ನಿಮ್ಮ ಜನ್ಮ ದಿನಾಂಕಕ್ಕೆ ಭಾಗ್ಯ ತರುವ ಲಕ್ಷ್ಮೀ ಮಂತ್ರ ಇಲ್ಲಿದೆ ನೋಡಿ!

Published : Dec 18, 2025, 09:47 AM IST
lakshmi devi mantra

ಸಾರಾಂಶ

ನ್ಯೂಮರಾಲಜಿ ಪ್ರಕಾರ ನಿಮ್ಮ ಬರ್ತ್‌ಡೇಗೆ ಸೂಕ್ತವಾದ ಲಕ್ಷ್ಮೀ ಮಂತ್ರಗಳೇ (lakshmi devi mantra) ಇವೆ. ನಿಮ್ಮ ಜನ್ಮ ಸಂಖ್ಯೆಗೆ ಅನುಗುಣವಾದ ನಿರ್ದಿಷ್ಟ ಲಕ್ಷ್ಮೀ ಮಂತ್ರಗಳನ್ನು ಪಠಿಸುವುದರಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಿ, ಸಂಪತ್ತು ಮತ್ತು ಐಶ್ವರ್ಯವನ್ನು ಆಕರ್ಷಿಸಬಹುದು.

ನ್ಯೂಮರಾಲಜಿ ಅಥವಾ ಸಂಖ್ಯಾ ಜ್ಯೋತಿಷ್ಯದ ಪ್ರಕಾರ, ನಮ್ಮ ಜನ್ಮ ದಿನಾಂಕ ನಮ್ಮ ವ್ಯಕ್ತಿತ್ವ, ಶಕ್ತಿ, ದುರ್ಬಲತೆ ಮತ್ತು ಹಿಂದಿನ ಜನ್ಮದ ಕರ್ಮಗಳನ್ನೂ ಹೇಳುತ್ತದೆ. ನಿಮ್ಮ ಜನ್ಮ ಸಂಖ್ಯೆಯ ಪ್ರಕಾರ ಹಣ ಹಾಗೂ ಐಶ್ವರ್ಯವನ್ನು ಕೂಡ ಆಕರ್ಷಿಸಬಹುದು ಅನ್ನೋದು ನಿಮಗೆ ಗೊತ್ತೆ? ಇಲ್ಲಿ ನಿಮ್ಮ ಜನ್ಮ ದಿನಾಂಕಕ್ಕೆ ತಕ್ಕಂತೆ ವಿಭಿನ್ನ ಲಕ್ಷ್ಮೀ ಮಂತ್ರಗಳನ್ನು ಕೊಟ್ಟಿದ್ದೇವೆ. ಈ ಮಂತ್ರಗಳನ್ನು ಜಪ ಮಾಡಿದರೆ ಮಹಾಲಕ್ಷ್ಮೀ ದೇವಿಯ ಕೃಪೆದೋರಿ, ನಿಮ್ಮ ಹಣಕಾಸು, ಸಂಪತ್ತಿನಲ್ಲಿ ಬೆಳವಣಿಗೆ ಆಗುತ್ತದೆ. ಹಾಗಾದ್ರೆ ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮಗೆ ಸೂಕ್ತವಾದ ಲಕ್ಷ್ಮೀ ಮಂತ್ರ ಯಾವುದು ಅನ್ನೋದನ್ನು ನೋಡೋಣ:

ಜನ್ಮ ಸಂಖ್ಯೆ: 1, 10, 19, 28

ಆಡಳಿತ ಗ್ರಹ: ಸೂರ್ಯ

ಮಂತ್ರ: ಓಂ ಮಹಾಲಕ್ಷ್ಮೀ ಚ ವಿದ್ಮಹೇ ವಿಷ್ಣು ಪತ್ನೀ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್

ಜನ್ಮ ಸಂಖ್ಯೆ: 2, 11, 20, 29

ಆಡಳಿತ ಗ್ರಹ: ಚಂದ್ರ

ಮಂತ್ರ: ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ

ಜನ್ಮ ಸಂಖ್ಯೆ: 3, 12, 21, 30

ಆಡಳಿತ ಗ್ರಹ: ಗುರು

ಮಂತ್ರ:ಓಂ ಹ್ರೀಂ ಕ್ಲೀಂ ಮಹಾಲಕ್ಷ್ಮ್ಯಾಯೈ ನಮಃ

ಜನ್ಮ ಸಂಖ್ಯೆ: 4, 13, 22, 31

ಆಡಳಿತ ಗ್ರಹ: ರಾಹು

ಮಂತ್ರ: ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ

ಜನ್ಮ ಸಂಖ್ಯೆ: 5, 14, 23

ಆಡಳಿತ ಗ್ರಹ: ಬುಧ

ಮಂತ್ರ: ಓಂ ಸರ್ವಬಾಧಾ ವಿನಿರ್ಮುಕ್ತೋ, ಧನ ಧಾನ್ಯಃ ಸುತಾನ್ವಿತಃ/ ಮನುಷ್ಯೋ ಮತ್‌ಪ್ರಸಾದೇನ ಭವಿಷ್ಯತಿ ನ ಸಂಶಯಃ ಓಂ

ಜನ್ಮ ಸಂಖ್ಯೆ: 6, 15, 24

ಆಡಳಿತ ಗ್ರಹ: ಶುಕ್ರ

ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ

ಜನ್ಮ ಸಂಖ್ಯೆ: 7, 16, 25

ಆಡಳಿತ ಗ್ರಹ: ಕೇತು

ಮಂತ್ರ: ಓಂ ಶ್ರೀಂ ಹ್ರೀಂ ಕ್ಲೀಂ ಐಂ ಸೌಂ ಓಂ ಹ್ರೀಂ ಕ ಅ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ ಸೌಂ ಐಂ ಕ್ಲೀಂ ಹ್ರೀಂ ಶ್ರೀಂ ಓಂ

ಜನ್ಮ ಸಂಖ್ಯೆ: 8, 17, 26

ಆಡಳಿತ ಗ್ರಹ: ಶನಿ

ಮಂತ್ರ: ಯಾ ದೇವಿ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ/ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಜನ್ಮ ಸಂಖ್ಯೆ: 9, 18, 27

ಆಡಳಿತ ಗ್ರಹ: ಮಂಗಳ

ಮಂತ್ರ: ಓಂ ಐಂ ಹ್ರೀಂ ಶ್ರೀಂ ಜ್ಯೇಷ್ಠ ಲಕ್ಷ್ಮೀ ಸ್ವಯಂಭುವೇ/ ಹ್ರೀಂ ಜ್ಯೇಷ್ಠಾಯೈ ನಮಃ

PREV
Read more Articles on
click me!

Recommended Stories

ಮೂಲಾಂಕ 9 ಹೊಂದಿರುವವರಿಗೆ ಜನವರಿಯಿಂದ ಡಿಸೆಂಬರ್ ವರೆಗೆ 2026 ಹೇಗಿರಲಿದೆ?
ಮುರಿದ ಕನ್ನಡಿ ಮನೆಯಲ್ಲಿದ್ದರೆ ಏನೇನಾಗುತ್ತೆ ಗೊತ್ತಾ?