ಮುಗಿದಿಲ್ಲ ಇನ್ನೂ ದೀಪಾವಳಿ ಸಂಭ್ರಮ: ಯಾವ ರಾಶಿ ಫಲ ಹೇಗಿದೆ?

By Web DeskFirst Published Oct 29, 2019, 7:01 AM IST
Highlights

ಅಕ್ಟೋಬರ್ 29 ಮಂಗಳವಾರ, ಹೇಗಿದೆ ನಿಮ್ಮ ಇಂದಿನ ರಾಶಿಗಳ ಫಲಾ ಫಲ?

ಮೇಷ: ಹಬ್ಬದ ಸಂಭ್ರಮ ಮನೆ, ಮನಗಳಲ್ಲಿ ನೆಲೆಯಾಗಲಿದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಕೂರುವುದು ಬೇಡ.

ವೃಷಭ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳದ ರೀತಿಯಲ್ಲಿ ಕೊಟ್ಟ ಕಾರ್ಯಗಳನ್ನು ಮಾಡಿ ಮುಗಿಸಿ.

ಮಿಥುನ: ಧನಾಗಮನವಾಗಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಖರ್ಚು ಕಡಿಮೆ ಮಾಡಿ, ಹೊಸ ಚಿಂತನೆಗಳು ಹುಟ್ಟಲಿವೆ.

ಕಟಕ: ಮಾತನಾಡಿಕೊಂಡೇ ಇದ್ದರೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಮಾತಿಗಿಂತ ಮಾಡುವ ಕೆಲಸವೇ ಫಲ ನೀಡುವುದು.

ಸಿಂಹ: ತಪ್ಪು ನಿಮ್ಮದಿದ್ದಾಗ ಅದನ್ನು ಒಪ್ಪಿಕೊಂಡು ಸುಮ್ಮನೆ ಇದ್ದು ಬಿಡಿ. ವಾದ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಕನ್ಯಾ: ಹಣಕಾಸಿನ ತೊಂದರೆಯಾದರೂ ಅದು ಸಂಜೆ ವೇಳೆಗೆ ಇಲ್ಲವಾಗುವುದು. ಸಮಯಕ್ಕೆ ಸರಿಯಾಗಿ ಅಂದುಕೊಂಡ ಕಾರ್ಯ ಮಾಡಿ.

ತುಲಾ: ನಿಮ್ಮದಲ್ಲದ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರಲಿವೆ. ಆಗುವುದೆಲ್ಲವೂ ಒಳ್ಳೆಯದಕ್ಕೆ ತುಲಾ ಎಂದುಕೊಂಡು ಮುಂದೆ ಸಾಗಿ. ಶುಭ ಫಲ.

ವೃಶ್ಚಿಕ: ಸಂಬಂಧಗಳ ಅರ್ಥ ತಿಳಿದುಕೊಳ್ಳಿ. ಯಾರಿಗೂ ನಿಮ್ಮಿಂದ ನೋವಾಗದಂತೆ ಎಚ್ಚರ ವಹಿಸಿ. ದೂರದ ಪ್ರಯಾಣ ಮಾಡಬೇಕಾದೀತು.

ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ

ಧನಸ್ಸು: ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇರುವುದು ಸಹಜ. ಅದನ್ನು ಸರಿಸಿ ಮುಂದೆ ಸಾಗುವುದನ್ನು ಕಲಿಯಬೇಕು. ಧೈರ್ಯವಿರಲಿ.

ಮಕರ: ಬದುಕು ತುಂಬಾ ಪಾಠಗಳನ್ನು ಕಲಿಸುತ್ತದೆ. ನೀವು ಒಮ್ಮೆ ಕಲಿತ ಪಾಠವನ್ನು ನೆನಪಿನಲ್ಲಿ ಇಟ್ಟುಕೊಂಡು ಸಾಗಿದರೆ ಒಳಿತಾಗಲಿದೆ.

ಕುಂಭ: ಇಡೀ ದಿನ ನೆಮ್ಮದಿಯಿಂದ ಇರಲಿದ್ದೀರಿ. ಬಂಧುಗಳು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ಗೆಲುವು ನಿಮ್ಮದಾಗಲಿದೆ.

ಮೀನ: ನಾಳಿನ ಚಿಂತೆಯನ್ನು ಬಿಟ್ಟು, ಇಂದಿಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗಿ. ನೆಮ್ಮದಿ ಹೆಚ್ಚಾಗಲಿದೆ. 

click me!