
ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ಎಂಬ ಬಲ್ಗೇರಿಯನ್ ಮಹಿಳೆ, ದಶಕಗಳ ಹಿಂದೆಯೇ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಿರುವ ಅನೇಕ ಭವಿಷ್ಯಗಳು ಇಲ್ಲಿಯವರೆಗೆ ನಿಜವಾಗಿವೆ ಎಂದು ತಿಳಿದುಬಂದಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ವಿನಾಶಕಾರಿ ಭೂಕಂಪ, ಸುನಾಮಿ, ವಿಮಾನ ದುರಂತ ಇವೆಲ್ಲ ಸಂಭವಿಸುತ್ತವೆ ಎಂದು ಅಂದೇ ಹೇಳಿದ್ದುದು ನಿಜವಾಗಿದೆ. ಬಾಬಾ ವಂಗಾ ಬಲ್ಗೇರಿಯಾದ ಒಬ್ಬ ಪ್ರವಾದಿ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. ಅವರು 1911ರಲ್ಲಿ ಜನಿಸಿದರು, ಆದರೆ 12ನೇ ವಯಸ್ಸಿನಲ್ಲಿ ಅವರು ಚಂಡಮಾರುತದಿಂದ ಉಂಟಾದ ಧೂಳಿನಿಂದ ಶಾಶ್ವತವಾಗಿ ಕುರುಡರಾದರು. ದೃಷ್ಟಿ ಕಳೆದುಕೊಂಡ ನಂತರ ಭವಿಷ್ಯವಾಣಿ ನುಡಿಯಲು ಆರಂಭಿಸಿದರು. ಇವುಗಳಲ್ಲಿ ಬಹುತೇಕ ಭವಿಷ್ಯಗಳು ನಿಜವಾಗಿವೆಯಂತೆ.
ಅದಿರಲಿ. ಇದೀಗ ಆಕೆ ಚಿನ್ನ- ಬೆಳ್ಳಿಯ ಬಗ್ಗೆ ನುಡಿದ ಭವಿಷ್ಯವಾಣಿಗಳನ್ನು ನೋಡೋಣ. ಎರಡನೇ ಸಹಸ್ರಮಾನ ಕಳೆದು 25 ವರ್ಷಗಳಲ್ಲಿ (ಅಂದರೆ 2025ರಲ್ಲಿ) ಚಿನ್ನ ಬೆಳ್ಳಿಯ ಬೆಲೆ ಮುಗಿಲು ಮುಟ್ಟಲಿದೆ ಎಂದು ಆಕೆ ಹೇಳಿದ್ದಳು. ಅದರಂತೆಯೇ ಚಿನ್ನ ಹಾಗೂ ಬೆಳ್ಳಿಯ ಮೆಲೆ ಸಾಮಾನ್ಯರು ಕೊಂಡುಕೊಳ್ಳಲಿಕ್ಕಾಗದಂತೆ, ಮುಗಿಲು ಮುಟ್ಟಿದೆ. ಇನ್ನೂ ಹೆಚ್ಚಲಿದೆ. 2026ಕ್ಕೆ ಆಕೆ ನುಡಿದ ಭವಿಷ್ಯವಾಣಿ ಹೀಗಿದೆ- ʼಸುವರ್ಣ ಲೋಹ ಮನುಷ್ಯರನ್ನು ಆಟವಾಡಿಸಲಿದೆ. ಆ ಲೋಹಕ್ಕಾಗಿ ಮನುಷ್ಯರು ಮನುಷ್ಯರನ್ನು ಕೊಲ್ಲಲಿದ್ದಾರೆ. ಸಾಮ್ರಾಜ್ಯಗಳು ಉರುಳಲಿವೆ. ಸಮುದ್ರಗಳು ಮೇಲುಕೆಳಗಾಗಲಿವೆ. ಭೂಮಿಯಲ್ಲಿ ತಿನ್ನುವ ಆಹಾರದ ಬದಲು ಧರಿಸುವ ಸುವರ್ಣಲೋಹದ ಹುಡುಕಾಟ ಹೆಚ್ಚಲಿದೆʼ ಎಂದಿದ್ದಳು.
ನೋಡಿ. ಕಳೆದ ಕೆಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಬಹಳವಾಗಿ ಹೆಚ್ಚುತ್ತಿದೆ. ದೀಪಾವಳಿಯ ನಂತರ ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದರೂ, ಅದು ಮತ್ತೆ ಹೆಚ್ಚುತ್ತಲೇ ಇದೆ. ವಾಸ್ತವವಾಗಿ, ಹೆಚ್ಚುತ್ತಿರುವ ಬೆಲೆಗಳಿಗೆ ಹೋಲಿಸಿದರೆ ಬೆಲೆಯಲ್ಲಿನ ಇಳಿಕೆ ತುಂಬಾ ಕಡಿಮೆ. 2025 ಇನ್ನೂ ಎರಡು ತಿಂಗಳಲ್ಲಿ ಕೊನೆಗೊಳ್ಳಲಿದೆ. 2026 ರಲ್ಲಿ ಚಿನ್ನದ ಬೆಲೆಯ ಕುರಿತು ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಬಾಬಾ ವಂಗಾ ಮಾಡಿದ ಭವಿಷ್ಯವಾಣಿಯು ವೈರಲ್ ಆಗುತ್ತಿದೆ.
ಭವಿಷ್ಯವಾಣಿ ಪ್ರಕಾರ, ಜಾಗತಿಕ ಮಾರುಕಟ್ಟೆಗಳಲ್ಲಿನ ಅಸ್ಥಿರತೆಯು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು. ಬಾಬಾ ವಂಗಾ ಅವರ ಭವಿಷ್ಯವಾಣಿಯು ನಿಜವಾದರೆ, ಮುಂಚಿತವಾಗಿ ಚಿನ್ನವನ್ನು ಖರೀದಿಸುವವರು ಕೋಟ್ಯಾಧಿಪತಿಗಳಾಗುವ ಅಂಚಿನಲ್ಲಿರುತ್ತಾರೆ. ಒಂದು ವೇಳೆ ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದರೆ ಚಿನ್ನದ ಬೆಲೆ ಶೇ. 25 ರಿಂದ 40 ರಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ. ಮುಂದಿನ ದೀಪಾವಳಿಯ ವೇಳೆಗೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಹತ್ತು ಗ್ರಾಂ ಚಿನ್ನದ ಬೆಲೆ ರೂ. 1,62,500 ರಿಂದ ರೂ. 1,82,000 ದವರೆಗೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ.
2026ರಲ್ಲಿ ಚಿನ್ನದ ಬೆಲೆಗಳ ಕುರಿತು ಬಾಬಾ ವಂಗಾ ಅವರ ಭವಿಷ್ಯವಾಣಿಯು ಜಾಗತಿಕ ಮಾರುಕಟ್ಟೆಗೆ ಉತ್ಸಾಹವನ್ನು ನೀಡುತ್ತದೆ. ಚಿನ್ನದಲ್ಲಿ ಹೂಡಿಕೆ ಮಾಡುವವರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ನೀವು ನಿಮ್ಮ ಚಿನ್ನವನ್ನು ಎಚ್ಚರಿಕೆಯಿಂದ ಸಂಗ್ರಹಿಸಿದರೆ, ನೀವು ಖಂಡಿತವಾಗಿಯೂ ಮಿಲಿಯನೇರ್ ಅಥವಾ ಬಿಲಿಯನೇರ್ ಆಗುತ್ತೀರಿ. ಇದು ಮನುಷ್ಯ ಸಂಬಂಧಗಳನ್ನು ಹಾಳು ಮಾಡಬಹುದು. ಇಷ್ಟು ಬೆಲೆಬಾಳುವ ಚಿನ್ನಕ್ಕಾಗಿ ಸಂಬಂಧಗಳ ನಡುವೆಯೇ ಬಿರುಕು ಮೂಡಬಹುದು. ಸಂಸಾರಗಳು ಒಡೆಯಬಹುದು. ದರೋಡೆಗಳು, ಕಳವು ಹೆಚ್ಚಬಹುದು. ಗಣಿಗಾರಿಕೆ ಹೆಚ್ಚಲಿದೆ. ಭೂಮಿಯನ್ನು ಅಗೆಯಲಾಗುತ್ತದೆ. ಇವೆಲ್ಲವನ್ನೂ ಬಾಬಾ ವಂಗಾ ಮೊದಲೇ ಕಂಡಿದ್ದಾಳೆ, ಹೇಳಿದ್ದಾಳೆ. ಹೀಗಾಗಿ ಎಚ್ಚರವಿರಲಿ.