
ಫೆಂಗ್ ಶುಯಿಯಲ್ಲಿ ಹಳದಿ ಬಣ್ಣಕ್ಕೆ ಹೆಚ್ಚಿನ ಮಹತ್ವವಿದೆ. ಸಂತೋಷ, ಕ್ರಿಯಾಶೀಲತೆ, ಸಾಮರ್ಥ್ಯ, ಪ್ರಸನ್ನತೆ, ಸಾಮಾಜಿಕತೆಯ ಪ್ರತೀಕ ಹಳದಿ. ಇದು ವ್ಯಕ್ತಿಯ ಬೌದ್ಧಿಕತೆಯನ್ನು ಹೆಚ್ಚಿಸುತ್ತದೆ. ಮನಃಶಾಂತಿ ಬಯಸುವವರ ಮೇಲೆ ಹಳದಿ ಬಣ್ಣವನ್ನು ಪ್ರಯೋಗಿಸಲಾಗುತ್ತದೆ.
ಹಳದಿ ಬಳಕೆ ಹೇಗೆ?
- ಹಳದಿ ಬಣ್ಣ ಅಗ್ನಿಯ ತತ್ವವನ್ನು ಪ್ರತಿನಿಧಿಸುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ಬಣ್ಣ ಇನ್ನೊಬ್ಬ ವ್ಯಕ್ತಿಯನ್ನು ತನ್ನೆಡೆಗೆ ಆಕರ್ಷಿಸುವಂತೆ ಮಾಡುತ್ತದೆ.
- ಹಳದಿ ಬಣ್ಣ ಕಿಚನ್‌ಗೆ ಬೆಸ್ಟ್. ಯಾಕೆಂದರೆ ಈ ಬಣ್ಣ ಪರಿವಾರದವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
- ಮಕ್ಕಳ ಕೋಣೆಯಲ್ಲಿಯೂ ಹಳದಿ ಬಣ್ಣ ಪ್ರಯೋಗ ಮಾಡಬಹುದು. ಲಿವಿಂಗ್ ರೂಮಿಗೂ ಹಳದಿ ಹೊಂದುತ್ತೆ.
- ಮನೆ ಅಲಂಕಾರಕ್ಕಾಗಿ ಹಳದಿ ಹೂವುಗಳನ್ನು ಇಟ್ಟರೆ ಶುಭ.
- ಹಳದಿ ತಾಜಾತನದ ಅನುಭವ ನೀಡುತ್ತದೆ. ಆದುದರಿಂದ ಬೆಡ್ ರೂಮಿಗೂ ಇದು ಓಕೆ.
- ಏನಾದರೂ ಪರೀಕ್ಷೆ ಬರೆಯಬೇಕು ಮತ್ತು ಯಾವುದೇ ಹೊಸ ವಿಷಯಕ್ಕೆ ತಯಾರಿ ಮಾಡಬೇಕು ಎಂದರೆ ಮನೆಯ ಈಶಾನ್ಯ ಭಾಗದಲ್ಲಿ ಹಳದಿ ಬಣ್ಣದ ವಸ್ತುಗಳನ್ನಿಡಿ. ಇಲ್ಲಿ ಫೋಟೋ, ಲ್ಯಾಂಪ್, ಹೂವು, ಕ್ರಿಸ್ಟಲ್ ಬಾಲ್ ಅಥವಾ ಕ್ಯಾಂಡಲ್ ಇಡಬಹುದು.
- ಅಂತರ್ಮುಖಿಯಾಗಿದ್ದು, ಜನರೊಂದಿಗೆ ಬೆರೆಯಲು ಭಯವೆಂದಾದರೂ ಹಳದಿ ಬಣ್ಣ ಬಳಸಿ. ಇದು ಜನರಲ್ಲಿ ಮಾತನಾಡಲು ನಿಮಗೆ ಪ್ರೇರಣೆ ನೀಡುತ್ತದೆ.
-ಆತ್ಮವಿಶ್ವಾಸ ಕಡಿಮೆ ಇದ್ದವರೂ ಹಳದಿ ಬೆಳೆಸಿದರೆ, ಕಾನ್ಫಿಡೆಂಟ್ ಆಗ್ತೀರಿ.
- ಧನ, ವೈಭವ ಮತ್ತು ಸಮೃದ್ಧಿಗೂ ಹಳದಿಯೇ ಬೆಸ್ಟ್.
- ಗಾಢ ಹಳದಿ ಬಣ್ಣವನ್ನು ಪೂರ್ವ ಭಾಗದಲ್ಲಿ ಬಳಸಿದರೆ ಮನೆಯವರ ಅರೋಗ್ಯ ಮತ್ತು ಪರಿವಾರದ ಸಂತೋಷಕ್ಕೆ ನಾಂದಿ ಹಾಡುತ್ತದೆ.