
ರಾಶಿ ಮನುಷ್ಯನ ಗುಣ ತಿಳಿಯಲು ಸಹಕರಿಸುತ್ತದೆ. ಅಷ್ಟೇ ಏಕೆ, ಕೆಲಸ, ಪ್ರೀತಿ, ಜೀವನವೆಲ್ಲವೂ ರಾಶಿ ಮೂಲಕ ತಿಳಿಯಬಹುದು. ಸಂಗಾತಿ ಬಗ್ಗೆ ತಿಳಿಯಬೇಕು ಎಂದಾದರೆ ಅವರ ರಾಶಿ ಬಗ್ಗೆ ತಿಳಿದುಕೊಳ್ಳಿ. ಇದರಿಂದ ಅವರಲ್ಲಿ ಇರುವ ನೆಗೆಟಿವ್ ಗುಣದ ಬಗ್ಗೆಯೂ ತಿಳಿಯುತ್ತದೆ. ಆ ಬಗ್ಗೆ ತಿಳಿದುಕೊಂಡರೆ ಅವರ ಜೊತೆ ಚೆನ್ನಾಗಿ ಅರಿತುಕೊಂಡು ಬಾಳಬಹುದು.
ಮೇಷ: ಇವ್ರು ತುಂಬಾ ಕೋಪಿಷ್ಠರು. ಸಣ್ಣ ವಿಷಯಗಳಿಗೂ ಹೆಚ್ಚು ಉತ್ಸುಕರಾಗಿರುತ್ತಾರೆ. ಅವರ ಅತಿರೇಖ ಉತ್ಸಾಹಿ ಗುಣ ಅವರಿಗೆ ಯಶಸ್ಸು ಸಿಗದಂತೆ ಮಾಡುತ್ತದೆ.
ವೃಷಭ: ರಿಲೇಷನ್‌ಶಿಪ್ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾರೆ. ಅಸೂಯೆ ಸ್ವಭಾವ ಇವರದ್ದಾಗಿರುತ್ತದೆ. ಹಠಮಾರಿಯೂ ಹೌದು.
ಮಿಥುನ : ಮಿಥುನ ರಾಶಿಯವರು ಮೂಡಿ ಸ್ವಭಾವದವರು. ಬದಲಾಗುವ ಮನಸ್ಥಿತಿ ಸಂಬಂಧ ಆತ್ಮೀಯರಿಂದ ದೂರವಾಗುತ್ತಾರೆ.
ಕಟಕ: ತುಂಬಾ ಸೂಕ್ಷ್ಮ ಸ್ವಭಾವದ ಜನ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೊರಗುತ್ತಾರೆ.
ಸಿಂಹ : ಅಧಿಕಾರ ಚಲಾಯಿಸುವುದು ಈ ರಾಶಿಯವರ ಗುಣ. ಇದೇ ಇವರ ಮೈನಸ್ ಪಾಯಿಂಟ್. ಇವರ ಅಹಂಕಾರ ಲವ್ ಲೈಫ್ ಮೇಲೆ ಪರಿಣಾಮ ಬೀಳುತ್ತದೆ.
ಕನ್ಯಾ : ಈ ರಾಶಿಯವರು ಜಗಳಗಂಟರು. ಪ್ರೀತಿಸಿದರೆ ಹುಚ್ಚರಂತೆ ಪ್ರೀತಿಸುತ್ತಾರೆ. ದ್ವೇಷಿಸಿದರೆ ಮಾತ್ರ ಕ್ಷಮಿಸೋದೇ ಇಲ್ಲ.
ತುಲಾ: ನಿರ್ಧಾರವನ್ನು ಬೇಗ ಬದಲಾಯಿಸುವ ಗುಣ ಇವರದ್ದು. ಜೊತೆಗೆ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವುದಿಲ್ಲ.
ವೃಶ್ಚಿಕ: ಸೇಡು ತೀರಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಇವರು. ರಿಲೇಶನ್‌ಶಿಪ್‌ನಲ್ಲಿ ಹೆಚ್ಚು ಪೊಸೆಸಿವ್.
ಧನು: ತಮ್ಮ ನೇರ, ಕೆಟ್ಟ ಮಾತುಗಳಿಂದ ನೋವನ್ನುಂಟು ಮಾಡುತ್ತಾರೆ. ಯಾವ ವಿಷಯದಲ್ಲೂ ಇವರು ಸ್ಥಿರವಾಗಿ ಯೋಚಿಸಲಾರರು.
ಮಕರ: ಇವರಿಗೆ ತಮ್ಮೆದುರು ಇರುವವರಿಗೆ ಗೌರವ ಕೋಡುವುದೇ ಗೊತ್ತಿಲ್ಲ. ತಮ್ಮದೇ ಆದ ರೂಲ್ಸ್ ಫಾಲೋ ಮಾಡುತ್ತಾರೆ.
ಕುಂಭ: ಇತರರಿಂದ ದೂರವಿರಲು ಇವರು ಇಷ್ಟಪಡುತ್ತಾರೆ. ತಮ್ಮಿಚ್ಛೆಯಂತೆಯೇ ಎಲ್ಲವೂ ಆಗಬೇಕೆಂದುಕೊಳ್ಳುತ್ತಾರೆ.
ಮೀನ: ತಮ್ಮದೇ ಪ್ರಪಂಚದಲ್ಲಿ ಕಳೆದು ಹೋಗುತ್ತಾರೆ ಈ ರಾಶಿಯವರು.