ಯುವತಿಯರು ಬಂಡೆ ಕಲ್ಲಿಗೆ ಮುತ್ತಿಕ್ಕದರೆ ಅದೇ ವರ್ಷ ಮದುವೆಯಾಗಲಿದೆ. ಕಾಲೇಜಿನಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಅಡ್ಮಿಷನ್ ಆದ ಬಳಿಕ ಬೆತ್ತಲಾಗಿ ಓಡಬೇಕು. ಇವೆಲ್ಲಾ ಆಚರಣೆ ರ್ಯಾಗಿಂಗ್ ಅಲ್ಲ. ವಿಚಿತ್ರ ನಂಬಿಕೆ. ಈಗಲೂ ಚಾಚು ತಪ್ಪದೆ ಈ ನಂಬಿಕೆ ಪಾಲನೆಯಾಗುತ್ತಿದೆ.
ಭಾರತ, ಏಷ್ಯಾ ದೇಶಗಳಲ್ಲಿ ಮೂಢನಂಬಿಕೆ ಹೆಚ್ಚು ಎಂಬ ಆರೋಪ ಇದೆ. ಹಲವು ದೇಶಗಳಲ್ಲಿ ಹಲವು ನಂಬಿಕೆಗಳು, ಆಚರಣೆ, ಸಂಪ್ರದಾಯಗಳು ಇದ್ದೇ ಇರುತ್ತದೆ. ಆದರೆ ಉತ್ತಮ ವಿದ್ಯಾಭ್ಯಾಸ, ರ್ಯಾಂಕ್ ಬರಲು ಕಾಲೇಜು ಹಾಸ್ಟೆಲ್‌ನಿಂದ ರೀಜನಲ್ ಆಫೀಸ್ ವರೆಗೆ ಬೆತ್ತಲಾಗಿ ಓಡುವುದು ನಂಬಿಕೆಯಾಗಿದೆ. ಹೀಗೆ ಓಡಿದವರು ಅತ್ಯುತ್ತಮ ಸ್ಥಾನ ಪಡೆಯುತ್ತಾರೆ ಅನ್ನೋದು ನಂಬಿಕೆ. ಇಷ್ಟೇ ಅಲ್ಲ ಕ್ಯಾಂಪಲ್ ಒಳಗಿರುವ ಕಲ್ಲಿಗೆ ಯುವತಿಯರು ಮುತ್ತಿಕ್ಕದರೆ ಅದೇ ವರ್ಷ ಮದುವೆಯಾಗುವುದು ಖಚಿತ ಅನ್ನೋದು ಮತ್ತೊಂದು ನಂಬಿಕೆ. ಅಷ್ಟಕ್ಕೂ ಈ ವಿಚಿತ್ರ ನಂಬಿಕೆ ಇರುವುದು ಅಮೆರಿಕದಲ್ಲಿ ಎಂದರೆ ನಂಬಲು ಅಸಾಧ್ಯ.
ಅಮೆರಿಕ ಮುಂದುವರಿದ ದೇಶ. ಇಲ್ಲೂ ಕೂಡ ಮೂಢ ನಂಬಿಕೆಗಳು ಇವೆ. ಮೆಸಾಚುಟ್ಸ್‌ನ ವಿಲಿಯಂ ಕಾಲೇಜಿನಲ್ಲಿ 1940ರಿಂದ ವಿಚಿತ್ರ ಸಂಪ್ರದಾಯ ಆಚರಿಸಲಾಗುತ್ತಿದೆ. ಕಾಲೇಜಿಗೆ ಆಡ್ಮಿಷನ್ ಆಗುವ ಹೊಸ ವಿದ್ಯಾರ್ಥಿಗಳು ಕಾಲೇಜಿನ ಹಾಸ್ಟೆಲ್‌ನಿಂದ ಅಮೆರಿಕ ಅಧ್ಯಕ್ಷ ಅವರ ರೀಜನಲ್ ಕಚೇರಿ ವರೆಗೆ ಬೆತ್ತಲಾಗಿ ಓಡಬೇಕು. ಹೀಗೆ ಓಡಿದರೆ ವಿದ್ಯಾರ್ಥಿ ವಿದ್ಯಾಭ್ಯಾಸ, ಇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಅನ್ನೋದು ಈ ಕಾಲೇಜಿನ ಹಾಗೂ ಇಲ್ಲಿನ ವಿದ್ಯಾರ್ಥಿಗಳ ನಂಬಿಕೆ. ಹೀಗೆ ಬೆತ್ತಲಾಗಿ ಓಡಿದವರ ಸಾಧನೆ ಇತಿಹಾಸವನ್ನು ಈ ಕಾಲೇಜಿನ ವಿದ್ಯಾರ್ಥಿಗಳ ಕಣ್ಮುಚ್ಚಿ ಹೇಳುತ್ತಾರೆ. ಹೀಗೆ ಬೆತ್ತಲಾಗಿ ಓಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಜೊತೆಗೆ ಸವಾಲನ್ನು ಎದಿರಿಸುವ ಶಕ್ತಿ ಬರುತ್ತದೆ ಎಂದೂ ಹೇಳುತ್ತಾರೆ.
ಮುಂಗೋಪ ಬಿಡಿಸಲು ಬಾಲಕಿಯನ್ನು ಮಾಂತ್ರಿಕನ ಬಳಿ ಕರೆದೊಯ್ದ ಪೋಷಕರಿಗೆ ಶಾಕ್!
ಮದುವೆಯಾಗಲು ಭಾರತದಲ್ಲಿ ಹಲವು ದೇವಸ್ಥಾನಗಳಲ್ಲಿ ಪೂಜೆ, ವೃತ ಕೈಗೊಳ್ಳುವುದು ಸೇರಿದಂತೆ ಹಲವು ರೀತಿಯ ಪದ್ಧತಿಗಳಿವೆ. ಕಂಕಣ ಕೂಡಿ ಬರಲು ದೇವರ ಜಪ, ಪೂಜೆ ವೃತಗಳು ನೆರವಾಗಲಿದೆ ಅನ್ನೋದು ಹಲವು ಭಾರತೀಯರ ನಂಬಿಕೆ.ಅಮೆರಿಕದಲ್ಲೂ ಕಂಕಣ ಕೂಡಿ ಬರಲು ವಿಚಿತ್ರ ನಂಬಿಕೆಯೊಂದಿದೆ. ಅಮೆರಿಕಗ ವೆಲ್ಲೆಸ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ದೊಡ್ಡ ಗಾತ್ರದ ಬಂಡೆ ಕಲ್ಲಿದೆ. ಇದನ್ನು ಸುತ್ತಲೂ ಬೇಲಿ ಹಾಕಿ ಸಂರಕ್ಷಿಸಿ ಇಡಲಾಗಿದೆ.
ಯುವತಿಯರು ಈ ಬಂಡೆ ಕಲ್ಲಿಗೆ ಮುತ್ತಿಕ್ಕಿ ಪ್ರಾರ್ಥಿಸಿದರೆ ಅದೇ ವರ್ಷ ಅವರ ಮದುವೆಯಾಗಲಿದೆ ಅನ್ನೋದು ನಂಬಿಕೆ. ಈ ಕಲ್ಲಿಗೆ ಮುತ್ತಿಕ್ಕ ಯುವತಿಗೆ ಮದುವೆ ವಿಳಂಬವಾದ ಊದಾಹರಣೆ ಇಲ್ಲ ಎಂದು ದಾಖಲೆ ಸಹಿತ ಉದಾಹರಣೆಗಳನ್ನು ನೀಡುತ್ತಾರೆ. ಈ ರೀತಿ ಹಲವು ಸಂಪ್ರದಾಯಗಳನ್ನು , ನಂಬಿಕೆಗಳನ್ನು ಅಮೆರಿಕ ಜನ ಅನುಸರಿಸುತ್ತಾರೆ.
ಐಶ್ವರ್ಯಾ ರೈ ಯಿಂದ ಶಾಹೀದ್ ಕಪೂರ್‌ವರೆಗೆ.. ಬಿಟೌನ್ ಸೆಲೆಬ್ರಿಟಿಗಳ ಮೂಢನಂಬಿಕೆಗಳು ಒಂದೆರಡಲ್ಲ..