ದಿನ ಭವಿಷ್ಯ: ಈ ರಾಶಿಯವರು ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ

Suvarna News   | Asianet News
Published : Apr 16, 2021, 07:08 AM ISTUpdated : Apr 16, 2021, 07:17 AM IST
ದಿನ ಭವಿಷ್ಯ: ಈ ರಾಶಿಯವರು ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ

ಸಾರಾಂಶ

16 ಏಪ್ರಿಲ್ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ನಿಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸ ತುಂಬುವಲ್ಲಿ ನಿಮ್ಮ ಪಾತ್ರ ದೊಡ್ಡದು. ರಗಳೆಗಳಿಂದ ಹೊರ ಬರಲಿದ್ದೀರಿ. ಸಂತೋಷ ಹೆಚ್ಚಾಗಲಿದೆ

ವೃಷಭ: ಪದೇ ಪದೇ ಕಾಡುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತವಾದ ಪರಿಹಾರ ದೊರೆಯಲಿದೆ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೇ ಇದೆ.

ಮಿಥುನ: ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಮಾಡುವಾಗ ವ್ಯಕ್ತಿತ್ವಕ್ಕೆ ಒತ್ತು ನೀಡಿ. ಕಾಲ ಬದಲಾಗಲಿ

ಕಟಕ: ನನಗೇ ಯಾಕೆ ಇಷ್ಟೊಂದು ಕಷ್ಟ ಎಂದು ಕೊರಗುತ್ತಾ ಕೂರುವುದಕ್ಕೆ ಬದಲಾಗಿ, ಧೈರ್ಯದಿಂದ ಮುಂದೆ ಸಾಗುತ್ತಿರಿ. ಶುಭಫಲ.

ಸಿಂಹ: ಕೊಂಡ ವಸ್ತುವಿನ ಲೋಪ ಕಂಡು ಮರುಗುವುದಕ್ಕೆ ಬದಲಾಗಿ ಹೊಸ ವಸ್ತು ಕೊಳ್ಳುವ ಮೊದಲೇ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ: ಬಂಗಾರದಿಂದ ಬಾಳು ಬಂಗಾರವಾಗದು. ಸಂತೋಷದಿಂದ ಇದ್ದರೆ ಅದೇ ಬಂಗಾರ. ಹೆಚ್ಚು ಆಸೆ ಬೇಡ. ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳಿ.

ವಾರ ಭವಿಷ್ಯ: ಈ ರಾಶಿಯವರ ಖರ್ಚಿನಲ್ಲಿ ಏರುಪೇರಾಗುವ ಸಾಧ್ಯತೆ

ತುಲಾ: ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ ವಿಚಾರದಲ್ಲಿ ಆತುರ ಪಡುವುದು ಬೇಡ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ವೃಶ್ಚಿಕ:  ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ನೀಡಿ. ನಿಮ್ಮ ಸಹಾಯಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಗೌರವ ಇರಲಿ. ಎಲ್ಲವೂ ಒಳ್ಳೆಯದ್ದೇ ಆಗಲಿ

ಧನುಸ್ಸು: ಆತಂಕ ಬೇಡ, ಆರೋಗ್ಯ ಸುಧಾರಿಸಲಿದೆ, ನಷ್ಟ ವಸ್ತು ಲಭ್ಯ, ಕಾರ್ಯ ಸ್ಥಳದಲ್ಲಿ ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಕರ: ಸಂಗಾತಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲದ ದಿನ, ಶುಭಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ

ಕುಂಭ: ಅನ್ಯೋನ್ಯತೆ, ಪರಸ್ಪರ ಸಹಕಾರದ ದಿನ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಪ್ರಯಾಣದ ದಿನ, ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಕಾರ, ನಾಗ ದೇವರ ಪ್ರಾರ್ಥನೆ ಮಾಡಿ

PREV
click me!

Recommended Stories

ನಾಳೆ ಡಿಸೆಂಬರ್ 17 ರಂದು ಲಕ್ಷ್ಮಿ ನಾರಾಯಣ ಯೋಗ, ಐದು ರಾಶಿಗೆ ಬಂಪರ್‌ ಲಾಭ
ಮಕ್ಕಳು ಮಲಗಿದ ನಂತ್ರ ಅದೇ ರೂಂನಲ್ಲಿ ಪೋಷಕರು ರೋಮ್ಯಾನ್ಸ್ ಮಾಡ್ತೀರಾ?, ಹಾಗಿದ್ರೆ ಈ ವಿಷ್ಯ ಗೊತ್ತಿರ್ಲಿ