Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

By Suvarna NewsFirst Published Jan 16, 2022, 5:44 PM IST
Highlights

ನೀವು ಕನಸು ಕಾಣುತ್ತಿರುವಾಗ ಗತ ಜನ್ಮದ ನೆನಪುಗಳು ಕಾಡಬಹುದು. ಯಾವೆಲ್ಲ ಸೂಚನೆಗಳು ಪೂರ್ವಜನ್ಮವನ್ನು ಜ್ಞಾಪಿಸುತ್ತವೆ ಎಂಬುದರ ವಿವರ ಇಂತಿದೆ. 

ಪ್ರತಿದಿನ ಮಲಗಿದಾಗ ಹಲವಾರು ಕನಸುಗಳು ಬೀಳುತ್ತವೆ. ಅವುಗಳಲ್ಲಿ ಕೆಲವಂತೂ ಸಿಕ್ಕಾಪಟ್ಟೆ ಚಿತ್ರವಿಚಿತ್ರವಾಗಿದ್ದು, ತಲೆ ಬುಡ ಅರ್ಥವಾಗುವುದಿಲ್ಲ. ಅದಕ್ಕೆ ಯಾವ ಲಾಜಿಕ್ಕೂ ಇರುವುದಿಲ್ಲ. ಈ ಜಗತ್ತಿಗೆ ಸಂಬಂಧಪಟ್ಟಂತೆಯೇ ಅನಿಸುವುದಿಲ್ಲ. ಅಂಥ ಕೆಲ ಕನಸುಗಳಿಗೂ ನಮ್ಮ ಪೂರ್ವ ಜನ್ಮ(past life)ಕ್ಕೂ ಸಂಬಂಧ ಇರಬಹುದು! ನೀವು ಕನಸಿನಲ್ಲಿ ಹಿಂದಿನ ಜನ್ಮವನ್ನು ನೆನೆಸಿಕೊಳ್ಳುತ್ತಿದ್ದೀರೆಂಬುದರ ಐದು ಸೂಚನೆಗಳನ್ನು ಇಲ್ಲಿ ಕೊಡಲಾಗಿದೆ. 

ನಿಮ್ಮ ವರ್ತನೆ ಬೇರೆಯೇ ಇದ್ದರೆ
ಕನಸಿನಲ್ಲಿ ಸ್ವತಃ ನಿಮ್ಮನ್ನು ನೀವು ಬೇರೆ ರೀತಿ ಕಾಣುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಈಗಿರುವುದಕ್ಕೆ ವ್ಯತಿರಿಕ್ತವಾಗಿದ್ದರೆ, ನಿಮ್ಮ ಗುಣಗಳಿಗೆ ವಿರುದ್ಧವಾಗಿ ನೀವು ನಡೆದುಕೊಂಡಂತೆ ಕಂಡರೆ ಬೆಳಗ್ಗೆ ಎದ್ದಾಗ ನಾನ್ಯಾಕೆ ಹಂಗಾಡುತ್ತಿದ್ದೆ, ನಾನು ಹಂಗಿರಲು ಸಾಧ್ಯವೇ ಇಲ್ಲ ಎನಿಸಬಹುದು. ಮುಖ ನಿಮ್ಮದೇ ಆಗಿದ್ದು, ವ್ಯಕ್ತಿತ್ವ ಬೇರೆಯೇ ಆಗಿದ್ದರೆ, ಸುತ್ತಮುತ್ತಲಿನ ಪರಿಸರ ಸಂಪೂರ್ಣ ವಿಭಿನ್ನವಾಗಿದ್ದರೆ ಅದು ನಿಮ್ಮ ಪೂರ್ವ ಜನ್ಮದ ಬದುಕಿನ ಸೂಚನೆ. 

ಅಪರಿಚಿತ ಮುಖಗಳು(Unknown faces)
ಮನಸ್ಸು ತುಂಬಾ ಕಲ್ಪನೆಯಲ್ಲಿ ಮುಳುಗುತ್ತದೆ ನಿಜ. ನಿಮ್ಮ ಕಲ್ಪನಾ ಶಕ್ತಿ ಅಗಾಧವಾಗಿರಬಹುದು. ಆದರೆ, ನಿದ್ರಿಸುವಾಗ ನಿಮ್ಮೆದುರು ಅಪರಿಚಿತ ಮುಖಗಳು ಎದುರು ಬರುತ್ತಿವೆ ಎಂದರೆ, ಆ ಮುಖಗಳು ನಿಮ್ಮ ಕನಸಿನಲ್ಲಿ ಮತ್ತೆ ಮತ್ತೆ ಕಂಡರೆ ನೀವು ಪೂರ್ವ ಜನ್ಮವನ್ನು ಕಿಟಕಿ ತೆರೆದು ನೋಡುತ್ತಿರಬಹುದು. ಅಲ್ಲಿ ನಿಮ್ಮೊಂದಿಗಿದ್ದ ಜೀವಗಳೇ ಕನಸಿನಲ್ಲಿ ಕಾಣುತ್ತಿರಬಹುದು. 

ಅಪರಿಚಿತ ಘಟನೆ
ಒಂದೋ ಎರಡೋ ಬಾರಿಯಾದರೆ ಹೋಗಲಿ ಎಂದು ಬಿಟ್ಟು ಬಿಡಿ. ಆದರೆ ಪದೇ ಪದೆ ಕೆಲ ವಿಚಿತ್ರ ಘಟನೆಗಳು, ನಿಮಗೆ ಬದುಕಿನಲ್ಲಿ ಕಂಡು ಕೇಳಿರದ ವಿಚಾರಗಳು ಕನಸಿನಲ್ಲಿ ಕಾಣಿಸುತ್ತಿವೆ ಎಂದರೆ ಅದು ಕೂಡಾ ನಿಮ್ಮ ಪೂರ್ವ ಜನ್ಮದ ಸ್ಮರಣೆಯಾಗಿದೆ. ಘಟನೆಯು ನಿಮ್ಮ ಜೀವನದಲ್ಲಿ ನಡೆದು ಬಿಟ್ಟಿದೆ. ಹಾಗಾಗಿಯೇ ನೀವೆಷ್ಟು ಬಾರಿ ಕಂಡರೂ ಆ ಕನಸು ಅದೇ ರೀತಿ ಇರುತ್ತದೆ. 

Covid Alert: ಹಲವು ವರ್ಷ ಕಾಲ ಇದೇ ಎಚ್ಚರಿಕೆಯಲ್ಲಿ ಬದುಕಬೇಕು!

ಗಾಯಗಳು(injuries)
ನಿಮ್ಮ ದೇಹದಲ್ಲಿ ವಿವರಣೆಗೆ ಸಿಲುಕದ ಗಾಯ, ಕಲೆ, ಮಚ್ಚೆ ಇಂಥವೇನಾದರೂ ಇವೆಯೇ? ಅವು ಹುಟ್ಟು ಮಚ್ಚೆ(birthmark)ಗಳೇ ಇರಬಹುದು. ಆದರೆ, ವಿಶೇಷವಾಗಿ ಕಾಣುವಷ್ಟು ದೊಡ್ಡವಾಗಿ ಇವೆಯೇ? ಕನಸಿನಲ್ಲಿ ಕೆಲವೊಮ್ಮೆ ನಿಮಗೆ ಇರುವ ಈ ಹುಟ್ಟು ಮಚ್ಚೆಯ ಜಾಗದಲ್ಲೇ ಗಾಯವಾದಂತೆ, ಪೆಟ್ಟಾದಂತೆ, ಯಾರೋ ಹೊಡೆದಂತೆ ಇತ್ಯಾದಿಯಾಗಿ ಕಂಡು ಬಂದರೆ, ಬಹುಷಃ ಹಿಂದಿನ ಜನ್ಮದಲ್ಲಿ ಹಾಗೆಯೇ ದೇಹದ ಆ ಭಾಗದಲ್ಲಿ ಪೆಟ್ಟಾಗಿರಬೇಕು. ಮತ್ತೆ ಮತ್ತೆ ಈ ಕನಸು ಬೀಳುತ್ತಿದ್ದರೆ, ನಿಮ್ಮ ದೇಹಕ್ಕೆ ಆ ಮಾರ್ಕ್ ಹೇಗೆ ಬಂತೆಂಬ ವಿವರ ಸಿಕ್ಕಿತೆಂದೇ ತಿಳಿಯಿರಿ. 

Love Life : ಪ್ರೀತಿ ವ್ಯಕ್ತಪಡಿಸಲು ನಾಚಿಕೆ ಅಡ್ಡಿಯಾಗ್ತಿದ್ದರೆ ಹೀಗೆ ಮಾಡಿ

ದೇಜ ವು(Deja Vu)
ಒಂದೆರಡು ಬಾರಿಯಾದರೆ ಓಕೆ, ಆದರೆ, ಪದೇ ಪದೆ ದೇಜ ವು ಅನುಭವವಾಗುತ್ತಿದೆಯೇ? ಯಾವುದಾದರೂ ಘಟನೆ, ಮಾತು, ಅಥವಾ ಸನ್ನಿವೇಶ ನೋಡಿದಾಗ ಇಂಥದೇ ಎಂದೋ ನೋಡಿದ್ದೆ, ಹೀಗೆಯೇ ಮಾತಾಡಿದ್ದರು, ಇಂಥದೇ ಘಟನೆ ಯಾವಾಗಲೋ ನಡೆದಿತ್ತಲ್ಲ ಎನಿಸಿಯೂ, ಅದಕ್ಕೆ ಈ ಜನ್ಮದಲ್ಲಿ ಎಲ್ಲೂ ಲಾಜಿಕಲ್ ವಿವರಣೆ ಸಿಗುತ್ತಿಲ್ಲ ಎಂದರೆ, ಅದು ನಡೆದದ್ದು ಈ ಜನ್ಮದಲ್ಲಲ್ಲ ಎಂದು ಅರ್ಥ ಮಾಡಿಕೊಳ್ಳಿ. 

ಅಕಾರಣ ಭಯ(unreasonable fear)
ಕೆಲವರಿಗೆ ಅಕಾರಣ ಭಯಗಳಿರುತ್ತವೆ. ಆಕಾಶ ನೋಡಿದರೆ ಭಯ, ನೀರು ಕಂಡರೆ ಭಯ, ನೇಣಿನ ಹಗ್ಗ ನೋಡಿದರೆ ತಲೆ ತಿರುಗುವುದು, ತುಂಬಾ ಎತ್ತರದಿಂದ ನೋಡಿದರೆ ಕೈ ಕಾಲು ನಡುಗುವುದು ಇತ್ಯಾದಿ.. ಇವೆಲ್ಲವೂ ಪೂರ್ವ ಜನ್ಮಕ್ಕೆ , ಆ ಜನ್ಮದಲ್ಲಿ ಸಂಭವಿಸಿರಬಹುದಾದ ಭಯಾನಕ ಘಟನೆಗೆ, ಅಥವಾ ಸಾವಿಗೆ ಸಂಬಂಧಿಸಿದ್ದಾಗಿರಬಹುದು.

click me!