ಕೈ ತುಂಬಾ ದುಡ್ಡು ಇರ್ಬೇಕಂದ್ರೆ ಹೀಗೆ ಮಾಡಿ!

By Web Desk  |  First Published Sep 21, 2019, 3:30 PM IST

'ಲಕ್ಷ್ಮೀ' ಎಂಬ ಹೆಸರನ್ನು 'ಲಕ್ಷ್'  ಎಂಬ ಪದದಿಂದ ಸೃಷ್ಟಿಸಲಾಗಿದೆ. ಇದರರ್ಥ ಗುರಿ, ಗಮನ ಎಂದು. ಸಾಮಾನ್ಯವಾಗಿ ತಾಯಿ ಲಕ್ಷ್ಮಿಯನ್ನು ದುಡ್ಡಿನ ಅಧಿದೇವತೆ ಎಂದು ನೋಡಲಾಗುತ್ತದೆ. ಆಕೆ ಕೇವಲ ದುಡ್ಡಿನ ದೇವತೆಯಷ್ಟೇ ಅಲ್ಲ, ಸಮೃದ್ಧಿ, ಸೌಂದರ್ಯ ಹಾಗೂ ಅದೃಷ್ಟದ ತಾಯಿ. ಲಕ್ಷ್ಮಿ ಮಂತ್ರಗಳನ್ನು ಧನಸಾಧನೆಗಾಗಿ ಮಾತ್ರವಲ್ಲ, ಗುರಿಸಾಧನೆಗಾಗಿ ಹೇಳಬೇಕು. 


ವಿಷ್ಣುವಿನ ಶಕ್ತಿರೂಪಿಣಿಯಾದ ತಾಯಿ ಲಕ್ಷ್ಮಿಯನ್ನು ಸಮೃದ್ಧಿ ಹಾಗೂ ಸಂಪತ್ತಿನ ತಾಯಿ ಎನ್ನಲಾಗುತ್ತದೆ. ಆಕೆ ಒಲಿದ ಮನೆಯಲ್ಲಿ ಸದಾ ಶ್ರೀಮಂತಿಕೆ, ಸಂಪತ್ತು, ನೆಮ್ಮದಿ ತುಂಬಿ ತುಳುಕುತ್ತಿರುತ್ತದೆ. ಹಣದ ಅಭಾವದಿಂದ ಹುಟ್ಟುವ ಯಾವ ಬಾಧೆಗಳೂ ಲಕ್ಷ್ಮೀ ಒಲಿದ ಮನೆಯಲ್ಲಿರಲು ಸಾಧ್ಯವಿಲ್ಲ. 

ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

Tap to resize

Latest Videos

undefined

ಪದ್ಮ, ಕಮಲ, ವಿಷ್ಣುಪ್ರಿಯ, ಕಲ್ಯಾಣಿ, ವೈಷ್ಣವಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಆಕೆಯ ನಾಲ್ಕು ಕೈಗಳು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷವನ್ನು ಸೂಚಿಸುತ್ತವೆ ಎನ್ನಲಾಗುತ್ತದೆ. ಆಕೆಯನ್ನು ಒಲಿಸಿಕೊಳ್ಳುವ ಮಂತ್ರಗಳ ದೈನಂದಿನ ಪಠಣದಿಂದ ವೃತ್ತಿಬದುಕಿನಲ್ಲಿ ಏಳ್ಗೆ, ಅಧಿಕಾರ, ಶ್ರೀಮಂತಿಕೆಯನ್ನು ಕಾಣಬಹುದು. ಸಂಬಳದ ಕೆಲಸದಲ್ಲಿರುವವರು ಪ್ರಮೋಶನ್ ಪಡೆಯಲು, ಬಿಸ್ನೆಸ್ ಮಾಡುವವರು ಲಾಭ ಹೆಚ್ಚಿಸಿಕೊಳ್ಳಲು, ವ್ಯಾಪಾರ ಮಾಡುವವರು ಹೆಚ್ಚು ಗಿರಾಕಿಗಳನ್ನು ಸೆಳೆಯಲು  ಲಕ್ಷ್ಮೀ ಮಂತ್ರದಿಂದ ಸಾಧ್ಯ.

ಈ ಮಂತ್ರವನ್ನು ಜಪವಾಗಿ ಜೋರಾಗಿ ಪಠಿಸುವುದರಿಂದ ಹುಟ್ಟುವ ವೈಬ್ರೇಶನ್‌ನ ಎನರ್ಜಿಯು ಸಂಪತ್ತು ಹಾಗೂ ಉನ್ನತಿಯನ್ನು ಸೆಳೆಯಬಲ್ಲ ಶಕ್ತಿ ಹೊಂದಿದೆ. ಪ್ರತಿ ಮಂತ್ರಕ್ಕೂ ಅದರದೇ ಆದ ವೈಬ್ರೇಶನ್ ಹಾಗೂ ದಿವ್ಯತೇಜಸ್ಸಿದೆ. ಈ ಮಂತ್ರಗಳಲ್ಲಿರುವ ಎನರ್ಜಿಯು ನಿಮ್ಮ ಎನರ್ಜಿಯೊಂದಿಗೆ ಸೇರಲು ಕೆಲ ಸಮಯ ಬೇಕಾಗುತ್ತದೆ. ಯಶಸ್ಸು ಹಾಗೂ ಕಾರ್ಯಸಾಧನೆಗಾಗಿ ಲಕ್ಷ್ಮೀ ಮಂತ್ರ ಜಪ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ರೋಗ ರುಜಿನ ದೂರವಾಗಲು ವಾಸ್ತು ಟಿಪ್ಸ್...

ಲಕ್ಷ್ಮೀಗೆ ಇಷ್ಟದ ಹೂವುಗಳು: ಗುಲಾಬಿ ಹಾಗೂ ಕಮಲ

ಲಕ್ಷ್ಮೀ ಮಂತ್ರ ಪಠಣಕ್ಕೆ ಬಳಸುವ ಜಪಮಾಲೆ: ಸ್ಪಟಿಕ ಮಾಲೆ ಹಾಗೂ ಕಮಲಘಟ ಮಾಲೆ

ಲಕ್ಷ್ಮೀ ಮಂತ್ರವನ್ನು ಎಷ್ಟು ಬಾರಿ ಹೇಳಬೇಕು: 72 ದಿನಗಳಲ್ಲಿ 1,25,000 ಬಾರಿ

ಲಕ್ಷ್ಮೀ ಮಂತ್ರ ಪಠಣಕ್ಕೆ ಅತ್ಯುತ್ತಮ ಸಮಯ: ಶುಕ್ಲ ಪಕ್ಷ ಪೂರ್ಣಿಮ ತಿಥಿ, ಚಂದ್ರಾವಳಿ, ಶುಭ ನಕ್ಷತ್ರ ಜಗನ್ಮಾತೆಯನ್ನು ಒಲಿಸಿಕೊಳ್ಳುವ ಜಪಗಳಿವು.

1. ಲಕ್ಷ್ಮೀ ಬೀಜಮಂತ್ರ
||ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ||

2. ಲಕ್ಷ್ಮೀ ಬೀಜಮಂತ್ರ 2
||ಓಂ ಶ್ರಿಂಗ್ ಶ್ರೀಯೇ ನಮಃ||

3. ಲಕ್ಷ್ಮೀ ಗಾಯತ್ರಿ ಮಂತ್ರ

||ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ||

4. ಮಹಾಲಕ್ಷ್ಮಿ ಮಂತ್ರ
ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ| ಮನುಷ್ಯೋ ಮತ್ಪ್ರಸಾದೇನ್ ನ ಸನ್ಶಯ ಓಂ||

5. ಲಕ್ಷ್ಮೀ ಮಂತ್ರ 1
||ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ತ್ರಿಭುವವನ್ ಮಹಾಲಕ್ಷ್ಮೈ ಅಸ್ಮಾಕಂ ದಾರಿದ್ರೈ ನಾಶೈ ಪ್ರಚುರ್ ಧನ್ ದೇಹಿ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ||

6. ಲಕ್ಷ್ಮೀ ಮಂತ್ರ 2
||ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಸಾಂಗ್ ಓಂ ಹ್ರಿಂಗ್ ಕಾ ಅ ಇ ಲ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ್ ಹ್ರಿಂಗ್ ಸೌಂಗ್ ಐಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ||

7. ಲಕ್ಷ್ಮೀ ಮಂತ್ರ 3
||ಓಂ ಹ್ರಿಂಗ್ ಶ್ರಿಂಗ್ ಕ್ರೀಂಗ್ ಶ್ರಿಂಗ್ ಕ್ರೀಂಗ್ ಕ್ಲಿಂಗ್ ಶ್ರಿಂಗ್ ಮಹಾಲಕ್ಷ್ಮೀ ಮಮಗ್ರಿಹೇ ಧನಮ್ ಪೂರೇ ಪೂರೇ ಚಿಂತಾಯೈ ದೂರೇ ದೂರೇ ಸ್ವಾಹಾ||

8. ಜೇಷ್ಠ್ ಲಕ್ಷ್ಮಿ ಮಂತ್ರ
||ಓಂ ಐಂಗ್ ಹ್ರಿಂಗ್ ಶ್ರಿಂಗ್ ಜೇಷ್ಠ್ ಲಕ್ಷ್ಮೀ ಸ್ವಯಂಭುವೇ ಹಿಂಗ್ ಜೇಷ್ಠತೈ ನಮಃ||

9. ಶ್ರೀ ಲಕ್ಷ್ಮೀ ನರಸಿಂಹ ಮಂತ್ರ
|| ಓಂ ಹ್ರಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮೀ ನರಸಿಂಗೇ ನಮಃ|| ಓಂ ಕ್ಲಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮೀ ದೇವೈ ನಮಃ||

10. ಏಕದಶಾಕ್ಷರ ಸಿದ್ಧ ಲಕ್ಷ್ಮೀ ಮಂತ್ರ
|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧಾ ಲಕ್ಷ್ಮೈ ನಮಃ||

11. ದ್ವಾದಶಾಕ್ಷರ ಮಹಾಲಕ್ಷ್ಮಿ ಮಂತ್ರ
|| ಓಂ ಐಂಗ್ ಹ್ರಿಂಗ್ ಶೃಂಗ್ ಕ್ಲಿಂಗ್ ಸಾ ಜಗತ್ಪ್ರಸೂತ್ಯೈ ನಮಃ||

click me!