Saturday Shopping : ಶನಿವಾರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ!

By Suvarna News  |  First Published Jan 7, 2022, 9:33 PM IST

ಶನಿವಾರ ಶನಿದೇವನ ವಾರವಾಗಿರೋ ಕಾರಣ ಈ ದಿನ ಆತನಿಗೆ ಅಪ್ರಿಯವಾದ ಕೆಲಸಗಳನ್ನು ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಶನಿವಾರ ಮನೆಗೆ ಯಾವೆಲ್ಲ ವಸ್ತುಗಳನ್ನು ತರಬಾರದು? ಯಾವೆಲ್ಲ ಪದಾರ್ಥಗಳನ್ನು ಸೇವಿಸಬಾರದು? ಇಲ್ಲಿದೆ ಮಾಹಿತಿ.


ಶನಿವಾರ (Saturday) ಕೆಲವೊಂದು ಕೆಲಸಗಳನ್ನು ಮಾಡೋದು ಅಶುಭ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಶನಿವಾರ ತೈಲ (Oil) ಖರೀದಿಸಬಾರದು (Purchase) ಎನ್ನುತ್ತಾರೆ. ಇಂಥ ಕೆಲವು ಕೆಲಸಗಳನ್ನು ಶನಿವಾರ ಮಾಡಿದ್ರೆ ಶನಿದೇವನಿಗೆ ಇಷ್ಟವಾಗೋದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶನಿದೇವ ಬೇಸರಿಸಿಕೊಂಡು ಯಾರ ಮೇಲಾದ್ರೂ ವಕ್ರದೃಷ್ಟಿ ಬೀರಿದ್ರೆ ಅವರ ಬದುಕು ನರಕವಾಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಶನಿವಾರ (Saturday) ಶನಿದೇವನ ಆರಾಧನೆ ಮಾಡೋ ಕಾರಣ ಈ ದಿನ ಆತನ ಅವಕೃಪೆಗೆ ತುತ್ತಾಗುವಂತಹ ಕೆಲಸ ಮಾಡಬಾರದು. ಅದ್ರಲ್ಲೂ ಶನಿವಾರ ಅಪ್ಪಿತಪ್ಪಿಯೂ ಕೆಲವೊಂದು ವಸ್ತುಗಳನ್ನು ಮನೆಗೆ (Home) ತರಬಾರದು. ಹಾಗಾದ್ರೆ ಶನಿವಾರ ಯಾವೆಲ್ಲ ವಸ್ತುಗಳನ್ನು (Things) ಮನೆಗೆ ತರಬಾರದು? ಯಾವೆಲ್ಲ ವಸ್ತುಗಳನ್ನು ಸೇವಿಸಬಾರದು (eat)? ಇಲ್ಲಿದೆ ಮಾಹಿತಿ. 

ಸಾಸಿವೆ ಎಣ್ಣೆ(Mustard oil)
ಶನಿವಾರ ಯಾವುದೇ ಕಾರಣಕ್ಕೂ ಸಾಸಿವೆ ಎಣ್ಣೆ (Mustard oil) ಖರೀದಿಸಬಾರದು. ಇದ್ರಿಂದ ಜೀವನದಲ್ಲಿ ಸಂಕಷ್ಟ ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನಾರೋಗ್ಯ(Illness) ಕೂಡ ಕಾಡಬಹುದು. ಅದೇರೀತಿ ಶನಿವಾರ ಯಾರಿಗೂ ತೈಲ (Oil) ನೀಡಬಾರದು. ಜ್ಯೋತಿಷ್ಯಶಾಸ್ತ್ರದ (Asrology) ಪ್ರಕಾರ ನಿಮಗೆ ಶನಿದೇವರಿಂದ ಮುಕ್ತಿ ಸಿಗಬೇಕೆಂದ್ರೆ ಸಾಸಿವೆ ಎಣ್ಣೆ ಹಾಕಿ ಮಾಡಿದ ಹಲ್ವವನ್ನು ಕಪ್ಪು ಬಣ್ಣದ ನಾಯಿಗೆ (Dog) ತಿನಿಸಬೇಕು.  ಶನಿವಾರ ಶನಿದೇವರ ಮುಂದೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಶುಭಕಾರಕ.

Tap to resize

Latest Videos

undefined

Bad Luck: ಈ 2 ರಾಶಿಯವರು ಮರೆತೂ ಕಪ್ಪು ದಾರವನ್ನು ಕಟ್ಟಿಸಿಕೊಳ್ಳಬಾರದು!

ಕಬ್ಬಿಣದ ಸಾಮಗ್ರಿಗಳನ್ನು ಖರೀದಿಸಬಾರದು
ಶನಿವಾರ ಯಾವುದೇ ಕಬ್ಬಿಣದ (Iron) ಸಾಮಗ್ರಿಗಳನ್ನು ಖರೀದಿಸಬಾರದು. ಕಬ್ಬಿಣ ಶನಿದೇವರ ಮೆಚ್ಚಿನ ಲೋಹವಾಗಿದ್ದು, ಶನಿವಾರ ಅದನ್ನು ಖರೀದಿಸಿದ್ರೆ ಶನಿದೇವರು ಬೇಸರ ಮಾಡಿಕೊಳ್ಳುತ್ತಾನೆ. ಆದ್ರೆ ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡೋದು ಶುಭದಾಯಕ ಎಂದು ಹೇಳಲಾಗುತ್ತದೆ. ಶನಿವಾರ ಕಬ್ಬಿಣದ ವಸ್ತುಗಳನ್ನು ದಾನ ಮಾಡೋದ್ರಿಂದ ಶನಿದೇವ ಪ್ರಸನ್ನಗೊಂಡು ನಿಮಗೆ ಆಶೀರ್ವಾದ ಮಾಡುತ್ತಾನೆ. ಶನಿವಾರ ಕಬ್ಬಿಣದ ವಸ್ತುಗಳನ್ನು ದಾನ ಮಾಡೋದ್ರಿಂದ ಉದ್ಯೋಗದಲ್ಲಿ(Job) ಬಡ್ತಿ (Promotion) ಸಿಗುತ್ತದೆ. ಜೊತೆಗೆ ದುರ್ಘಟನೆಗಳಿಂದ ನೀವು ಪಾರಾಗುತ್ತೀರಿ.

ಉಪ್ಪು(Salt)
ಶನಿವಾರ ಉಪ್ಪು(Salt) ಖರೀದಿಸಬಾರದು. ಶನಿವಾರ ಉಪ್ಪು ಖರೀದಿಸೋದ್ರಿಂದ ಸಾಲದ (loan) ಹೊರೆ ಹೆಚ್ಚುತ್ತ ಹೋಗಿ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಆದಕಾರಣ ಉಪ್ಪನ್ನು ಶನಿವಾರ ಹೊರತುಪಡಿಸಿ ಅನ್ಯದಿನ ಖರೀದಿಸಿ.

ಮಾಂಸ ತಿನ್ನಬೇಡಿ
ಶನಿವಾರ ಮಾಂಸ (Meat) ತಿನ್ನಬಾರದು ಹಾಗೂ ಮದ್ಯ  (Alcohol) ಸೇವಿಸಬಾರದು. ಒಂದು ವೇಳೆ ನೀವು ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡಿದ್ರೆ ಶನಿದೇವರ ಅವಕೃಪೆಗೆ ತುತ್ತಾಗೋ ಸಾಧ್ಯತೆಯಿರುತ್ತದೆ. ಅದೇರೀತಿ ಶನಿವಾರ ಪೊರಕೆ, ಕಪ್ಪು ಚಪ್ಪಲಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ.

Indian Mythology: ಎಲ್ಲರನ್ನೂ ಕಾಡುವ ಶನಿಯ ಬಗ್ಗೆ ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳು..

ಮಸೂರ್ ದಾಲ್ ತಿನ್ನಬಾರದು
ಶನಿವಾರ ಮಸೂರ್ ದಾಲ್ ಸೇವಿಸಬಾರದು. ಮಸೂರ್ ದಾಲ್ ಸೂರ್ಯ (Sun) ಹಾಗೂ ಮಂಗಳನಿಗೆ (Mars)ಸಂಬಂಧಿಸಿದ್ದಾಗಿದೆ. ಸೂರ್ಯ ಹಾಗೂ ಮಂಗಳನಿಗೆ ಶನಿದೇವರ ಜೊತೆ ವೈರತ್ವವಿದೆ. ಹೀಗಾಗಿ ಶನಿವಾರ ಮಸೂರ್ ದಾಲ್ ಸೇವಿಸಿದ್ರೆ ಶನಿದೇವರು ಉಗ್ರನಾಗುತ್ತಾನೆ. ಹೀಗಾಗಿ ಈ ದಿನ ಮಸೂರ್ ದಾಲ್ ಸೇವಿಸಿದ್ರೆ ನಿಮ್ಮ ಮನಸ್ಸಿನಲ್ಲಿ ಕೋಪ (Angry) ಹಾಗೂ ಶತ್ರುತ್ವದ (enemity) ಭಾವನೆ ಹೆಚ್ಚುತ್ತದೆ. ನಿಮ್ಮ ಶತ್ರುಗಳ ಸಂಖ್ಯೆ ಕೂಡ ಹೆಚ್ಚುತ್ತ ಸಾಗುತ್ತದೆ.ಇನ್ನು ಶನಿವಾರ ಕೆಂಪು ಮೆಣಸು ಹಾಗೂ ಮೊಸರು ಕೂಡ ಸೇವಿಸಬಾರದು ಎಂದು ಹೇಳಲಾಗುತ್ತದೆ. ಇವೆರಡೂ ಕೂಡ ಶನಿದೇವರಿಗೆ ಇಷ್ಟವಿಲ್ಲದ ಪದಾರ್ಥಗಳಾಗಿವೆ. ಶನಿವಾರ ಅಂದ್ರೆ ಅದು ಶನಿದೇವರ ವಾರ. ಹೀಗಾಗಿ ಆ ದಿನ ಶನಿದೇವರಿಗೆ ಅಪ್ರಿಯವಾದ ಕೆಲಸಗಳನ್ನು ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ. 

click me!