ಈ ರಾಶಿಯವರು ಇಂದು ಎಚ್ಚರಿಕೆಯಿಂದ ಇರುವುದು ಒಳಿತು

By Web DeskFirst Published 22, Aug 2018, 7:06 AM IST
Highlights

ಈ ರಾಶಿಯವರು ಇಂದು ಎಚ್ಚರಿಕೆಯಿಂದ ಇರುವುದು ಒಳಿತು

ಈ ರಾಶಿಯವರು ಇಂದು ಎಚ್ಚರಿಕೆಯಿಂದ ಇರುವುದು ಒಳಿತು

ಮೇಷ
ಪೂರಕ ವಾತಾವರಣ ಏರ್ಪಟಿದ್ದೆ. ನೀವು ಈ
ದಿನ ಆಶಾವಾದಿಯಾಗಿರುವಿರಿ. ಹಣಕಾಸಿನ
ವಿಷಯದಲ್ಲಿ ಎಚ್ಚರವಾಗಿರಿ. ಸಾಲ ಕೊಡದಿರಿ.

ವೃಷಭ
ನಿಮ್ಮ ಕಸೂತಿಯ ಕೆಲಸದಲ್ಲಿ ಪ್ರಗತಿ ಸಾಧಿಸು
ತ್ತೀರಿ. ಹೊಸ ಗೆಳತಿಯ ಪ್ರೀತಿ-ಪ್ರೇಮಕ್ಕಾಗಿ
ಹೆಚ್ಚೆಚ್ಚು ಹಣವನ್ನು ವ್ಯಯ ಮಾಡುತ್ತೀರಿ.

ಮಿಥುನ
ನಿಮ್ಮ ಧೈರ್ಯದ ಮನಸ್ಥಿತಿಗೆ ಇಂದು
ಸರಿಯಾದ ದಿನ. ಮನಸ್ಸಿನ ತುಮುಲಗಳು
ದೂರಾಗಲಿವೆ. ಕಷ್ಟಗಳು ಮಾಯವಾಗಲಿದೆ.

ಕಟಕ
ಮನರಂಜನಾ ಕಾರ್ಯಕ್ರಮದತ್ತ ಇಂದು
ನಿಮ್ಮ ಮನಸ್ಸು ವಾಲಲಿದೆ. ಖುಷಿಯಲ್ಲೇ
ದಿನವನ್ನು ಕಳೆಯಲು ಬಯಸಲಿದ್ದೀರಿ.

ಸಿಂಹ
ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.
ಇಂದು ನಿಮಗೆ ಶುಭ ದಿನ ಎನ್ನಬಹುದು.
ಹಿರಿಯರ ಆರೋಗ್ಯದತ್ತ ಗಮನವಿರಲಿ.

ಕನ್ಯಾ
ನಿಮ್ಮ ಕಾರ್ಯದಲ್ಲಿ ಸ್ವಲ್ಪ ಹೆಣಗಾಡಿದ ಬಳಿಕ
ಜಯ ಸಾಧಿಸುತ್ತೀರಿ. ಮಾನಸಿಕ ನೆಮ್ಮದಿಗೆ
ಧ್ಯಾನ-ಯೋಗ ಮಾಡುವುದು ಲೇಸು.

ತುಲಾ 
ಮಹಿಳೆಯರ ಆರೋಗ್ಯದಲ್ಲಿ ಏರುಪೇರು
ಆಗಲಿದೆ. ಮಗಳ ಆಗಮನ ಖುಷಿ ತಂದಿದೆ.
ಓದಲ್ಲಿ ಆಸಕ್ತಿ ಹೆಚ್ಚಲಿದೆ. ಪುಸ್ತಕ ಕೊಳ್ಳುವಿರಿ.

ವೃಶ್ಚಿಕ
ಸಂಗೀತ ಪ್ರೇಮಿಗಳಾದ ನೀವು ಹೆಚ್ಚೆಚ್ಚು
ಸಮಯವನ್ನು ಅದಕ್ಕಾಗಿಯೇ ವಿನಿಯೋಗಿ
ಸುವಿರಿ. ನಿಮ್ಮ ಜೀವನಕ್ಕದೇ ದಾರಿಯಾಗಲಿದೆ. 

ಧನಸ್ಸು
ಮೊಬೈಲ್‌ನ ಒಳಗೇ ಹೋಗಿರುತ್ತೀರಿ. ಅದು
ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ
ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.

ಮಕರ
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ
ಅವಕಾಶಗಳಿವೆ. ಹೋರಾಟ ಫಲ ನೀಡಲಿದೆ.
ಆಶಾಭಾವನೆ ಇರಲಿ. ಚಿಂತೆ ದೂರಾಗಲಿದೆ.

ಕುಂಭ
ನಾಡು-ನುಡಿಗಳ ಬಗ್ಗೆ ನಿಮ್ಮ ಕಾಳಜಿಯು
ಅಮೋಘವಾದದ್ದು. ಅದರತ್ತ ನಿಮ್ಮ ನಡೆಯು
ನಿಮ್ಮ ಜೀವನಕ್ಕೂ ಹೆಚ್ಚು ಸಹಕಾರಿಯಾಗಲಿದೆ.

ಮೀನ 
ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ
ನೆರವೇರಲಿವೆ. ಆದರೂ ಹೊರಗಿನ ತಿಂಡಿ
ತಿನ್ನುವ ಕ್ರಮ ಅಷ್ಟೇನು ಒಳಿತಲ್ಲ. ಜೋಕೆ.

Last Updated 9, Sep 2018, 9:51 PM IST