ನಿಮ್ಮ ಹುಟ್ಟಿದ ದಿನಕ್ಕೂ, ಗಾಡಿಯ ಸಂಖ್ಯೆಯೂ ಸಂಬಂಧ ಇದೆ ಎನ್ನುವುದು ನಿಮಗೆ ಗೊತ್ತೆ? ನಿಮ್ಮ ಡೇಟ್ ಆಫ್ ಬರ್ತ್ ಪ್ರಕಾರ ಈ ರೀತಿ ನಿಮ್ಮ ಗಾಡಿಯ ಸಂಖ್ಯೆ ಇದ್ದರೆ ನೀವೇ ಅದೃಷ್ಟವಂತರು! ಇಲ್ಲಿದೆ ನೋಡಿ ಡಿಟೇಲ್ಸ್
ಸಂಖ್ಯಾಶಾಸ್ತ್ರವು ಭಾರತೀಯರು ಅನುಸರಿಸಿಕೊಂಡು ಬಂದಿರುವ ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎನ್ನುವರು. ಇನ್ನೂ ಕೆಲವರು ಅಂಕಿಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಗಣಿತಶಾಸ್ತ್ರದ ಭಾಗವೆಂದೂ ಹೇಳುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ಕೆಲವು ಶಕ್ತಿ ಅಥವಾ ಶಕ್ತಿಯನ್ನು ಹೊಂದಿರುತ್ತದೆ ಅದು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವನ/ಅವಳ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರಬಹುದು. ನಮ್ಮ ಬದುಕು ಕೂಡ ಒಂದು ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತಿರುತ್ತದೆ. ಆದ್ದರಿಂದ ಸಂಖ್ಯಾಶಾಸ್ತ್ರವೆನ್ನುವುದು ನಿತ್ಯ ಬದುಕಿನ ಸೂಚಕವಾಗಿದೆ.
ವಾಹನಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಅದೇ ರೀತಿ, ವಾಹನಗಳ ಸಂಖ್ಯೆ ಕೂಡ! ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕಕ್ಕೂ, ವಾಹನದ ಸಂಖ್ಯೆಗೂ ಪರಸ್ಪರ ಸಂಬಂಧ ಇದೆ ಎಂದೇ ಹೇಳಲಾಗುತ್ತದೆ. ನಮಗೆ ಬೇಕಾಗಿರುವ ವಾಹನಗಳ ಸಂಖ್ಯೆ ಪಡೆಯಲು ಬಹುದೊಡ್ಡ ಮೊತ್ತವನ್ನು ನೀಡಬೇಕಾಗುತ್ತದೆ, ಇಲ್ಲದಿದ್ದರೆ ಕೊಟ್ಟ ಸಂಖ್ಯೆಯನ್ನು ಪಡೆಯುವುದೊಂದೇ ಮಾರ್ಗ ಎನ್ನುವುದು ಸತ್ಯವಾದರೂ, ಅದೃಷ್ಟವಂತರಿಗೆ ತಾನಾಗಿಯೇ ಅದೃಷ್ಟ ಹುಡುಕಿಕೊಂಡು ಬರುವುದು ಇದೆ. ಹಾಗಿದ್ದರೆ ನಿಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವಾಹನಗಳಲ್ಲಿ ಯಾವ ನಂಬರ್ ಇದ್ದರೆ ಒಳ್ಳೆಯದು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. (ಉದಾ ನಿಮ್ಮ ಗಾಡಿಯ ಸಂಖ್ಯೆ: KA 01- AB 1234 ಎನ್ನುವುದು ಆಗಿದ್ದರೆ, ಇದರಲ್ಲಿ 1234 ಇಷ್ಟನ್ನೇ ಕೂಡಿಸಬೇಕು. ಇದರ ಮೊತ್ತ 10 ಆಗಿರುತ್ತದೆ. ಇದನ್ನು 1+0 ಎಂದರೆ 1 ಎಂದು ಪರಿಗಣಿಸಬೇಕು)
Astro Tips : ಅಹಂಕಾರ ಬಿಟ್ಟು ಪತ್ನಿ ಪಾದ ಸ್ಪರ್ಶಿಸಿ .. ಕೆಲವೇ ದಿನದಲ್ಲಿ ಬದಲಾಗುತ್ತೆ ನಿಮ್ಮ ಅದೃಷ್ಟ
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 1, 10 ಅಥವಾ 19 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 1 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 1 ಅಥವಾ 9 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 2, 11 ಅಥವಾ 20 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 2 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 2 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 3, 12 ಅಥವಾ 21 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 3 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 3, 6 ಅಥವಾ 9 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 4, 13 ಅಥವಾ 22 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 4 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 2, 4 ಅಥವಾ 7 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 5, 14 ಅಥವಾ 23 ಆಗಿದ್ದರೆ, ನಿಮ್ಮ ಜನ್ಮ ದಿನಾಂಕವು 5 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 6 ಅಥವಾ 9 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 6, 15 ಅಥವಾ 24 ಆಗಿದ್ದರೆ, ನಿಮ್ಮ ಜನ್ಮ ದಿನಾಂಕವು 6 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 6 ಅಥವಾ 9 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 7, 16 ಅಥವಾ 25 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 7 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 1, 4,7 ಅಥವಾ 2 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 8, 17 ಮತ್ತು 26 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 8 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 8 ಅಥವಾ 4 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 9, 18, 27 ರಂದು ಹುಟ್ಟಿದ್ದರೆ, ನಿಮ್ಮ ಜನ್ಮ ದಿನಾಂಕವು 9 ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಾಡಿಯ ಸಂಖ್ಯೆಯನ್ನು ಒಟ್ಟುಗೂಡಿಸಿದರೆ ಅದರ ಮೊತ್ತವು 3, 9 ಅಥವಾ 1 ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ.
ಮನೆಯಲ್ಲಿ ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳಲೂ ವಾಸ್ತು ಇದೆ! ಕಪ್ಪು ನಾಯಿ ಸಾಕಿದರೆ ಶುಭವೋ, ಅಶುಭವೋ?