ರಸ್ತೆ ಮೇಲೆ ಕತ್ತರಿಸಿ ಹಾಕಿದ ನಿಂಬೆ ಹಣ್ಣು ದಾಟಬಾರದಾ?

Published : Aug 20, 2025, 09:19 PM IST
Black Magic

ಸಾರಾಂಶ

ಮೂರು ದಾರಿ ಕೂಡುವ ಜಾಗದಲ್ಲಿ ನಿಂಬೆಹಣ್ಣು, ಮೊಟ್ಟೆ ಇತ್ಯಾದಿಗಳನ್ನು ಇಡುವುದರ ಹಿಂದಿನ ನಂಬಿಕೆಗಳೇನು? ಅದನ್ನು ಅರಿತೋ ಅರಿಯದೆಯೋ ದಾಟಿದರೆ ಆಗುವ ತೊಂದರೆಗಳೇನು? ಈ ಲೇಖನದಲ್ಲಿ ತಿಳಿಯಿರಿ.

ಹಳ್ಳಿಗಳಲ್ಲಿ ಮಾತ್ರವಲ್ಲ, ಇತ್ತೀಚೆಗೆ ನಗರಗಳಲ್ಲಿ ಕೂಡ ಎರಡು ಅಥವಾ ಮೂರು ದಾರಿ ಕೂಡುವ ಜಾಗದಲ್ಲಿ ನಿಂಬೆ ಹಣ್ಣು, ಮೊಟ್ಟೆ, ಬಾಳೆ ಹಣ್ಣು, ಎಲೆ ಇಟ್ಟು, ಕುಂಕುಮ ಚೆಲ್ಲಿ ವಾಮಾಚಾರ ಮಾಡಿರುವುದನ್ನು ನೀವು ನೋಡಿಯೇ ಇರುತ್ತೀರಿ. ಹಳ್ಳಿ-ಪಟ್ಟಣದ ಸರ್ಕಲ್‌ ಬಳಿ ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿರುವ ದೃಶ್ಯವನ್ನು ನೀವು ಗಮನಿಸಿರುತ್ತೀರಿ. ಮೂರು ರಸ್ತೆಗಳು ಕೂಡುವ ಜಾಗದಲ್ಲಿ ನಿರಂತರವಾಗಿ ವಾಮಾಚಾರ ಎಂಬ ಹೆಸರಿನಲ್ಲಿ ಏನೇನೋ ಮಾಡುವ ಜನರಿದ್ದಾರೆ. ವಾಮಾಚಾರ, ಮಾಟ-ಮಂತ್ರ ಅಂದರೆ ನಿಜವೋ ಸುಳ್ಳೋ ಆ ಮಾತು ಬೇರೆ, ಆದರೆ ಈ ಹೆಸರುಗಳು ಕೇಳಿದರೆ ಬಹುತೇಕರು ಬೆಚ್ಚಿಬೀಳುತ್ತಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ವಾಮಾಚಾರಕ್ಕೆ ವಿದ್ಯಾವಂತರೂ ಸಹ ಹೆದರುತ್ತಾರೆ.

ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಬ್ಲ್ಯಾಕ್‌ ಮ್ಯಾಜಿಕ್‌ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಅಂತ ಅನೇಕರು ಹೇಳಿಕೊಂಡಿದ್ದಾರೆ. ವೈಚಾರಿಕ ಬುದ್ಧಿ ಇರುವವರು ಅದು ಯಾವುದೇ ರೀತಿ ಪರಿಣಾಮ ಬೀರುವುದಿಲ್ಲವೆಂದು ಹೇಳುತ್ತಾರೆ. ಅಮಾವಾಸ್ಯೆ ದಿನದ ರಾತ್ರಿ ಮೂರು ದಾರಿ ಸೇರುವ ಪ್ರದೇಶದಲ್ಲಿ ಸೂಜಿ, ಗೊಂಬೆ, ಲಿಂಬೆಹಣ್ಣು, ಕೆಂಪು ವಸ್ತ್ರ, ಅರಿಶಿಣ, ಕುಂಕುಮ ಹಾಕಿ ರಂಗೋಲಿ ಬಿಡಿಸಿರುತ್ತಾರೆ. ಹಣ್ಣು-ಹಂಪಲು, ಎಲೆ, ಹಣವನ್ನು ಇಟ್ಟು ಪೂಜೆ ಮಾಡಿರುತ್ತಾರೆ. ಈ ರಸ್ತೆಯಲ್ಲಿ ಸಾಗುವ ಬಹುತೇಕರು ಆತಂಕದಲ್ಲಿಯೇ ಸಂಚಾರ ನಡೆಸುತ್ತಾರೆ. ಯಾವುದೇ ಕಾರಣಕ್ಕೂ ಅದನ್ನು ದಾಟಬಾರದು ಎಂದು ಹಿರಿಯರು ಮಕ್ಕಳಿಗೆ ಹೇಳುತ್ತಾರೆ.

ಮಾಟ-ಮಂತ್ರ ಮಾಡುವವರ ಪ್ರಕಾರ ಮೂರು ದಾರಿ ಕೂಡುವ ಜಾಗದಲ್ಲಿಯೇ ವಾಮಾಚಾರ ಮಾಡಿದರೆ ಅದು ಹೆಚ್ಚಿನ ಪರಿಣಾಮವಂತೆ. ಅಮವಾಸ್ಯೆ ದಿನ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿ, ಅರಿಶಿನ, ಕುಂಕುಮ ಚೆಲ್ಲಿ ಲಿಂಬೆ ಹಣ್ಣು, ನೋಟು ಮತ್ತು ಚಿಲ್ಲರೆ ಹಣವನ್ನು ಹಾಕಿರುತ್ತಾರೆ. ಮಧ್ಯರಾತ್ರಿಯಲ್ಲಿಯೇ ಈ ರೀತಿಯ ವಾಮಾಚಾರಗಳು ನಡೆಯುತ್ತವೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಜನರು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಮತ್ತು ಹಿರಿಯರು ಇದನ್ನು ಕಂಡು ಭಯಪಟ್ಟುಕೊಳ್ಳುತ್ತಾರೆ. ಅನೇಕರು ಈ ರೀತಿಯ ವಾಮಾಚಾರದ ಗೊಂಬೆಗಳನ್ನು ಕಂಡು ಜ್ವರ ಬಂದು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ಬೇರೆಯವರ ಏಳಿಗೆ ಸಹಿಸದವರು, ತಮಗೆ ಅನಾರೋಗ್ಯ ಕಾಡಿದಾಗ, ಅಂದುಕೊಂಡಂತೆ ಕೆಲಸ ಆಗದಾದಾಗ ಜನರು ವಾಮಾಚಾರ ಮಾಡಿಸುತ್ತಾರೆ ಎನ್ನಲಾಗಿದೆ.

ಅಂಥ ವಸ್ತುಗಳನ್ನು ದಾಟುವ ಪ್ರಯತ್ನ ಮಾಡಬೇಡಿ. ಅದರಿಂದ ಕೆಡುಕಾಗುತ್ತದೆ ಎಂಬ ಕುರುಡು ನಂಬಿಕೆಯಿಂದ ಈ ಮಾತಲ್ಲ. ದಾರಿಯಲ್ಲಿ ಹೋಗುವಾಗ ಕೆಲವೊಂದು ವಸ್ತುಗಳನ್ನು ನಾವು ದಾಟಬಾರದು. ಅದು ವಾಮಾಚಾರವಲ್ಲದಿದ್ದರೂ, ಅದು ನಕಾರಾತ್ಮಕತೆಯ ಸಂಕೇತ. ಇದು ನಿಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಬೀರಲೂಬಹುದು. ಜನರು ಓಡಾಡೋ ರಸ್ತೆಯಲ್ಲಿಯೇ ಅರಿಶಿನ, ಕುಂಕುಮ, ಕುಂಬಳಕಾಯಿ, ನಿಂಬೆಹಣ್ಣು ಇತ್ಯಾದಿ ವಸ್ತುಗಳನ್ನು ಇರಿಸಲಾಗಿರುತ್ತದೆ. ಅಡ್ಡ ರಸ್ತೆಯು ರಾಹುವನ್ನೂ ಅಲ್ಲಿಟ್ಟ ವಸ್ತುಗಳು ಪಿತೃಗಳನ್ನೂ ಪ್ರತಿನಿಧಿಸುತ್ತದೆ. ಪಿತೃಗಳ ಆಹಾರವನ್ನು ದಾಟುವಂತಿಲ್ಲ. ಅಷ್ಟೇ ಅಲ್ಲ ಬೂದಿ, ಅರ್ಧ ಸುಟ್ಟ ಕಟ್ಟಿಗೆಯೂ ನೆಗೆಟಿವ್ ಸಂಕೇತ.

ದಾರಿಯಲ್ಲಿ ಸತ್ತ ಪ್ರಾಣಿ ಕಣ್ಣಿಗೆ ಕಂಡರೆ ನೀವು ನೋಡುವ ದಿಕ್ಕನ್ನು ಬದಲಿಸಿ, ಅದರಿಂದ ದೂರವೇ ತೆರಳಿ. ಹಾಗೆ ಸತ್ತ ಪ್ರಾಣಿಯನ್ನು ದಾಟುವುದಾಗಲಿ, ಅದರ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವುದಾಗಲಿ ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಅದು ನಿಮ್ಮ ಮೇಲೆ ನೆಗೆಟಿವ್ ರೀತಿಯಲ್ಲಿ ಪರಿಣಾಮ ಬೀರಲೂಬಹುದು. ಏಕೆಂದರೆ, ಸತ್ತ ಪ್ರಾಣಿಗಳಲ್ಲಿ ನಕಾರಾತ್ಮಕ ಶಕ್ತಿಗಳಿರುತ್ತವೆ. ಮೃತ ದೇಹವನ್ನು ದಾಟುವ ಮೂಲಕ ಆ ನಕಾರಾತ್ಮಕ ಶಕ್ತಿ ನಿಮ್ಮ ಜೀವನವನ್ನು ಪ್ರವೇಶಿಸಲೂಬಹುದು.

ದಾರಿಯಲ್ಲಿ ಹೋಗುವಾಗ ಮೆಣಸಿನಕಾಯಿ, ನಿಂಬೆ, ಮೊಟ್ಟೆ , ಸೂಜಿ ಹೀಗೆ ಹಲವು ಬಗೆಯ ವಸ್ತುಗಳು ಕಾಣಿಸಿದರೆ, ಅವುಗಳಿಂದ ಕೊಂಚ ದೂರವಿರಿ. ಅದರಿಂದ ಏನೂ ಆಗದಿದ್ದರೂ ಅದನ್ನು ನೋಡುತ್ತಿದ್ದಂ ತೆ ನಿಮ್ಮ ಮನಸು ವಿಚಲಿತಗೊಳ್ಳಬಹುದು. ನೆಗೆಟಿವ್ ವಿಚಾರಗಳು ನಿಮ್ಮನ್ನು ಆವರಿಸಬಹುದು. ಹಾಗಾಗಿ ರಸ್ತೆ ಮಧ್ಯ ಕಾಣಿಸಿದರೆ, ಅದನ್ನು ದಾಟುವ ಸಾಹಸಕ್ಕೆ ಕೈಹಾಕಬೇಡಿ, ಅದರ ಮೇಲೆ ಬೇಕು ಅಂತಲೇ ಗಾಡಿ ಚಲಾಯಿಸಬೇಡಿ. ರಸ್ತೆಯ ಮೇಲೆ ಕೂದಲಿನ ಗುಂಪನ್ನು ನೋಡಿದರೂ ಹೀಗೆಯೇ ಮಾಡಿ.

 

PREV
Read more Articles on
click me!

Recommended Stories

ಪಾಪ ಪರಿಹಾರಕ್ಕೆ ಗಂಗೆ ಪೂಜೆ ಮಾಡೋರು ಮನೆಗೆ ತರುವಾಗ ಈ ನಿಯಮ ಪಾಲಿಸಿ
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ