ಈ ರಾಶಿಗೆ ಅತ್ಯುತ್ತಮ ದಿನವಾದ ಇಂದು ಹಣವು ಹರಿದು ಬರಲಿದೆ

By Web DeskFirst Published 25, Aug 2018, 7:01 AM IST
Highlights

ಈ ರಾಶಿಗೆ ಅತ್ಯುತ್ತಮ ದಿನವಾದ ಇಂದು ಹಣವು ಹರಿದು ಬರಲಿದೆ

ಈ ರಾಶಿಗೆ ಅತ್ಯುತ್ತಮ ದಿನವಾದ ಇಂದು ಹಣವು ಹರಿದು ಬರಲಿದೆ

ಮೇಷ
ದೂರದ ಸಂಬಂಧಿಯು ನಿಮ್ಮ ಸಹಾಯಕ್ಕೆ
ಬಂದು ಮಗನಿಗೆ ಉತ್ತಮ ಸಂಬಂಧವನ್ನು
ಗೊತ್ತು ಮಾಡಲಿದ್ದಾರೆ. ಖುಷಿಯ ದಿನವಿದು.

ವೃಷಭ
ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ ಇದಾಗಿದ್ದು
ಸ್ವಲ್ಪ ಪರಿಶ್ರಮ ಪಟ್ಟರೂ ಸಾಕು. ಉತ್ತಮ
ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ.

ಮಿಥುನ
ಕ್ರಯ-ವಿಕ್ರಯ ಕ್ಷೇತ್ರದವರಿಗೆ ಅನುಕೂಲ
ವಾತಾವರಣ. ನಿಮ್ಮ ಪ್ರಗತಿಯ ದಿನಗಳು
ಈಗ ಆರಂಭವಾಗಿದೆ. ನೆಮ್ಮದಿಯ ದಿನಗಳು.

ಕಟಕ
ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ
ನಿಟ್ಟಿನಲ್ಲಿ ಬಳಸಲಿದ್ದೀರಿ. ಹಾಡುಗಾರರಿಗೆ
ಒಳ್ಳೆಯ ದಿನ. ಹಣಕಾಸು ಹರಿದು ಬರಲಿದೆ.

ಸಿಂಹ
ಮೆಡಿಸಿನ್ ಹಾಗೂ ಸಂಗೀತ ಕ್ಷೇತ್ರಗಳಲ್ಲಿ
ಇರುವವರಿಗೆ ನೆಮ್ಮದಿಯ ದಿನಗಳಿವು.
ಗೃಹಿಣಿಯರಿಗೆ ಪ್ರಶಂಸೆಯು ಖಚಿತವಾಗಿದೆ.

ಕನ್ಯಾ
ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆಯು
ಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ನೀರಲ್ಲಿ
ಹೋಮ ಮಾಡಿದಂತೆ ವ್ಯರ್ಥವಾಗುತ್ತದೆ.

ತುಲಾ
ವಾಹನದ ಮೇಲಿನ ನಿಮ್ಮ ಹೂಡಿಕೆಯನ್ನು
ಸ್ವಲ್ಪ ದಿನಗಳು ಮುಂದೂಡಿರಿ. ಇಂತಹ
ಹೂಡಿಕೆಗಳಿಗೆ ಇದು ಸಕಾಲವಲ್ಲ. ಜೋಪಾನ.

ವೃಶ್ಚಿಕ
ಹೆಂಗಸರ ಮನೋರೋಗವು ದೂರಾಗಲಿದೆ.
ಸಣ್ಣ ಪುಟ್ಟ ಕೆಲಸಗಳಿಗೂ ದೊಡ್ಡ ಪ್ರಶಂಸೆಗಳು
ಸಿಗಲಿವೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. 

ಧನುಸ್ಸು
ಸಹೋದ್ಯೋಗಿಗಳ ಸೌಹಾರ್ದತೆಯು ಈಗ
ನಿಮ್ಮಲ್ಲಿ ಖುಷಿಯನ್ನು ದ್ವಿಗುಣಗೊಳಿಸಲಿದೆ.
ಬಡ್ಡಿ ವ್ಯವಹಾರದಲ್ಲಿ ಹೆಚ್ಚು ಪ್ರಗತಿ ಸಿಗಲಿದೆ.

ಮಕರ
ಚಳಿ-ಗಾಳಿಗಳಿಂದ ಶೀತ ದೇಹವಾದ ನಿಮಗೆ
ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಆದಷ್ಟು
ಎಚ್ಚರ ವಹಿಸುವುದು ಸೂಕ್ತ. ಎಚ್ಚರದಿಂದಿರಿ.

ಕುಂಭ
ನಿಮ್ಮ ಪತ್ನಿಯ ಸಹಕಾರದಿಂದ ಕಷ್ಟ ಕಾಲ
ಕ್ಕೆಂದು ಕೂಡಿಟ್ಟ ಹಣವು ಈಗ ಉಪಯೋಗಕ್ಕೆ
ಬರಲಿದೆ. ವೃಥಾ ಖರ್ಚು ಒಳ್ಳೆಯದಲ್ಲ.

ಮೀನ 
ಆಧ್ಯಾತ್ಮ ಜೀವನದಲ್ಲಿ ಸಂತೃಪ್ತಿ. ಕೆಲಸ-
ಕಾರ್ಯಗಳಿಗೆ ಪ್ರೋತ್ಸಾಹವು ದೊರೆಯಲಿದೆ.
ನಿರಾಳತೆ ಅನುಭವಿಸುವಿರಿ. ಖುಷಿಯ ದಿನ.

Last Updated 9, Sep 2018, 9:48 PM IST