Hanuman Chalisa: 500 ಕೋಟಿ ವೀಕ್ಷಣೆ ಪಡೆದ ಭಾರತದ ಮೊದಲ ಯುಟ್ಯೂಬ್‌ ವಿಡಿಯೋ!

Published : Nov 27, 2025, 02:33 PM IST
hanuman chalisa

ಸಾರಾಂಶ

14 ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾದ, ಗುಲ್ಶನ್ ಕುಮಾರ್ ಅಭಿನಯದ ಮತ್ತು ಹರಿಹರನ್ ಹಾಡಿರುವ ಈ ಭಕ್ತಿಗೀತೆಯು (Hanuman Chalisa) ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಲ್ಲಿ ಒಂದಾಗಿದ್ದು, ಇದರ ಸಾಧನೆ ನೋಡಿ ಭಕ್ತಿಗೀತೆ ಇಂಡಸ್ಟ್ರಿ ಅಲ್ಲಾಡಿ ಹೋಗಿದೆ. 

ಭಾರತೀಯ ವಿಡಿಯೋವೊಂದು ಮೊದಲ ಬಾರಿಗೆ ಯುಟ್ಯೂಬ್‌ನಲ್ಲಿ 5 ಬಿಲಿಯನ್-‌ ಅಂದರೆ 500 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಅದು ಬೇರ್ಯಾವುದೂ ಅಲ್ಲ, 'ಶ್ರೀ ಹನುಮಾನ್ ಚಾಲೀಸಾ'ದ ವಿಡಿಯೋ. ದೇಶದ ಪ್ರಮುಖ ಸಂಗೀತ ಸಂಸ್ಥೆಯಾದ ಟಿ-ಸೀರೀಸ್‌ (T- Series) ಹಲವು ವರ್ಷಗಳ ಹಿಂದೆ ಹೊರತಂದಿದ್ದ ಆಲ್ಬಂನ ವಿಡಿಯೋ ಇದು. ಇದು ಭಾರತೀಯ ಭಕ್ತಿ ಸಂಗೀತ ಹಾಗೂ ಆಂಜನೇಯನ ಭಕ್ತಾದಿಗಳ ಆನಂದಕ್ಕೆ ಕಾರಣವಾಗಿದೆ. '5 ಬಿಲಿಯನ್ ತಲುಪಿದ ವಿಶ್ವದ ಮೊದಲ ವೀಡಿಯೊ ತಮಾಷೆಯಲ್ಲ, ಇದು ಸನಾತನ ಧರ್ಮದ ಶಕ್ತಿʼ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ. ʼಮುಂದಿನ ಹಂತ 10 ಬಿಲಿಯ, ಅಲ್ಲಿವರೆಗೆ ಕೊಂಡೊಯ್ಯೋಣ" ಎಂದು ಇನ್ನು ಕೆಲವರು ಹೇಳಿದ್ದಾರೆ.

ಇದನ್ನು 14 ವರ್ಷಗಳ ಹಿಂದೆ ಅಪ್‌ಲೋಡ್‌ ಮಾಡಲಾಗಿದೆ. ಅಂದಿನಿಂದ ಇದನ್ನು ಭಾರತದವರು ಮತ್ತು ಜಗತ್ತಿನ ಎಲ್ಲೆಡೆಯ ಹನುಮಾನ್‌ ಭಕ್ತರು ಮತ್ತೆ ಮತ್ತೆ ಪ್ಲೇ ಮಾಡುತ್ತಲೇ ಇದ್ದಾರೆ. ಹಲವು ಮನೆಗಳಲ್ಲಿ ಇದನ್ನು ಬೆಳಗ್ಗೆ ಹಾಗೂ ಸಂಜೆ ಮರಳಿ ಮರಳಿ ಪ್ಲೇ ಮಾಡುವ ಪರಿಪಾಠವೇ ಬೆಳೆದಿದೆ. ಕೆಲವರು ರಾತ್ರಿ ಮಲಗುವ ಮುನ್ನ ಇದನ್ನು ಕೇಳುತ್ತಾರೆ. ಹನುಮಾನ್‌ ಚಾಲೀಸಾ ದುಷ್ಟಶಕ್ತಿಗಳಿಂದ ತಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಭಾರತೀಯರದ್ದಾಗಿದೆ. ಹೀಗಾಗಿ ಇದರೊಂದಿಗೆ ಧಾರ್ಮಿಕ ಭಾವನೆಯೂ ತಳುಕು ಹಾಕಿಕೊಂಡಿದೆ. ಭಾರತದ ಭಕ್ತಿಗೀತೆಗಳು ಜಾಗತಿಕ ವೇದಿಕೆಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ.

ಚಿರಂಜೀವಿ ಹನುಮನಿಗೆ ಭಕ್ತಿಗಾಯನ

ಹನುಮಂತ ಚಿರಂಜೀವಿ ಎಂಬ ನಂಬಿಕೆ ನಮಗಿದೆ. ಹೀಗಾಗಿ ಈಗಲೂ ಹನುಮಂತ ಮರೆಯಲ್ಲಿದ್ದುಕೊಂಡು ಭಕ್ತರನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಾನೆ ಎನ್ನುವ ನಂಬಿಕೆಯಿಂದಲೇ ಈತನನ್ನು ‘ಕಲಿಯುಗದ ದೇವರು’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಪ್ರತಿನಿತ್ಯ ಲಕ್ಷಾಂತರ ಜನರು ಹನುಮಾನ್‌ ಚಾಲೀಸಾವನ್ನು ಪಠಿಸುತ್ತಾರೆ. 40 ಪದ್ಯಗಳ ಸ್ತೋತ್ರವಾದ ಹನುಮಂತ ಚಾಲೀಸಾ ಹನುಮನ ಜೀವನ, ಸಾಧನೆಗಳು, ಶಕ್ತಿ ಮತ್ತು ಬುದ್ಧಿವಂತಿಕೆಯ ಬಗ್ಗೆ ಇರುವ ಹಾಡು. ತುಳಸಿದಾಸರು ಬರೆದಿರುವ ಈ ಶ್ಲೋಕಾವಳಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಪಸರಿಸಿದ್ದು, ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಟಿ-ಸೀರೀಸ್‌ ಯೂಟ್ಯೂಬ್‌ನಲ್ಲಿ ಚಾನೆಲ್​ನಲ್ಲಿ ಅಪ್ಲೋಡ್​​ ಮಾಡಲಾಗಿದ್ದ ಹನುಮಾನ್​ ಚಾಲೀಸಾ ಬರೋಬ್ಬರಿ 500 ಕೋಟಿ ವೀಕ್ಷಣೆ ಪಡೆದು ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಮೊದಲ ವಿಡಿಯೋ ಎಂಬ ಖ್ಯಾತಿ ಗಳಿಸಿದೆ.‌

 

 

ಗುಲ್ಶನ್ ಕುಮಾರ್ ಅವರ ನಟನೆ ಇರುವ ‘ಶ್ರೀ ಹನುಮಾನ್ ಚಾಲೀಸಾ’ ವಿಡಿಯೋವನ್ನು 2011ರ ಮೇ 10 ರಂದು ಬಿಡುಗಡೆ ಮಾಡಲಾಯಿತು. 14 ವರ್ಷಗಳಲ್ಲಿ ಅದು 5,006,713,956 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಗುಲ್ಷನ್‌ ಕುಮಾರ್‌ ಈಗಿಲ್ಲ. ಆದರೆ ಹರಿಹರನ್ ಅವರ ಗಾಯನ ಮತ್ತು ಲಲಿತ್ ಸೇನ್ ಅವರ ಸಂಯೋಜನೆ ಇದನ್ನು ಅಮರವಾಗಿಸಿದೆ. ಇದು ಈಗ ಯೂಟ್ಯೂಬ್‌ನ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳಲ್ಲಿ ಒಂದಾಗಿದೆ. ಈ ವೀಡಿಯೊ ದಾಖಲೆ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಇದು 2023 ರಲ್ಲಿ 3 ಬಿಲಿಯನ್ ವೀಕ್ಷಣೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದೀಗ ಜಾಗತಿಕವಾಗಿ ಅತ್ಯಧಿಕ ವೀಕ್ಷಿಸಲ್ಪಟ್ಟ 10 ವಿಡಿಯೋಗಳಲ್ಲಿ ಒಂದಾಗಿದೆ.

ಭಾರತವನ್ನು ಮೀರಿ, ವಿಶ್ವಾದ್ಯಂತ YouTube ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಪಟ್ಟಿಯಲ್ಲಿ 16.38 ಬಿಲಿಯನ್ ವೀಕ್ಷಣೆಗಳೊಂದಿಗೆ “ಬೇಬಿ ಶಾರ್ಕ್ ಡ್ಯಾನ್ಸ್”, 8.85 ಬಿಲಿಯನ್ ವೀಕ್ಷಣೆಗಳೊಂದಿಗೆ “ಡೆಸ್ಪಾಸಿಟೊ”, 8.16 ಬಿಲಿಯನ್ ವೀಕ್ಷಣೆಗಳೊಂದಿಗೆ “ವೀಲ್ಸ್ ಆನ್ ದಿ ಬಸ್”, 7.28 ಬಿಲಿಯನ್ ವೀಕ್ಷಣೆಗಳೊಂದಿಗೆ “ಬಾತ್ ಸಾಂಗ್” ಮತ್ತು 7.12 ಬಿಲಿಯನ್ ವೀಕ್ಷಣೆಗಳೊಂದಿಗೆ “ಜಾನಿ ಜಾನಿ ಯೆಸ್ ಪಾಪಾ” ಸೇರಿವೆ. ಇದರೊಂದಿಗೆ ಭಾರತದ ಭಕ್ತಿಗೀತೆಯೊಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಹೆಮ್ಮೆಯ ವಿಷಯ.

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಬುಧನಿದ್ದರೆ ಬಂಪರ್ ಲಾಭ, ಈ ರಾಶಿಗೆ ಡಬಲ್ ಅದೃಷ್ಟ
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು