಲ್ಲ ಅಂಕಿಗಳನ್ನೂ ಕೂಡಿಸಿ. ಮೊತ್ತ ಹತ್ತಕ್ಕಿಂತ ಹೆಚ್ಚಿದ್ದರೆ ಮತ್ತೆ ಅವೆರಡನ್ನೂ ಕೂಡಿಸಬೇಕು. 1+8+0+6+1+9+8+9= 42= 4+2= 6 ಹೀಗೆ. ನಿಮ್ಮ ಜನ್ಮಸಂಖ್ಯೆ 6. ಈಗ ಯಾವ್ಯಾವ ಜನ್ಮಸಂಖ್ಯೆಯ ಪ್ರಾಣಿ ಯಾವುದು, ಅವರ ಸ್ವಭಾವ ಏನು ನೋಡೋಣ.
1- ಬೆಕ್ಕು
ನೀವು ಅತ್ಯಂತ ನಂಬಿಕಸ್ಥರು, ಪ್ರೀತಿಪಾತ್ರರು. ನಿಮ್ಮದು ಬೆಕ್ಕಿನ ಹಾಗೆ ನಾಚಿಕೆಯ ಸ್ವಭಾವ. ಕೆಲವೊಮ್ಮೆ ಪ್ರಶಾಂತವಾಗಿ ಕುಳಿತುಕೊಳ್ಳುವುದು ಅಂದರೆ ನಿಮಗೆ ಬಲು ಇಷ್ಟ. ಪ್ರತಿಯೊಂದು ವಿಚಾರವನ್ನೂ ಸಂಪೂರ್ಣವಾಗಿ ವಿವರಿಸಲು ಇಷ್ಟಪಡುತ್ತೀರಿ. ನಿಮಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದೆ. ನೀವು ಫ್ಯಾಷನ್ ಪ್ರಿಯರು ಬೇರೆ. ಎಲ್ಲರ ಜತೆ ಸಲೀಸಾಗಿ ಒಡನಾಡುತ್ತೀರಿ. ಅಪರಿಚಿತರ ಜತೆಗೆ ನೀವು ಹೆಚ್ಚು ಮಾತನಾಡಲು ಇಷ್ಟಪಡುವವರಲ್ಲ. ಸ್ನೇಹಿತರ ಆಯ್ಕೆಯಲ್ಲಿ ಎಡವಬೇಡಿ.
2- ಚಿರತೆ
ಕಾಡಿನಲ್ಲಿ ಅವಿತಿಟ್ಟುಕೊಂಡಿರುವ ಚಿರತೆಯ ಹಾಗೆ ನೀವು ತುಂಬಾ ಗೌಪ್ಯ ವ್ಯಕ್ತಿತ್ವದವರು. ಯಾವುದೇ ವಾತಾವರಣವನ್ನೂ ಅತ್ಯಂತ ಸಮರ್ಥವಾಗಿ ನೀವು ನಿಭಾಯಿಸಬಲ್ಲಿರಿ. ಪ್ರೀತಿಯಿಂದಾಗಿ ಆಗಾಗ ಗಾಸಿಪ್‌ಗಳಿಗೂ ವಸ್ತುವಾಗುತ್ತೀರಿ. ನಿಮ್ಮ ಅಭಿಲಾಷೆಯಂತೆ ಬೇಡಿಕೆ ಈಡೇರಿಸಲು ಬಯಸುತ್ತೀರಿ. ಆದರೆ ಕೆಲವೊಮ್ಮೆ ವಿಫಲರಾಗುತ್ತೀರಿ. ಆ ಪರಿಣಾಮವಾಗಿ ಸಂಬಂಧ ಮುರಿಯಬಹುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣ ನಿಮ್ಮದು.
3- ನಾಯಿ
ನಿಮ್ಮ ಜನ್ಮದಿನದ ಪ್ರಕಾರ ಇದರ ಸಂಕೇತ ಪ್ರಾಣಿ ನಾಯಿ. ಅಂದರೆ ನೀವು ಅತ್ಯಂತ ವಿಧೇಯರೇ ಸರಿ. ಕೆಲಸದಲ್ಲಿನ ನಿಮ್ಮ ಪ್ರಾಮಾಣಿಕತೆ ಪ್ರಶ್ನಿಸುವಂತೆಯೇ ಇಲ್ಲ. ನೀವು ಬಹಳ ಸರಳ ಹಾಗೂ ಡೌನ್ ಟು ಅರ್ಥ್. ಬಟ್ಟೆಯ ಆಯ್ಕೆಯಲ್ಲಿ ನಿಮಗೆ ಒಳ್ಳೆಯ ಅಭಿರುಚಿ ಇದೆ. ಕೆಲವೇ ಸ್ನೇಹಿತರಿದ್ದರೂ ಅವರೆಲ್ಲ ಪ್ರತಿಷ್ಠಿತ ವ್ಯಕ್ತಿಗಳೇ ಆಗಿರುತ್ತಾರೆ.
4- ಸಿಂಹ
ನಿಮ್ಮ ಸಂಕೇತಕ್ಕೆ ನಿಮ್ಮ ಸ್ವಭಾವ ತದ್ವಿರುದ್ಧ. ಏಕೆಂದರೆ ನೀವು ಶಾಂತಿಪ್ರಿಯರು. ಜಗಳದ ಸನ್ನಿವೇಶವನ್ನು ತಪ್ಪಿಸುವ ಚಾಕಚಕ್ಯತೆ ನಿಮ್ಮಲ್ಲಿದೆ. ನೀವು ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಇರುವವರಲ್ಲ. ಹುಟ್ಟಿನಿಂದಲೂ ನಿಮಗೆ ನಾಯಕತ್ವ ಗುಣವಿದೆ. ಕೆಲಸ ಮಾಡಿಸುವುದರಲ್ಲಿ ನೀವು ನಿಸ್ಸೀಮರು. ನಿಮ್ಮನ್ನು ಪ್ರೀತಿಸುವವರನ್ನು ಕಂಡರೆ ನಿಮಗೆ ಅತೀವ ಅಕ್ಕರೆ. ನಿಮ್ಮ ಒಳ್ಳೆಯ ಗುಣವನ್ನು ದುರ್ಬಳಕೆ ಮಾಡುವವರ ಬಗ್ಗೆ ಎಚ್ಚರ ವಹಿಸಿ.
5- ಕೋತಿ
ನಿಮ್ಮ ಜನನ ಪ್ರಾಣಿ ಕೋತಿ. ಅದರ ಹಾಗೆಯೇ ನಿಮಗೂ ತಾಳ್ಮೆ ಕಡಿಮೆ. ಉದ್ವೇಗ ಜಾಸ್ತಿ. ಯಾವುದೇ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸಲು ಬಯಸುತ್ತೀರಿ. ಸರಳ ಗುಣದ ನೀವು ಹೃದಯಪೂರ್ವಕವಾಗಿ ಪ್ರೀತಿಸುವವರು. ಆದರೆ ನಿಮ್ಮದು ವಿಶಿಷ್ಟ ವ್ಯಕ್ತಿತ್ವ. ಎಲ್ಲ ವಿಚಾರದಲ್ಲೂ ರಕ್ಷಣಾತ್ಮಕ ಆಟವಾಡುತ್ತೀರಿ. ಅಪಾಯದಲ್ಲಿ ಸಿಲುಕುವ ಮೊದಲೇ ನಿಮ್ಮ ಸಿಕ್ಸ್ತ್ ಸೆನ್ಸ್ (ಆರನೇ ಇಂದ್ರಿಯ) ಎಚ್ಚರಿಸುತ್ತದೆ.
6- ಹುಲಿ
ನೀವು ಪಾರಿವಾಳದಂತೆ ಸಂತೋಷ ಮತ್ತು ಅದೃಷ್ಟದ ಸಂಕೇತವಾಗಿರುತ್ತೀರಿ. ದುಃಖ, ಸಂತೋಷ ಎರಡಕ್ಕೂ ನೀವು ವಿಚಲಿತರಾಗುವವರಲ್ಲ. ಹೋದಲ್ಲೆಲ್ಲ ಸಂತೋಷವನ್ನೇ ಕೊಂಡೊಯ್ಯುತ್ತೀರಿ. ಸ್ನೇಹಿತರ ಕೂಟದಲ್ಲಿ ನೀವೊಬ್ಬ ಲೀಡರ್. ಅಗತ್ಯ ಬಿದ್ದಾಗ ಸಂತೈಸುವುದರಲ್ಲಿ ಎತ್ತಿದ ಕೈ. ನೀವು ಸಿದ್ಧಾಂತವಾದಿಗಳು. ಸೋಗಲಾಡಿತನ ಎಂಬುದು ನಿಮಗೆ ಇಷ್ಟವಾಗುವುದಿಲ್ಲ. ನೀವು ಪ್ರೀತಿಯ ಸುಳಿಗೆ ಸಿಲುಕುತ್ತೀರಿ. ಹೀಗಾಗಿ ಕೊಂಚ ಎಚ್ಚರ ವಹಿಸಿ.
7- ಇಲಿ
ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮ ಚಿಹ್ನೆ ಇಲಿಯಾಗಿರುತ್ತದೆ. ಹೀಗಾಗಿ ನೀವು ತುಂಬ ತುಂಟತನದಿಂದ ಕೂಡಿರುತ್ತೀರಿ. ನಿಮ್ಮ ಕಣ್ಣುಗಳು ಚುರುಕು ಮತ್ತು ಆಕರ್ಷಕ. ನಿಮ್ಮದು ಸದಾ ಹಾಸ್ಯಪ್ರವೃತ್ತಿ. ಎಲ್ಲ ಸಮಾರಂಭಗಳಿಗೂ ನಿಮ್ಮನ್ನು ಆಹ್ವಾನಿಸುತ್ತಾರೆ. ಆದರೆ ನೀವು ತುಂಬ ಸೂಕ್ಷ್ಮ ಸಂವೇದನೆಯವರು. ನಿಮ್ಮೊಂದಿಗೆ ಮಾತನಾಡಬೇಕು ಅಂತಾದರೆ ಕೆಲವರು ಹಲವು ಬಾರಿ ಯೋಚಿಸುತ್ತಾರೆ.
6 ನಕ್ಷತ್ರದವರು ಯಾವಾಗ್ಲೂ ಶ್ರೀಮಂತರಂತೆ
8- ಆಮೆ
ನಿಮ್ಮ ಸಂಕೇತ ಆಮೆಯ ಹಾಗೆ ನೀವು ಪರಿಪೂರ್ಣತೆಗೆ ಹತ್ತಿರವುಳ್ಳವರು. ಹೃದಯದಿಂದ ನೀವು ಸುಸ್ವಭಾವದವರು. ನಿಮ್ಮ ದಯಾಳುತನದ ಬಗ್ಗೆ ಸ್ನೇಹಿತರು ಚರ್ಚಿಸುತ್ತಲೇ ಇರುತ್ತಾರೆ. ನೀವೂ ಶಾಂತಿಪ್ರಿಯರು. ಆದರೆ ತಪ್ಪಿತಸ್ಥರ ಜತೆಗೆಲ್ಲ ರಾಜಿ ಮಾಡಿಕೊಳ್ಳುವವರಲ್ಲ. ಹಿಂದಿನಿಂದ ಮಾತಾನಾಡುವ ಕೆಟ್ಟ ಚಾಳಿ ನಿಮಗಿಲ್ಲ. ನೀವು ಎಲ್ಲರ ಜತೆ ಬೆರೆಯುವ ರೀತಿಯಿಂದಾಗಿ ಎಲ್ಲರಿಗೂ ನೀವು ಎಂದರೆ ಬಹಳ ಇಷ್ಟ. ನೀವು ಉದಾರ ಮನೋಭಾವದವರು. ಪ್ರತಿಫಲದ ಅಪೇಕ್ಷೆಯೂ ನಿಮಗಿಲ್ಲ.
9- ಹಾವು
ನೀವು ಊಹಿಸಲು ಸಾಧ್ಯವಾಗದ ಗುಣ ಹೊಂದಿರುವವರು. ಯಾವಾಗ ಬಚ್ಚಿಟ್ಟುಕೊಳ್ಳುತ್ತೀರಿ, ಯಾವಾಗ ದಾಳಿ ಎಸಗುತ್ತೀರಿ, ನಿಮ್ಮಲ್ಲಿ ವಿಷ ಇದೆಯೋ ಇಲ್ಲವೋ ಎಂದು ಹೇಳಲಾಗುವುದಿಲ್ಲ. ಮುಂಗುಸಿಯಂಥ ಎದುರಾಳಿಗಳು ಸಿಕ್ಕರೆ ಮಾತ್ರ ನೀವು ತಲೆ ತಗ್ಗಿಸುತ್ತೀರಿ ಹೊರತು, ಉಳಿದಂತೆ ನಿಮ್ಮನ್ನು ಕಂಡರೆ ಎಲ್ಲರೂ ಎಚ್ಚರ ವಹಿಸುತ್ತೀರಿ. ನೀವು ಶೀತರಕ್ತಪ್ರಾಣಿಗಳು. ಎಂಥ ಪರಿಸ್ಥಿತಿಯಲ್ಲೂ ಬದುಕಿ ಬಾಳಲು ಕಲಿತಿರುತ್ತೀರಿ.
ಮುತ್ತಿನ ಉಂಗುರ: ಯಾವ ಕೈಗೆ, ಯಾವ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು ಗೊತ್ತಾ?