
ಚಾಣಕ್ಯ ನೀತಿ (chanakya Niti) ನಿಮ್ಮ ಮನೆಯ ಬಗ್ಗೆಯೂ ಮಾತನಾಡುತ್ತದೆ. ನಿಮ್ಮ ಮನೆ ನಿಮ್ಮ ಅತ್ಯಂತ ಖಾಸಗಿ ಸ್ಥಳ. ಅದು ಹೋಟೆಲ್ ಅಲ್ಲ, ಅದು ಕಚೇರಿಯಲ್ಲ. ಇತರರು ತಮ್ಮ ಹತಾಶೆಗಳನ್ನು ಹೊರಹಾಕಲು ಅದು ವೇದಿಕೆಯಲ್ಲ. ನಿಮ್ಮ ಮನೆ ನಿಮಗೆ ದೇವಾಲಯ ಇದ್ದಂತೆ. ದೇವಾಲಯ ಪವಿತ್ರ ಮತ್ತು ಗೌರವಕ್ಕೆ ಅರ್ಹ. ಆದರೆ ಕೆಲವೊಮ್ಮೆ ಕೆಲವು ಅತಿಥಿಗಳು ಗಡಿ ಮೀರಿ ವರ್ತಿಸುತ್ತಾರೆ. ಅಂಥವರಿಗೆ ನೀವು ಕೆಲವು ಕಟು ಸತ್ಯಗಳನ್ನು ಅರ್ಥ ಮಾಡಿಸಬೇಕು. ಯಾರೇ ಆಗಿರಲಿ, ನಿಮ್ಮ ಮನೆಯೊಳೆಗೆ ಇರುವಾಗ ಈ ಸಂಗತಿಗಳನ್ನು ಮಾಡಲು ಅವರಿಗೆ ಅವಕಾಶ ಕೊಡಬಾರದು ಅಂತಾರೆ ಆಚಾರ್ಯ ಚಾಣಕ್ಯರು.
1. ನಿಮ್ಮ ಜೀವನಶೈಲಿಯನ್ನು ಯಾರೂ ಟೀಕಿಸಲು ಬಿಡಬೇಡಿ. ನಿಮ್ಮ ಮನೆಯಲ್ಲಿ ಡೈನಿಂಗ್ ರೂಂ ಇರಲಿ ಇಲ್ಲದಿರಲಿ, ವಾರ್ಡ್ ರೋಬ್‌ಗಳು ಶ್ರೀಮಂತವಾಗಿರಲಿ ಇಲ್ಲದಿರಲಿ, ನಿಮ್ಮ ಊಟ- ತಿಂಡಿ ಸಸ್ಯಾಹಾರ ಆಗಿರಲಿ ಮಾಂಸಾಹಾರ ಆಗಿರಲಿ, ಅದೆಲ್ಲ ಇನ್ನೊಬ್ಬರ ವ್ಯವಹಾರ ಅಲ್ಲ. ಅದರ ಬಗ್ಗೆ ಇನ್ನೊಬ್ಬರಿಗೆ ಮಾತಾಡಲು ಅವಕಾಶ ಕೊಡಬೇಡಿ.
2. ಕೆಟ್ಟ ಶಕ್ತಿಯನ್ನು ಬಾಗಿಲಿನ ಮೂಲಕ ಬಿಡಬೇಡಿ. ಅತಿಥಿಗಳು ಬಿರುಗಾಳಿಗಳನ್ನಲ್ಲ, ಶಾಂತಿಯನ್ನು ತರಬೇಕು. ಅವರು ತಮ್ಮ ನಾಲಿಗೆಯಲ್ಲಿ ಬೇರೆಯವರ ಮೇಲೆ ನಂಜು ತುಂಬಿಕೊಂಡಿದ್ದರೆ, ಅದನ್ನು ಹೊರಗೆ ಎಲ್ಲಾದರೂ ಬಿಡಲಿ.
3. ನಿಮ್ಮ ಸಂಗಾತಿ, ನಿಮ್ಮ ಮಕ್ಕಳು ಅಥವಾ ನಿಮ್ಮ ಒಂಟಿತನದ ಬಗ್ಗೆ ಯಾರೂ ಕಾಮೆಂಟ್ ಮಾಡಲು ಬಿಡಬೇಡಿ. ಅವರು ನಿಮ್ಮ ಬಿಲ್‌ಗಳನ್ನು ಪಾವತಿಸುವುದಿಲ್ಲ, ಅವರು ನಿಮ್ಮ ಬದುಕಿನ ಹೋರಾಟಗಳಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಅವರ ಅಭಿಪ್ರಾಯ ನಿಮಗೆ ಬೇಕಿಲ್ಲ.
4. ಹೋಲಿಕೆಗಳು ಒಳಗೆ ನುಸುಳಲು ಬಿಡಬೇಡಿ. ʼಇಂಥವರನ್ನು ನೋಡಿ, ಅವಳಿಗೆ ಈಗಾಗಲೇ ಇದು ಅಥವಾ ಅದು ಇದೆ...ʼ ಎಂಬಂಥ ಮಾತುಗಳೆಲ್ಲ ವೇಷ ಧರಿಸಿದ ವಿಷ. ಅದನ್ನು ಹೀಗೆ ಕತ್ತರಿಸಿ- “ಅವರಿಗೆ ಅದು ಒಳ್ಳೆಯದು, ನನಗೆ ಇದು ಒಳ್ಳೆಯದು, ನಾನು ನನ್ನದೇ ಹಾದಿಯಲ್ಲಿದ್ದೇನೆ.”
5. ಕೃತಜ್ಞತೆಯಿಲ್ಲದ ಜನರು ನಿಮ್ಮ ಮೇಜಿನಲ್ಲಿ ಊಟ ಮಾಡಲು ಬಿಡಬೇಡಿ. ಕೃತಜ್ಞತೆಗೆ ಬೆಲೆ ಕೊಡದವರು, ನೀವು ಕೊಟ್ಟ ಆಹಾರ ಸೇವಿಸಿ ಮತ್ತೂ ಮುಖ ಗಂಟಿಕ್ಕುವವರು, ಅವರು ಎರಡನೇ ಬಾರಿಗೆ ನಿಮ್ಮಲ್ಲಿಗೆ ಬರಲು ಅರ್ಹರಲ್ಲ.
6. ಯಾರೂ ನಿಮ್ಮನ್ನು ಅವರ ಉಚಿತ ಕೌನ್ಸೆಲರ್ ಆಗಿಸಲು ಬಿಡಬೇಡಿ. ನೀವು ಅವರ ಕಷ್ಟ ಆಲಿಸುವುದು ನಿಮ್ಮ ಸಹಾನುಭೂತಿ ಗುಣ. ಆದರೆ ನೀವು ಹೇಗಿದ್ದೀರಿ ಎಂದು ಸಹ ಕೇಳದೆ, ನಿಮ್ಮ ವಾಸದ ಕೋಣೆಯಲ್ಲಿ ಅವರ ಭಾವನಾತ್ಮಕ ಕಸವನ್ನು ಎಸೆಯುವುದು ನಿಮಗೆ ಹಾನಿಕರ. ಅಂಥದಕ್ಕೆ ಅವಕಾಶ ಕೊಡಬೇಡಿ.
7. ಗಾಸಿಪ್ ನಿಮ್ಮ ಹೊಸ್ತಿಲನ್ನು ದಾಟಲು ಬಿಡಬೇಡಿ. ಇಂದು ನಿಮ್ಮಲ್ಲಿಗೆ ಗಾಸಿಪ್ ತರುವವರು ನಾಳೆ ನಿಮ್ಮ ಬಗ್ಗೆ ಇನ್ನೊಬ್ಬರ ಮನೆಯಲ್ಲಿ ಗಾಸಿಪ್ ಮಾಡುತ್ತಿರುತ್ತಾರೆ.
8. ನಿಮ್ಮ ವಿಜಯಗಳನ್ನು ಯಾರೂ ಕುಗ್ಗಿಸಲು ಬಿಡಬೇಡಿ. ಸಾಲ ತೀರಿಸಿದ್ದೀರಾ? ಮಕ್ಕಳನ್ನು ನೀವೇ ಬೆಳೆಸಿದ್ದೀರಾ? ಬಿರುಗಾಳಿಯ ನಂತರವೂ ನಿಂತಿದ್ದೀರಾ? ಅದು ದೊಡ್ಡದು. ಅವರು ಅದಕ್ಕೆ ಮೆಚ್ಚುಗೆ ಸೂಚಿಸಲು ಸಾಧ್ಯವಾಗದಿದ್ದರೆ, ಕೊನೆಯ ಪಕ್ಷ ಸುಮ್ಮನಿರಲಿ ಸಾಕು.
9. ನಿಮ್ಮ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ನಿಮ್ಮ ಬಗ್ಗೆ ಅಗೌರವಯುತವಾಗಿ ನಡೆಯಲು ಬಿಡಬೇಡಿ. ನಂಬಿಕೆಯು ಅಸಭ್ಯತೆಗೆ ಪರವಾನಗಿಯಲ್ಲ. ಗೌರವ ವಿನಂತಿಸಿ ಪಡೆಯಬೇಕಾದುದಲ್ಲ. ಅದನ್ನು ಅವರೇ ಅರ್ಥ ಮಾಡಿಕೊಂಡು ಆಚರಿಸಬೇಕು.
10. ಯಾರೂ ನಿಮ್ಮ ಮನೆಯ ಮಾಲೀಕರಂತೆ ವರ್ತಿಸಲು ಬಿಡಬೇಡಿ. ಅವರು ಸ್ಪಷ್ಟ ಗಡಿಗಳನ್ನು ಗೌರವಿಸಬೇಕು. ಅದು ಸಾಧ್ಯವಾಗದಿದ್ದರೆ, ಅವರಿಗೆ ಬಾಗಿಲನ್ನು ತೋರಿಸಿ.
ನಿಮ್ಮ ಮನೆ ಇತರರು ವಿಷವನ್ನು, ಕಸವನ್ನು ಎಸೆಯುವ ಸ್ಥಳವಲ್ಲ. ಅದು ನೀವು ಮತ್ತು ನಿಮ್ಮ ಕುಟುಂಬ ಶಾಂತಿಯುತವಾಗಿ ಇರಲು ಪವಿತ್ರವಾದ ಸ್ಥಳ. ಅಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದಿಲ್ಲದವರಿಗೆ ಬಾಗಿಲು ಮುಚ್ಚಲು ಕಲಿಯಿರಿ.