ಈ ರಾಶಿಯ ಮಹಿಳೆಯರಿಗೆ ಕಿರಿಯ ಯುವಕರು ಅಂದ್ರೆ ಪಂಚಪ್ರಾಣ..!

By Sushma Hegde  |  First Published Jun 8, 2023, 2:24 PM IST

ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೂ ಎರಡು ಹೃದಯಗಳ ನಡುವೆ ಪ್ರೀತಿ love ಚಿಗುರುವ ವಯಸ್ಸಿಲ್ಲ ಹಂಗು ಕೂಡ ಇಲ್ಲ. ಪವಿತ್ರವಾದ ಪ್ರೀತಿ ಹುಟ್ಟಲು ಯಾವ ವಯಸ್ಸಾದರೂ ಆಗಬಹುದು. ಅನೇಕ ಮಹಿಳೆಯರು ತಮಗಿಂತ ಕಿರಿಯ ಪುರುಷ (male) ರನ್ನು ಇಷ್ಟ ಪಡುತ್ತಾರೆ. ಕಿರಿಯ ಪುರುಷರ ಕಡೆ ಒಲವು ತೋರುವ ಕೆಲವು ರಾಶಿಚಕ್ರ  (Zodiac) ಚಿಹ್ನೆಗಳ ಮಾಹಿತಿ ಇಲ್ಲಿದೆ.


ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೂ ಎರಡು ಹೃದಯಗಳ ನಡುವೆ ಪ್ರೀತಿ love ಚಿಗುರುವ ವಯಸ್ಸಿಲ್ಲ ಹಂಗು ಕೂಡ ಇಲ್ಲ. ಪವಿತ್ರವಾದ ಪ್ರೀತಿ ಹುಟ್ಟಲು ಯಾವ ವಯಸ್ಸಾದರೂ ಆಗಬಹುದು. ಅನೇಕ ಮಹಿಳೆಯರು ತಮಗಿಂತ ಕಿರಿಯ ಪುರುಷ (male) ರನ್ನು ಇಷ್ಟ ಪಡುತ್ತಾರೆ. ಕಿರಿಯ ಪುರುಷರ ಕಡೆ ಒಲವು ತೋರುವ ಕೆಲವು ರಾಶಿಚಕ್ರ  (Zodiac) ಚಿಹ್ನೆಗಳ ಮಾಹಿತಿ ಇಲ್ಲಿದೆ.

ಕೆಲವರು ತಮ್ಮ ಸೂಜಿಗಲ್ಲಿನ ನೊಟದಿಂದಲೇ ತಮಗಿಂತ ಹಿರಿಯ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇತರರನ್ನು ತಮ್ಮೆಡೆಗೆ ಸೆಳೆದುಕೊಳ್ಳುವಂತಹ ಶಕ್ತಿಯಿರುವ ಯುವಕ (young man) ರಿಗೆ, ಮಹಿಳೆಯರು ಮನಸೋಲುತ್ತಾರೆ. ಕೆಲ ರಾಶಿಯ ಮಹಿಳೆಯರು ಕಿರಿಯ ಪುರುಷರನ್ನು ಇಷ್ಟ ಪಡುತ್ತಾರೆ. ಯಾವ ರಾಶಿಯವರು? ಇಲ್ಲಿದೆ ಮಾಹಿತಿ.

Tap to resize

Latest Videos

ಕಟಕ ರಾಶಿ (Cancer)

ಈ ರಾಶಿಯ ಮಹಿಳೆಯರು ಕಿರಿಯ ಪುರುಷರೊಂದಿಗೆ ಡೇಟ್ (Date) ಮಾಡಲು ಇಷ್ಟ ಪಡುತ್ತಾರೆ. ಇವರು ತಮ್ಮ ಪಾರ್ಟ್ನರ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರನ್ನು ತುಂಬಾ ಪ್ರೀತಿಸುತ್ತಾರೆ. ಇನ್ನೊಂದು ಕಾರಣವೆಂದರೆ ಈ ಮಹಿಳೆಯರು ಅಂತಹ ಸಂಬಂಧ (relationship) ಗಳಲ್ಲಿ ತಮ್ಮ ತಪ್ಪುಗಳನ್ನು ಮರೆಮಾಡಲು ಬಯಸುತ್ತಾರೆ.

ಮೇಷ ರಾಶಿ (Aries)

ಇದು ಅತ್ಯಂತ ಪ್ರಬುದ್ಧ  (mature) ರಾಶಿಚಕ್ರದ ಚಿಹ್ನೆಗಳಲ್ಲಿ ಒಂದು. ಈ ರಾಶಿಯ ಮಹಿಳೆಯರು ಯುವಕರಿಗೆ ಆದ್ಯತೆ ನೀಡುತ್ತಾರೆ. ಕಿರಿಯರ ಜೊತೆ ಹೆಚ್ಚು ಆಕರ್ಷಣೆ ಹೊಂದಿರುತ್ತಾರೆ. ಕಿರಿಯ ಪುರುಷರು ನಿಮಗೆ ಉತ್ಸಾಹ (passion) ಮತ್ತು ಸಂತೋಷ ನೀಡುತ್ತಾರೆ.

ಕನಸಿನಲ್ಲಿ 'ಎತ್ತಿನ ಗಾಡಿ' ಬಂದರೆ ಏನಾಗುತ್ತೆ?: ಕಾಗೆ ಕಂಡರೆ ವಿಪತ್ತು ...

 

ವೃಷಭ ರಾಶಿ (Taurus)

ವೃಷಭ ರಾಶಿಯವರು ತಮ್ಮ ನೋಟದಲ್ಲೇ ಆತ್ಮವಿಶ್ವಾಸ (Confidence) ವನ್ನು ಹೊಂದಿರುತ್ತಾರೆ. ಅದು ಅವರನ್ನು ಇತರರಿಗೆ ಬಹಳ ಆಕರ್ಷಕ (attractive) ವಾಗಿ ಕಾಣುವಂತೆ ಮಾಡುತ್ತದೆ. ಇವರು ನಿಜವಾಗಿಯೂ ರಕ್ಷಣಾತ್ಮಕರಾಗಿದ್ದಾರೆ. ಬೇರೆಯವರು ತೊಂದರೆಯಲ್ಲಿ ಇದ್ದರೆ ಅವರನ್ನು ರಕ್ಷಣೆ ಮಾಡುತ್ತಾರೆ. ಆದ್ದರಿಂದ ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ಸಾಮಾನ್ಯವಾಗಿ ತಮ್ಮ ಪಾರ್ಟ್ನರ್ (Partner) ತಮಗಿಂತ ಕಿರಿಯ ಇದ್ದರೆ ಉತ್ತಮ ಎಂದುಕೊಳ್ಳುತ್ತಾರೆ.

ಮಿಥುನ ರಾಶಿ  (Gemini)

ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ತಮ್ಮನ್ನು ಹೋಲುವ ವ್ಯಕ್ತಿ (person) ಗಳನ್ನು ಹುಡುಕುತ್ತಾರೆ. ಮಿಥುನ ರಾಶಿಯವರು ಸಾಮಾನ್ಯವಾಗಿ ತುಂಬಾ ಮೋಜಿ (fun)ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮ ವಯಸ್ಸಿಗಿಂತ ಕಡಿಮೆ ಮನಸ್ಥಿತಿ ಹೊಂದಿರುತ್ತಾರೆ. ಆದ್ದರಿಂದ, ಅವರು ತಮ್ಮ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೊಂದಿಸುವ ಮತ್ತು ಅದೇ ಆದ್ಯತೆಗಳು ಮತ್ತು ಇಷ್ಟಗಳನ್ನು ಹೊಂದಿರುವ ಜನರನ್ನು ಪ್ರೀತಿಸುತ್ತಾರೆ.

 

ವೃಶ್ಚಿಕ ರಾಶಿ (Scorpio)

ಇವರು ತಮ್ಮ ಕಾಂತೀಯ ವ್ಯಕ್ತಿತ್ವ, ಉತ್ಸಾಹ ಮತ್ತು ಆಳವಾದ ಮಟ್ಟದಲ್ಲಿ ಇತರರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ಭಾವೋದ್ರಿಕ್ತ ಮತ್ತು ನಿಕಟ ಸಂಬಂಧ (close relationship)ಗಳನ್ನು ಪ್ರೀತಿಸುತ್ತಾರೆ. ಕಿರಿಯ ಜನರು ಈ ಗುಣಗಳನ್ನು ಹೊಂದಿರುವುದರಿಂದ, ಮಹಿಳೆಯರು ಕಿರಿಯ ಪಾಲುದಾರರನ್ನು ಹುಡುಕುವುದರಲ್ಲಿ ಇಷ್ಟ ಪಡುತ್ತಾರೆ. ಈ ಮಹಿಳೆಯರು ವಯಸ್ಸಾದ ಪುರುಷನೊಂದಿಗೆ ಡೇಟಿಂಗ್ ಮಾಡುವುದು ನೀರಸ (boring) ಎಂದು ಭಾವಿಸುತ್ತಾರೆ, ಆದ್ದರಿಂದ ತಮ್ಮ ಜೀವನವನ್ನು ಮಜಾ ಮಾಡಲು ಕಿರಿಯ ಪುರುಷರೊಂದಿಗೆ ಇರಲು ಬಯಸುತ್ತಾರೆ.


 

click me!