Shirdi Sai Baba: ಶಿರಡಿ ಸಾಯಿ ಬಾಬಾ ನುಡಿದ ಈ ನೀತಿ ಪಾಲಿಸಿದರೆ ಬಾಳೆಲ್ಲಾ ಬೆಳಕು!

Published : Nov 23, 2025, 10:08 PM IST
shirdi sai baba

ಸಾರಾಂಶ

ಹಿಂದೂ ಮತ್ತು ಮುಸ್ಲಿಂ ಇಬ್ಬರಿಂದಲೂ ಪೂಜಿಸಲ್ಪಡುವ ಶಿರಡಿ ಸಾಯಿ ಬಾಬಾ (Shirdi Sai Baba) ಅವರು ಸರಳ ಜೀವನ ನಡೆಸಿದ ಮಹಾನ್ ಸಂತ. ಅವರ ಸರಳ ಸುಂದರ ಬೋಧನೆಗಳು ನಮ್ಮ ಜೀವನಕ್ಕೆ ಹೇಗೆ ಮಾರ್ಗದರ್ಶನ ನೀಡಬಲ್ಲವು ನಿಮಗೆ ಗೊತ್ತಿರಲಿ. 

ಶಿರಡಿ ಸಾಯಿ ಬಾಬಾ (Shirdi Sai Baba) ಅವರು ದೇಶದ ಬಹು ಜನ ಆರಾಧಿಸುವ ಸಂತ, ಆಧ್ಯಾತ್ಮಿಕ ನಾಯಕ, ಗುರು, ಕರುಣಾಮಯಿ. ಶಿರಡಿಯಲ್ಲಿ ಇರುವ ಇವರ ದೇವಾಲಯಕ್ಕೆ ದೇಶಾದ್ಯಂತದಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಅವರನ್ನು ಹಿಂದೂ ಮತ್ತು ಮುಸ್ಲಿಂ ಭಕ್ತರು ಇಬ್ಬರೂ ಪೂಜಿಸುತ್ತಿದ್ದರು. ಅವರು ವಾಸಿಸುತ್ತಿದ್ದ ಮಸೀದಿಗೆ ʼದ್ವಾರಕಾಮಾಯಿʼ ಎಂಬ ಹಿಂದೂ ಹೆಸರನ್ನು ನೀಡಿದರು, ಮುಸ್ಲಿಂ ಆಚರಣೆಗಳನ್ನು ಆಚರಿಸಿದರು, ಎರಡೂ ಸಂಪ್ರದಾಯಗಳಿಂದ ಬಂSದ ಪದಗಳು ಮತ್ತು ಅಂಕಿಗಳನ್ನು ಬಳಸಿ ಕಲಿಸಿದರು. ಅವರು ಸರಳ ಭಿಕ್ಷುಕನಂತೆ ಕಾಣುತ್ತಿದ್ದರು. ಹರಿದ ಬಟ್ಟೆಗಳನ್ನು ಧರಿಸುತ್ತಿದ್ದರು. ಯಾವುದೇ ಭೌತಿಕ ವಸ್ತು ಬಳಸುತ್ತಿರಲಿಲ್ಲ. ತಮ್ಮ ಬಳಿಗೆ ಬಂದ ಪ್ರತಿಯೊಬ್ಬರ ಕರ್ಮಗಳನ್ನು ಧುನಿಯಲ್ಲಿ ಸುಡುತ್ತಿದ್ದರು. ಬಾಬಾ 1918ರಲ್ಲಿ ತಮ್ಮ ಭೌತಿಕ ರೂಪವನ್ನು ತೊರೆದರು. ಆದರೆ ಅವರ ದೈವಿಕ ಶಕ್ತಿ ಹಾಗೆಯೇ ಕರುಣೆಯನ್ನು ಭಕ್ತರಿಗೆ ತೋರಿಸುತ್ತಿದೆ. ಅವರ ಸುಪ್ರಸಿದ್ಧ ನೀತಿವಾಕ್ಯಗಳು ನಮ್ಮ ಬಾಳನ್ನು ಬೆಳಗಬಲ್ಲವು.

- ಸಬ್ಕಾ ಮಾಲಿಕ್ ಏಕ್- ಎಲ್ಲರ ಮಾಲಿಕನಾದ ದೇವನು ಒಬ್ಬನೇ.

- ಎಲ್ಲ ಮನುಷ್ಯರಲ್ಲಿಯೂ ದೈವಿಕತೆಯನ್ನು ನೋಡಿ.

- ಜಗತ್ತಿನಲ್ಲಿ ಹೊಸದೇನಿದೆ? ಏನೂ ಇಲ್ಲ. ಜಗತ್ತಿನಲ್ಲಿ ಹಳೆಯದೇನಿದೆ? ಏನೂ ಇಲ್ಲ. ಎಲ್ಲವೂ ಯಾವಾಗಲೂ ಇತ್ತು ಮತ್ತು ಯಾವಾಗಲೂ ಇರುತ್ತದೆ.

- ಸಸ್ಯಗಳು ಹಣ್ಣು ತುಂಬಿದಾಗ ಬಾಗುತ್ತವೆ. ಹಾಗೇ ನೀವೂ ನೀವು ಹಣವಂತರಾಗಿದ್ದರೆ, ವಿನಯವಂತರಾಗಿರಿ.

- ಉದಾರವಾಗಿರಿ, ದಾನಶೀಲರಾಗಿರಿ. ಆದರೆ ದುಂದುವೆಚ್ಚ ಮಾಡಬೇಡಿ.

- ಮಾನವನಾಗಿರಲಿ ಅಥವಾ ಯಾವುದೇ ಜೀವಿಯಾಗಿರಲಿ. ನಿಮ್ಮ ಬಳಿಗೆ ಬಂದಾಗ ಕರುಣೆಯಿಂದ ಕಾಣಿ.

- ನನಗೆ ಯಾರ ಮೇಲೂ ಕೋಪ ಬರುವುದಿಲ್ಲ. ತಾಯಿ ತನ್ನ ಮಕ್ಕಳ ಮೇಲೆ ಕೋಪಗೊಳ್ಳುತ್ತಾಳೆಯೇ? ಸಾಗರವು ನದಿಗಳಿಗೆ ನೀರನ್ನು ಹಿಂತಿರುಗಿಸುತ್ತದೆಯೇ?

- ನಮ್ಮ ಕರ್ತವ್ಯವೇನು? ಸರಿಯಾಗಿ ವರ್ತಿಸುವುದು. ಅಷ್ಟೇ ಸಾಕು.

- ದೇವರು ದೂರದಲ್ಲಿಲ್ಲ. ಅವನು ಮೇಲಿನ ಸ್ವರ್ಗದಲ್ಲೂ ಇಲ್ಲ. ಕೆಳಗಿನ ನರಕದಲ್ಲೂ ಇಲ್ಲ. ಅವನು ಯಾವಾಗಲೂ ನಿಮ್ಮ ಹತ್ತಿರದಲ್ಲಿದ್ದಾನೆ.

- ನೀವು ಇನ್ನೊಬ್ಬರಿಂದ ನಿಂದನೆಯನ್ನು ಸಹಿಸಲು ಸಾಧ್ಯವಾಗದಿದ್ದರೆ, ಒಂದು ಅಥವಾ ಎರಡು ಸರಳ ಪದಗಳನ್ನು ಹೇಳಿ, ಇಲ್ಲದಿದ್ದರೆ ಬಿಟ್ಟುಬಿಡಿ.

- ನನ್ನ ಹೆಸರನ್ನು ಪುನರಾವರ್ತಿಸುವವನ ಪಕ್ಕದಲ್ಲಿ ನಾನು ಸದಾ ಇರುತ್ತೇನೆ.

- ನೀವೇ ಕರ್ಮಕ್ಕೆ ಕಾರಣ ಎಂದು ಊಹಿಸಿಕೊಂಡು ಅಹಂಕಾರ ಪಡಬೇಡಿ. ಎಲ್ಲವೂ ದೇವರಿಂದಲೇ ಆಗಿದೆ.

- ಯಾರೊಂದಿಗೂ ಜಗಳವಾಡಬೇಡಿ, ಸೇಡು ತೀರಿಸಿಕೊಳ್ಳಬೇಡಿ, ಯಾರ ಮೇಲೂ ದೂಷಿಸಬೇಡಿ.

- ಎಲ್ಲಾ ದೇವರುಗಳು ಒಂದೇ. ಹಿಂದೂ ಮತ್ತು ಮುಸ್ಲಿಂ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮಸೀದಿ ಮತ್ತು ದೇವಾಲಯ ಒಂದೇ.

- ನೀವು ನಿಮ್ಮ ಒಳಗಣ್ಣಿನಿಂದ ನೋಡಿದಾಗ, ನೀವು ದೇವರು ಭಿನ್ನವಾಗಿಲ್ಲ ಎಂದು ನೀವು ಅರಿತುಕೊಳ್ಳುತ್ತೀರಿ.

- ದೇವರಿಗೆ ಸ್ತುತಿ ಸಲ್ಲಲಿ. ನಾನು ದೇವರ ದಾಸ ಮಾತ್ರ.

- ಕಷ್ಟದ ಸಮಯದಲ್ಲಿಯೂ ಕೊನೆಯವರೆಗೂ ನಿಮ್ಮೊಂದಿಗೆ ಇರುವ ಸ್ನೇಹಿತರನ್ನು ಆರಿಸಿ.

 

PREV
Read more Articles on
click me!

Recommended Stories

ಇಂದು ಮಧ್ಯಾಹ್ನ 3:38 ನಂತರ 4 ರಾಶಿಗೆ ಜಾಕ್‌ಪಾಟ್, ಗುರು ವಕ್ರಿಯಿಂದ ಸಂಪತ್ತು, ಅದೃಷ್ಟ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ