ಗೌರಿ ಹಬ್ಬದ ಸುದಿನ ಹೇಗಿದೆ ನಿಮ್ಮ ಭವಿಷ್ಯ..?

By Web DeskFirst Published 12, Sep 2018, 7:02 AM IST
Highlights

ಗೌರಿ ಹಬ್ಬದ ಸುದಿನ ಹೇಗಿದೆ ನಿಮ್ಮ ಭವಿಷ್ಯ..?

ಮೇಷ
ಎಣ್ಣೆಯ ವ್ಯಾಪಾರಿಗಳಿಗೆ ಸುದಿನ. ಉಡುಪು
ತಯಾರಕರೂ ಹಾಗೂ ಮಾರಾಟಗಾರರಿಗೆ
ಸ್ವಲ್ಪ ನೆಮ್ಮದಿಯ ದಿನಗಳೂ ಈಗ ಬರಲಿವೆ.

ವೃಷಭ
ಲೆಕ್ಕಪತ್ರ ವ್ಯವಹಾರದ ನಿಮ್ಮ ಬುದ್ಧಿಮತ್ತೆಯು
ಈ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ.
ಹಳೇ ಕಡತಗಳ ವಿಲೇವಾರಿಯೂ ಆಗಲಿದೆ.

ಮಿಥುನ
ಇಷ್ಟವಾದ ತಿಂಡಿ ತಿನ್ನುವ ಅವಕಾಶ ಬಂದಿದೆ.
ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ತಗ್ಗಲಿದೆ.
ತರಾತುರಿಯ ಕೆಲಸದಲ್ಲಿ ತೊಡಗಲಿದ್ದೀರಿ.

ಕಟಕ
ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿ.
ನಿಮ್ಮ ಗೆಳೆಯನ ಸಂಸಾರದವರು ನಿಮ್ಮನ್ನು
ಸಂಪರ್ಕಿಸಲಿದ್ದಾರೆ. ಖುಷಿ ಹಂಚಿಕೊಳ್ಳದ್ದೀರಿ.

ಸಿಂಹ
ಮಾಡಿದ್ದೆಲ್ಲವೂ ಒಳಿತಾಗಲಿದೆ. ಆತುರ ಬೇಡ.
ಯೋಜನೆ, ಆಲೋಚನೆಗಳು ಸರಿಯಾಗಿರಲಿ.
ಇಷ್ಟು ದಿನಗಳ ಶ್ರಮವು ಈಗ ಫಲ ನೀಡಲಿದೆ.

ಕನ್ಯಾ
ಕುಟುಂಬದಲ್ಲಿನ ಎಲ್ಲಾ ಕಷ್ಟಗಳನ್ನೂ ನೀವೇ
ಜವಾಬ್ದಾರಿ ಹೊತ್ತು ಸರಿ ದೂಗಿಸಲಿದ್ದೀರಿ. ಈ
ದಿನ ನಿಮಗೆ ಹೆಚ್ಚಿನ ಒತ್ತಡವು ಏರ್ಪಡಲಿದೆ.

ತುಲಾ
ಎಲ್ಲವೂ ನೀವಂದುಕೊಂಡಂತೆ ನಡೆಯಲಿದೆ.
ಉತ್ತಮ ಫಲಿತಾಂಶವನ್ನೂ ನಿರೀಕ್ಷಿಸಬಹುದು.
 ಆರೋಗ್ಯದತ್ತ ಗಮನಹರಿಸುವುದು ಸೂಕ್ತ.


ವೃಶ್ಚಿಕ
ಒತ್ತಡವು ಹೆಚ್ಚಾಗಲಿದೆ. ಆದರೂ ಆ ಕೆಲಸವು
ನಿಮಗಿಷ್ಟವಾದ ಕಾರಣ ಬೇಸರವಾಗದು.
ಧೈರ್ಯಗೆಡದಂತಿರಿ. ಎಲ್ಲಾ ಒಳಿತಾಗಲಿದೆ. 

ಧನುಸ್ಸು
ಏಕಪಕ್ಷೀಯ ಸ್ವಭಾವ ನಿಮ್ಮದಾಗಿದ್ದು
ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ.
ಹರುಷದ ಕ್ಷಣಗಳು ಈ ದಿನ ಹೆಚ್ಚಾಗಿವೆ.

ಮಕರ
ಆತ್ಮೀಯರ ಆಗಮನದಿಂದ ಮನಃಶಾಂತಿ
ಸಿಗಲಿದೆ. ಶುಭ ಸುದ್ದಿಗಳ ಮಹಾಪೂರವೇ
ಹರಿಯಲಿದೆ. ತಟಸ್ಥ ನೀತಿ ಈಗ ಕ್ಷೇಮ.

ಕುಂಭ
ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇಂದು ಹೆಚ್ಚಿನ
ಧನಾಗಮ. ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ
ಮಾಡುವವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿದೆ.

ಮೀನ 
ನಿಮ್ಮ ಕೌಟುಂಬಿಕ ಚಿಂತೆಗಳು ಕಚೇರಿಯ
ಕೆಲಸಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ.
ಆಗ ಎಲ್ಲ ಕೆಲಸಗಳು ಸುಸೂತ್ರವಾಗಿ ಆಗಲಿದೆ

Last Updated 19, Sep 2018, 9:23 AM IST