ದಿನ ಭವಿಷ್ಯ : ಆಗಸ್ಟ್ 28

By Web DeskFirst Published 28, Aug 2018, 7:04 AM IST
Highlights

ಇಂದಿನ ನಿಮ್ಮ ದಿನ ಭವಿಷ್ಯ 

ಮೇಷ
ಉದ್ಯೋಗಕ್ಕಾಗಿ ನಡೆದ ತೀವ್ರ ಪ್ರಯತ್ನವು
ಫಲ ನೀಡಲಿದೆ. ಅಲ್ಲದೇ ಸಂಸ್ಥೆಯೊಂದರ
ಪಾಲುದಾರಿಕೆಗೂ ಮನಸ್ಸು ಮುಂದಾಗಲಿದೆ.

ವೃಷಭ
ಹಣಕಾಸಿನ ಬಗ್ಗೆ ಚಿಂತಿಸದಿರಿ. ನಿಮ್ಮಲ್ಲಿನ ಪರಿ
ಶ್ರಮ ಹಾಗೂ ಏಕಾಗ್ರತೆಯಿಂದ ಬಾಕಿ ಉಳಿದ
ಕೆಲಸಗಳು ಮುಗಿಯಲಿವೆ. ನೆಮ್ಮದಿಯ ದಿನ.

ಮಿಥುನ
ಹೆಂಡತಿಯ ಮಾತಿಗೆ ತಲೆದೂಗಲೇ ಬೇಕು.
ಇಲ್ಲವಾದಲ್ಲಿ ನೆಮ್ಮದಿ ಹಾಳಾಗಲಿದೆ. ದಿಢೀರ್
ದೂರ ಪ್ರಯಾಣಕ್ಕೆ ಯೋಜನೆ ಹಾಕಲಿದ್ದೀರಿ.

ಕಟಕ

ನಿಮ್ಮ ರಾಶಿಯವರು ಇಂದು ಹೆಚ್ಚು ಹಣ
ವ್ಯಯ ಮಾಡದಿರುವುದು ಸೂಕ್ತ. ಹಿಂದೆ
ಕೂಡಿಟ್ಟ ಹಣವು ಉಪಯೋಗಕ್ಕೆ ಬರಲಿದೆ.

ಸಿಂಹ
ಕೃಷಿಕರು ಯೋಚಿಸಿ ನಿರ್ಧಾರಗಳನ್ನು ತೆಗೆದು
ಕೊಂಡರೆ ಒಳ್ಳೆ ದಿನಗಳು ಹೆಚ್ಚು ದೂರವಿಲ್ಲ.
ತಾಳ್ಮೆಯು ಈಗ ಅಗತ್ಯವಾಗಿ ಬೇಕಾಗಿ

ಕನ್ಯಾ
ತಿಳಿಯದ ನೋವು ಕಸಿವಿಸಿಯನ್ನುಂಟು
ಮಾಡುತ್ತಿದೆ. ಚಿಂತಿಸದೇ ಧೈರ್ಯದಿಂದಿರಿ.
ಮನೆಯ ವಾತಾವರಣದಲ್ಲಿ ಲವಲವಿಕೆ.

ತುಲಾ 
ಇಂದು ನೀವು ಹೆಚ್ಚೆಚ್ಚು ಉದಾರಿಗಳಂತೆ
ವರ್ತಿಸಲಿದ್ದೀರಿ. ದಾನ-ಧರ್ಮಗಳಲ್ಲೂ
ತೊಡಗಲಿದ್ದೀರಿ. ಮಾನಸಿಕ ನೆಮ್ಮದಿ ಸಿಗಲಿದೆ.

ವೃಶ್ಚಿಕ
ನೀವಂದುಕೊಂಡಂತೆ ನಿಮ್ಮ ಎಲ್ಲ ಕೆಲಸಗಳೂ
ನಿರಾತಂಕವಾಗಿ ನೆರವೇರುವವು. ಗ್ರಹಗತಿಗೆ
ಮನೆಯ ವಾತಾವರಣವೂ ಪೂರಕವಾಗಿದೆ. 

ಧನುಸ್ಸು
ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವು
ದೊರೆಯಲಿದೆ. ಈಗ ನಿಮ್ಮ ಫಲಾಫಲಗಳು
ಉತ್ತಮ. ಹೊಸಬರು ಸ್ನೇಹಿತರಾಗುತ್ತಾರೆ.

ಮಕರ
ಕಲಹ-ವಿರಸಗಳು ಕಡಿಮೆಯಾಗುವ
ದಿನಗಳು ಹತ್ತಿರದಲ್ಲೇ ಇವೆ. ನಿಮ್ಮ ಬಂಧು
ಬಾಂಧವರ ಸಹಕಾರವೂ ಹೆಚ್ಚಾಗಲಿದೆ.

ಕುಂಭ
ಆದರೆ ಮುಂದಾಲೋಚನೆ ಒಳಿತು. ಆಲಸ್ಯವು
ದೂರಾಗುವ ಸಮಯ. ಹೊಸ ಹೊಸ
ಆಲೋಚನೆಗಳತ್ತ ಗಮನ ಹರಿಸಿ. ಶುಭ ದಿನ.

ಮೀನ 
ಮದುವೆ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.
ಕರಕುಶಲ ವಸ್ತುಗಳನ್ನು ತಯಾರಿಸಲು
ಆರಂಭಿಸಿದ್ದೀರಿ. ಏಕಾಂತಿತನ ಒಳ್ಳೆಯದಲ್ಲ.

Last Updated 9, Sep 2018, 8:42 PM IST