ದೇವಾಲಯಕ್ಕೆ ಹೋಗಿ, ಹಿಂಗೆಲ್ಲಾ ಮಾಡೋದ್ ಸರೀನಾ?

By Web DeskFirst Published Jun 12, 2019, 1:22 PM IST
Highlights

ಮನಸಿಗೆ ಶಾಂತಿ, ನೆಮ್ಮದಿ ಸಿಗಲು, ಮನಸಿನ ಕೋರಿಕೆಯನ್ನು ಈಡೇರಿಸುವಂತೆ ಕೋರಲು ದೇವಾಲಯಕ್ಕೆ ಹೋಗುತ್ತೇವೆ. ಇದರಿಂದ ಮನಸಿಗೆ ಏನೋ ಒಂಥರಾ ನೆಮ್ಮದಿ ಸಿಗುತ್ತದೆ. ಆದರೆ ದೇವಸ್ಥಾನಕ್ಕೆ ಹೋಗೋ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಏನವು? 

ದೇವಾಲಯದಲ್ಲಿ ದೇವರ ದರ್ಶನ ಪಡೆದರೆ ಮನಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ಕೆಲವರು ದೇವಾಲಯದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಪುಣ್ಯ ಕಡಿಮೆಯಾಗುತ್ತದೆ. ಜೊತೆಗೆ ದೋಷವೂ ತಟ್ಟಿಕೊಳ್ಳುತ್ತದೆ. ಕೆಲವೊಂದು ತಪ್ಪುಗಳ ಬಗ್ಗೆ ಜನರಿಗೆ ಗೊತ್ತಿರುವುದೇ ಇರೋಲ್ಲ. ದೇವಾಲಯದಲ್ಲಿ ಯಾವೆಲ್ಲಾ ವಿಷಯಗಳನ್ನು ಗಮನಿಬೇಕು? 

ದೇವಾಲಯದಲ್ಲಿ ನಗುವುದು 
ದೇವಾಲಯದಲ್ಲಿ ನಗುವುದು, ಮಾತನಾಡುವುದು ಮೊದಲಾದವುಗಳನ್ನು ಮಾಡಬಾರದು. ಯಾಕೆಂದರೆ ಇದರಿಂದ ಮನಸ್ಸಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ದೇವರ ಧ್ಯಾನಕ್ಕೆ ತೊಡಕು ಉಂಟು ಮಾಡುತ್ತದೆ. 

ಭಕ್ತರ ಎದುರು ಬಂದು ನಿಲ್ಲುವುದು 
ಮಂದಿರದಲ್ಲಿ ಯಾವುದೇ ಭಕ್ತರು ದೇವರಲ್ಲಿ ಪ್ರಾರ್ಥಿಸುತ್ತಿದ್ದರೆ, ಅವರ ಎದುರು ಬಂದು ನಿಲ್ಲುವುದು ಅಥವಾ ಅವರ ಎದುರಿನಿಂದ ಪಾಸ್ ಆಗುವುದನ್ನು ಮಾಡಬಾರದು. 

ಅಪ್ರದಕ್ಷಿಣೆ
ಕೆಲವರಿಗೆ ಹೇಗೆ ಪ್ರದಕ್ಷಿಣೆ ಹಾಕುವುದು ಎಂದು ತಿಳಿದಿರುವುದಿಲ್ಲ. ಅವರು ಯಾವಾಗಲೂ ಅಪ್ರದಕ್ಷಿಣೆ ಬರುತ್ತಾರೆ. ಇದು ಅಶುಭ. ಬಲಬದಿಗೆ ಪ್ರದಕ್ಷಿಣೆ ಹಾಕಬೇಕು. ಆದರೆ ಶಿವಲಿಂಗಕ್ಕೆ ಮಾತ್ರ ಅರ್ಧ ಸುತ್ತು ಹಾಕಬೇಕು. 

ಉತ್ತರ ದಿಕ್ಕಿಗೇಕೆ ತಲೆ ಹಾಕಿ ಮಲಗಬಾರದು

ಬೆಲ್ಟ್ ಧರಿಸಿ ಹೋಗುವುದು 
ದೇವಾಲಯಕ್ಕೆ ಬೆಲ್ಟ್ ಧರಿಸಿ ಹೋಗೋದು ಅಥವಾ ಯಾವುದೇ ಚರ್ಮದ ವಸ್ತುವಿನ ಜೊತೆ ಹೋಗಬಾರದು. ಚರ್ಮವನ್ನು ಅಶುದ್ಧವೆಂದು ಪರಿಗಣಿಸಲಿದ್ದು, ಹೀಗೆ ಮಾಡುವುದು ಪಾಪವೆಂದೇ ಪರಿಗಣಿಸಲಾಗುತ್ತದೆ. 

ಮೂರ್ತಿಯ ಎದುರಲ್ಲೇ ನಿಲ್ಲುವುದು 
ಯಾವುದೇ ಮೂರ್ತಿ ಇರಬಹುದು , ಆದರೆ ದೇವರ ಮೂರ್ತಿಯ ಸರಿ ಎದುರು ನಿಲ್ಲಲೇ ಬಾರದು. ಯಾಕೆಂದರೆ ದೇವರ ಮೂರ್ತಿಯಿಂದ ಹೊರ ಬರುವ ಪ್ರಭಾವಶಾಲಿ ಶಕ್ತಿಯನ್ನು ಶರೀರಕ್ಕೆ ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. 

ಆಕಾರವಿಲ್ಲದ ದೇವರಿಗೇಕೆ ಮೂರ್ತಿ ಪೂಜೆ?

ಆದುದರಿಂದ ಇನ್ನು ಮುಂದೆ ದೇವಾಲಯಕ್ಕೆ ಹೋಗುವಾಗ ಈ ನಿಯಮವನ್ನು ಪಾಲಿಸಿ. ಕೆಲವು ನಿಮಿಷಗಳಾದರೂ ಅಹಂ ಅನ್ನು ಬಿಟ್ಟು, ದೇವರನ್ನು ನಮ್ಮನ್ನು ಅರ್ಪಿಸಿಕೊಳ್ಳುವುದು ಅಗತ್ಯ.

click me!