Asianet Suvarna News Asianet Suvarna News

Covid Alert: ಹಲವು ವರ್ಷ ಕಾಲ ಇದೇ ಎಚ್ಚರಿಕೆಯಲ್ಲಿ ಬದುಕಬೇಕು!

ಕಳೆದ ವರ್ಷ ಡೆಲ್ಟಾ ಆಯಿತು. ಈ ಬಾರಿ ಒಮಿಕ್ರಾನ್, ಅದೃಷ್ಟವಶಾತ್ ಈ ಬಾರಿಯ ವೈರಸ್ ಹಿಂದಿನ ಬಾರಿಯಷ್ಟು ತೀವ್ರತೆ ಹೊಂದಿಲ್ಲ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದೊಂದು ವರ್ಷಕ್ಕೆ ಈ ತಲೆನೋವು ಮುಗಿದು ಹೋಗುವುದಿಲ್ಲ. ಮುಂದಿನ ಹಲವಾರು ವರ್ಷಗಳ ಕಾಲ ಎಚ್ಚರಿಕೆಯಲ್ಲೇ ಬದುಕಬೇಕಾಗಿದೆ.
 

We should live with same precaution for next several years
Author
Bangalore, First Published Jan 16, 2022, 9:46 AM IST

ದೇಶದಲ್ಲಿ ಕೋವಿಡ್-19 (Covid-19) ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಕೆಲವೇ ದಿನಗಳಿಂದೀಚೆಗೆ 2 ಲಕ್ಷ ದಾಟಿದೆ ಎಂದರೆ ಹರಡುತ್ತಿರುವ ವೇಗವನ್ನು ಅಂದಾಜಿಸಬಹುದು. ಇಷ್ಟೇ ಅಲ್ಲ, ಮುಂದಿನ 2-4 ವಾರಗಳಲ್ಲಿ ಪ್ರಸರಣ (Spread) ವೇಗ ಗರಿಷ್ಠ ಮಟ್ಟಕ್ಕೆ ತಲುಪಬಹುದು. ಆಗ ದಿನಕ್ಕೆ ಸುಮಾರು 10 ಲಕ್ಷ ಪ್ರಕರಣಗಳು ದಾಖಲಾಗಬಹುದು. ಇದು...ಭಾರತದ ಖ್ಯಾತ ವೈರಾಣು ತಜ್ಞ (Virologist) ಡಾ. ಶಹೀದ್ ಜಮೀಲ್ (Dr.Shaheed Jameel) ಅವರ ಲೆಕ್ಕಾಚಾರ. 

ಡಾ. ಶಹೀದ್ ಜಮೀಲ್ ಅವರು ಕಳೆದ ಮೇ ತಿಂಗಳಲ್ಲಿ ಭಾರತದ ವೈರಸ್ (Virus) ಜಿನೋಮ್ ಸೀಕ್ವೆನ್ಸಿಂಗ್ ಗ್ರೂಪ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ್ದ ಅಭಿಪ್ರಾಯದಲ್ಲಿ ಅವರು “ಸಾಕ್ಷ್ಯ (Proof) ಆಧಾರಿತ ನೀತಿ ರೂಪಿಸುವುದಕ್ಕೆ ವಿಜ್ಞಾನಿಗಳು ಮೊಂಡು ಪ್ರತಿರೋಧ ಎದುರಿಸುತ್ತಿದ್ದಾರೆ’ ಎಂದು ಹೇಳಿದ್ದರು. 

ಇತ್ತೀಚೆಗೆ ಒಮಿಕ್ರಾನ್ (Omicron) ಹಾಗೂ ಕೋವಿಡ್-19 ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಜನವರಿ (January) ಅಂತ್ಯದ ವೇಳೆಗೆ ದೇಶದಲ್ಲಿ ಪ್ರತಿದಿನ 10 ಲಕ್ಷ ಪ್ರಕರಣಗಳು ದಾಖಲಾಗಬಹುದು ಎನ್ನುವ ಮೂಲಕ ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ದಿನಗಳು ಮುಂದಿವೆ ಎನ್ನುವುದನ್ನು ಸೂಚಿಸಿದ್ದಾರೆ. ಗರಿಷ್ಠ (Peak) ಮಟ್ಟವನ್ನು ತಲುಪಿದ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತ ಸಾಗುತ್ತದೆ. ದಕ್ಷಿಣ ಆಫ್ರಿಕಾದ ಅನುಭವವೂ ಇದೇ ಮಾದರಿಯಲ್ಲಿದೆ. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ ಸ್ಟಿಟ್ಯೂಟ್ ಪ್ರಕಾರ ಇನ್ನೊಂದು ವಾರದಲ್ಲಿ ಪ್ರತಿದಿನದ ಸೋಂಕು ಸಂಖ್ಯೆ 3 ಲಕ್ಷ ದಾಟಬಹುದು.

Avatar Robot: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಪರವಾಗಿ ಶಾಲೆಗೆ ಹಾಜರಾಗುವ ರೋಬೋಟ್!

ಆದರೆ, ಅತ್ಯಂತ ವಿಷಮ ಸಮಯವೆಂದರೆ ಜನವರಿ ಅಂತ್ಯ. ಮಾರ್ಚ್ (March) ಆರಂಭದ ಹೊತ್ತಿಗೆ ಸೋಂಕು ಇಳಿಮುಖವಾಗುತ್ತದೆ. ಒಂದೇ ಒಂದು ಅದೃಷ್ಟದ ಸಂಗತಿ ಎಂದರೆ, ತೀವ್ರವಾದ ಆರೋಗ್ಯ ಸಮಸ್ಯೆ ಮತ್ತು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಕಡಿಮೆ ಇರುತ್ತದೆ. ಆದರೂ ದಿನಕ್ಕೆ, 1.70-1.80 ಲಕ್ಷ ಹಾಸಿಗೆಗಳ ಅಗತ್ಯವುಂಟಾಗಬಹುದು. 
ಆರ್ಥಿಕ (Financial) ಚಟುವಟಿಕೆ ಬಗ್ಗೆಯೂ ಡಾ. ಶಹೀದ್ ಜಮೀಲ್ ಆತಂಕ ವ್ಯಕ್ತಪಡಿಸಿದ್ದು, ಮಾರುಕಟ್ಟೆ, ಹೋಟೆಲ್ ಮುಂತಾದ ಚಟುವಟಿಕೆಗಳು ಸಹಜವಾಗಿ ಬಾಧಿತವಾಗಲಿವೆ. ಕೆಲವೇ ಕೆಲವು ಜನರ ಸಂಚಾರ ಇರುವುದರಿಂದ ಮತ್ತೆ ಆರ್ಥಿಕ ಚಟುವಟಿಕೆಗಳು ಕುಂದಲಿವೆ. ಕೇವಲ ಒಳಾಂಗಣ ಚಟುವಟಿಕೆಯಲ್ಲಿ ಇರಬೇಕಾದ ಸಮಯ ಮತ್ತೆ ಬರಲಿದೆ. 

Covid 3rd Wave: ಮೂರನೇ ಅಲೆಯಿಂದ ಮಕ್ಕಳಿಗೇ ಹೆಚ್ಚು ಅಪಾಯ ಯಾಕೆ ?

ಉತ್ಪಾದನಾ (Manufaturing) ಕ್ಷೇತ್ರದ ಕಾರ್ಮಿಕ ಸಂಖ್ಯೆಯನ್ನು ಕಡಿಮೆ ಮಾಡಿ, ಪಾಳಿಯಲ್ಲಿ ಕೆಲಸ ಪದ್ಧತಿ ಜಾರಿಗೆ ತರುವುದು ಉತ್ತಮ. ಕಾರ್ಯಕ್ಷೇತ್ರದಲ್ಲಿ ಮಾಸ್ಕ್ (Mask) ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಜನರು ಕಂಗಾಲಾಗದೆ, ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು, ಅಗತ್ಯ ಕಾರಣಗಳಿಗೆ ಹೊರ ಹೋಗುವಾಗ ಮಾಸ್ಕ್ ಬಳಕೆ ಮಾಡಬೇಕು. ಕಚೇರಿಯ ಒಳಾಂಗಣ ವಾತಾವರಣದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.  

ಕೆಲಸದ ಸ್ಥಳ ಹೇಗಿರಬೇಕು? 
ಉದ್ಯೋಗ ಸ್ಥಳದಲ್ಲಿ ಗಾಳಿ-ಬೆಳಕು (Ventilation) ಚೆನ್ನಾಗಿರುವ ವಾತಾವರಣ ನಿರ್ಮಿಸಬೇಕು ಎನ್ನುವುದು ಡಾ.ಜಮೀಲ್ ಅವರ ಸಲಹೆ. ಉದ್ಯೋಗಿಗಳಿಗೆ ಗುಣಮಟ್ಟದ ಮಾಸ್ಕ್ ವಿತರಿಸುವುದು ಸಂಸ್ಥೆಗಳ ಜವಾಬ್ದಾರಿ. ಉದ್ಯೋಗಿಗಳ ಆರೋಗ್ಯಕ್ಕಾಗಿ ಹಣ ವೆಚ್ಚ ಮಾಡಲು ಹಿಂದೆ ಮುಂದೆ ನೋಡಬಾರದು. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೆ ಅದನ್ನು ನೀಡಲು ಹಿಂದೇಟು ಹಾಕಬಾರದು ಎನ್ನುತ್ತಾರೆ ಡಾ.ಜಮೀಲ್. ಅದು ಸಾಧ್ಯವಿಲ್ಲದೆ ಇದ್ದರೆ ಪಾಳಿಯಲ್ಲಿ ಕೆಲಸ ಮಾಡುವ ವ್ಯವಸ್ಥೆ ಸೃಷ್ಟಿಸಿ ಉದ್ಯೋಗಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. 

ಕಂಪೆನಿಗಳು ಯಾವಾಗ ಸಾಮಾನ್ಯ ವ್ಯವಸ್ಥೆಗೆ ಹಿಂತಿರುಗಲು ಸಾಧ್ಯ ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಅವರು. ಎರಡೂ ಲಸಿಕೆ ಆಗಿದ್ದರೂ ಜನರಿಗೆ ಸೋಂಕು ತಗಲುತ್ತದೆ. ಆದರೆ, ಹೊಸ ಹೊಸ ಪ್ರಭೇದಗಳು, ರೂಪಾಂತರಿಗಳು ಬಂದರೂ ಹೆಚ್ಚು ಗಂಭೀರವಾದ ಸಮಸ್ಯೆ ಕಂಡುಬರುವುದಿಲ್ಲ. ಸದ್ಯದ ದಾಖಲೆಗಳ ಪ್ರಕಾರ, ಒಮಿಕ್ರಾನ್ ಹೆಚ್ಚು ಕಾಡುವ ರೂಪಾಂತರಿಯಲ್ಲ.  

ಈ ಮೇಲಿನ ಎಲ್ಲ ಅಂಶಗಳನ್ನು ದೈನಂದಿನ ಜೀವನದಲ್ಲಿ ಪಾಲನೆ ಮಾಡಲೇಬೇಕು. ಮುಂದಿನ ಕೆಲವು ವರ್ಷಗಳ ಕಾಲ ಇದು ಅಗತ್ಯ ಎನ್ನುವುದು ಅವರ ಸಲಹೆ. 

Follow Us:
Download App:
  • android
  • ios