ಕೋಡಿಮಠ ಶ್ರೀಗಳ ಭವಿಷ್ಯ: ದೇಶಕ್ಕೆ ಕಾದಿದೆ ಮತ್ತೊಂದು ಗಂಡಾಂತರ, ಸಮುದ್ರದಲ್ಲಿ 2 ರಾಷ್ಟ್ರ ಮುಳುಗಡೆ

By Sathish Kumar KHFirst Published Jun 8, 2023, 2:50 PM IST
Highlights

ಜಾಗತಿಕವಾಗಿ 2 ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ ಆಗಲಿವೆ. ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದ್ದು, ಜಾಗತಿಕವಾಗಿ ಆಗುವ ಯುದ್ಧದ ಬಾಂಬ್‌ ದಾಳಿಯಿಂದ ನಮ್ಮ ದೇಶದ ಮೇಲೆ ಪರಿಣಾಮ ಬೀರಲಿದೆ.

ಕೋಲಾರ (ಜೂ.08): ರಾಜ್ಯದಲ್ಲಿ ಬಹುಮತದ ಸರ್ಕಾರ ಬರುತ್ತದೆ, ದೇಶದಲ್ಲಿ ದೊಡ್ಡ ದುರಂತ ನಡೆಯುತ್ತದೆ ಎಂದು ಹೇಳಿದಂತೆ ಕಾಂಗ್ರೆಸ್‌ ಬಹುಮತದ ಸರ್ಕಾರ ಹಾಗೂ ಒಡಿಶಾ ರೈಲು ದುರಂತ ನಡೆದಿದೆ. ಆದರೆ, ಮುಂದಿನ ದಿನಗಳಲ್ಲಿ ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದೆ. ಜೊತೆಗೆ, ಜಾಗತಿಕವಾಗಿ ಆಗುವ ಯುದ್ಧದ ಬಾಂಬ್‌ ದಾಳಿಯಿಂದ ನಮ್ಮ ದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜಾಗತಿಕವಾಗಿ 2 ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ ಆಗಲಿವೆ ಎಂದು ಕೋಡಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ ದೇಶಕ್ಕೆ ಸಂಬಂಧಿಸಿದ ಭಯಾನಕ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಜಾಗತಿಕ ಯುದ್ಧದಲ್ಲಿ ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ. ಇದರಿಂದ ದೇಶದಲ್ಲಿ ಅಲ್ಲೋಲ, ಕಲ್ಲೋಲ ಉಂಟಾಗಲಿದೆ ಎಂದು ಹೇಳಿದರು.

ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಕೆಲವು ಪಾಠಗಳು ಮಾತ್ರ ಬೋಧಿಸಲು ಅನುಮತಿ

ಮತ್ತೆ ಕೈವಾರ ತಾತಯ್ಯ ಹುಟ್ಟಿ ಬರ್ತಾರೆ:  ಮತ್ತೊಂದೆಡೆ, ಗಿಡ, ಮರ, ಬಳಿ ದೈವದ, ಆರಾಧ್ಯದ ಸಂಕೇತ, ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೆ ಸಿಕ್ಕಿದೆ ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌. ಆದ್ಯಾತ್ಮ ಬಿಟ್ಟು ಹೋದ್ರೆ ಅವರಿಗೆ ದೈವವೆ ಉತ್ತರ ನೀಡಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶುಭ ಸೂಚನೆ ನೀಡಿದ ಕೋಡಿ ಮಠದ ಸ್ವಾಮೀಜಿ ಹೇಳಿದರು. 

ಜಾಗತಿಕವಾಗಿ 2 ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ:  ಇನ್ನು ಜಾಗತಿಕವಾಗಿ ಈ ವರ್ಷ ತಾಪಮಾನ ತೀವ್ರ ಹೆಚ್ಚಳವಾಗುವ ಮುನ್ಸೂಚನೆಯನ್ನೂ ಕೋಡಿಮಠದ ಶ್ರೀಗಳು ನೀಡಿದ್ದಾರೆ. ಹವಾಮಾನ ವೈಪರೀತ್ಯದಿಂದ ಸಮುದ್ರದ ನೀರಿನ ಮಟ್ಟವು ಹೆಚ್ಚಳವಾಗಿದೆ. ಇದರಿಂದ ಭೂಮಿಯ ಮೇಲೆ ನೀರಿ ಪ್ರಮಾಣ ಏರಿಕೆ ಆಗಲಿದ್ದು, ಸಮುದ್ರ ತೀರದಲ್ಲಿರುವ ಎರಡು 2- 3 ದೇಶಗಳು ನೀರಿನಲ್ಲಿ ಮುಳುಗಡೆ ಆಗಲಿವೆ ಎಂಬ ಭಯಾನಕ ಭವಿಷ್ಯವನ್ನೂ ಶ್ರೀಗಳು ಹೇಳಿದ್ದಾರೆ. ಆದರೆ, ಯಾವ ರಾಷ್ಟ್ರಗಳು, ಯಾವ ದಿಕ್ಕಿನಲ್ಲಿರುವ ರಾಷ್ಟ್ರಗಳು ಮುಳುಗಡೆ ಆಗಲಿವೆ ಎಂಬ ಸುಳಿವನ್ನು ನೀಡಿಲ್ಲ.

ರಾಜ್ಯದಲ್ಲಿ ಮತ್ತೊಬ್ಬ ಇನ್ಸ್‌ಪೆಕ್ಟರ್‌ ಸಾವು: ಹೃದಯಾಘಾತವಾಗಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಮೃತ್ಯು

ಗೋವಧೆಗೆ ಕಾನೂನಿನಲ್ಲಿ ಅವಕಾಶ ಬೇಡ: ಮಂಗಳೂರು (ಜೂ.7): ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯಬಾರದು. ಯಾವುದೇ ಕಾರಣಕ್ಕೂ ಗೋವಿನ ವಧೆಗೆ ಕಾನೂನಿನಲ್ಲಿ ಅವಕಾಶ ನೀಡಬಾರದು ಎಂದು ಕರಾವಳಿ ಜಿಲ್ಲೆಯ ಸ್ವಾಮೀಜಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಇಲ್ಲಿನ ವಿಶ್ವಹಿಂದು ಪರಿಷತ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ‘ಎಮ್ಮೆ ಕಡಿಯಬಹುದಾದರೆ ಹಸು ಯಾಕೆ ಕಡಿಯಬಾರದು’ ಎಂಬ ರಾಜ್ಯ ಪಶುಸಂಗೋಪನಾ ಸಚಿವ ವೆಂಕಟೇಶ್‌ ಅವರ ಹೇಳಿಕೆಯನ್ನು ಸಂತರು ಹಾಗೂ ಇಡೀ ಹಿಂದು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.

click me!