ಈ ರಾಶಿಯವರಲ್ಲಿ ಬದಲಾವಣೆ : ಶುಭವೊಂದು ಎದುರಾಗಲಿದೆ

Published : May 17, 2019, 07:11 AM IST
ಈ ರಾಶಿಯವರಲ್ಲಿ ಬದಲಾವಣೆ : ಶುಭವೊಂದು ಎದುರಾಗಲಿದೆ

ಸಾರಾಂಶ

ಯಾವ ರಾಶಿಗೆ  ಯಾವ ಫಲ, ನಿಮ್ಮ ಭವಿಷ್ಯ ಹೇಗಿದೆ?

ಈ ರಾಶಿಯವರಲ್ಲಿ ಬದಲಾವಣೆ : ಶುಭವೊಂದು ಎದುರಾಗಲಿದೆ


ಮೇಷ
ಬದಲಾವಣೆ ಸಹಜ. ಅದಕ್ಕೆ ಹೊಂದಿಕೊಂಡು
ಮುಂದೆ ಸಾಗುತ್ತಿರಿ. ಗೆಳೆಯನ ಮನೆಯ
ಶುಭ ಸಮಾರಂಭದಲ್ಲಿ ಭಾಗಿಯಾಗಲಿದ್ದೀರಿ.

ವೃಷಭ
ಕಷ್ಟ ನಷ್ಟ ಎಲ್ಲರಿಗೂ ಇದ್ದದ್ದೇ. ಅದಕ್ಕಾಗಿ
ಕೊರಗುತ್ತಾ ಕೂರುವುದು ಬೇಡ. ಆತ್ಮೀಯ
ರೊಂದಿಗೆ ಮಾತನಾಡುವ ಎಚ್ಚರ ಇರಲಿ.

ಮಿಥುನ
ಹೆಚ್ಚು ಇಷ್ಟಪಟ್ಟಿದ್ದ ವಸ್ತು ಇಂದು ನಿಮ್ಮ ಕೈ
ಸೇರಲಿದೆ. ಮದುವೆ ವಿಚಾರದಲ್ಲಿ ಕೊಂಚ
ನಿಧಾನ ಮಾಡಿದರೆ ಒಳಿತು. ಸಂತಸ ಹೆಚ್ಚಲಿದೆ.

ಕಟಕ
ನಿಮ್ಮ ದಿನಚರಿಯಲ್ಲಿ ಬದಲಾವಣೆ
ಯಾಗಲಿದೆ. ಗಣ್ಯ ವ್ಯಕ್ತಿಗಳ ಭೇಟಿ ಸಾಧ್ಯತೆ.
ಮಾಡುವ ಕೆಲಸವನ್ನು ಮನಸಾರೆ ಮಾಡಿ.

ಸಿಂಹ
ಮತ್ತೊಬ್ಬರ ಕೆಲಸದ ಬಗ್ಗೆ ಟೀಕೆ ಟಿಪ್ಪಣಿ
ಮಾಡುವುದು ಬೇಡ. ನಿಮ್ಮ ಇಷ್ಟದಂತೆ ಇಡೀ
ದಿನ ಕಳೆಯಲಿದ್ದೀರಿ. ಆದಾಯ ಹೆಚ್ಚಾಗಲಿದೆ.

ಕನ್ಯಾ
ನಿಮ್ಮ ಮೇಲೆ ಇಂದು ಹೆಚ್ಚಿನ ಜವಾಬ್ದಾರಿ
ಬೀಳಲಿದೆ. ಸೂಕ್ತ ತಯಾರಿ ಮಾಡಿಕೊಂಡು
ಹೊಸ ಕೆಲಸಕ್ಕೆ ಮುಂದಾಗುವುದು ಒಳಿತು.

ತುಲಾ 
ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಇರಲಿ.
ಮತ್ತೊಬ್ಬರ ಓರೆ ಕೋರೆಗಳ ಬಗ್ಗೆ ಚರ್ಚೆ
ಮಾಡುವುದು ಬೇಡ. ಸ್ನೇಹಿತರು ಹೆಚ್ಚಲಿದ್ದಾರೆ.

ವೃಶ್ಚಿಕ
ನೆರೆ ಮನೆಯವರ ಜೊತೆ ವಿನಾಕಾರಣ
ಮನಸ್ಥಾಪ ಬೇಡ. ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ದುರ್ಬಲರಿಗೆ ನೆರವಾಗಲಿದ್ದೀರಿ. 

ಧನುಸ್ಸು
ಹಿರಿಯ ಅಧಿಕಾರಿಗಳೊಂದಿಗೆ ಸೌಜನ್ಯದಿಂದ
ವರ್ತಿಸಿ. ಚಿನ್ನಾಭರಣಗಳನ್ನು ಕೊಳ್ಳುವುದ
ಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಿದ್ದೀರಿ.

ಮಕರ
ಸಹನೆ ನಿಮ್ಮ ದೌರ್ಬಲ್ಯವಲ್ಲ. ಅದು ನಿಮ್ಮ
ಶಕ್ತಿ. ಎಲ್ಲರೊಂದಿಗೂ ಆತ್ಮೀಯವಾಗಿ
ನಡೆದುಕೊಳ್ಳಲಿದ್ದೀರಿ. ಹೊಸ ದಾರಿ ಸಿಗಲಿದೆ.

ಕುಂಭ
ಬಂಧುಗಳು ಇಂದು ನಿಮ್ಮ ಪಾಲಿಗೆ ಸಹಾಯ
ಹಸ್ತ ಚಾಚಲಿದ್ದಾರೆ. ಅತಿ ಆಸೆ ಒಳ್ಳೆಯದ್ದಲ್ಲ.
ಮತ್ತೊಬ್ಬರ ವಿಷಯಕ್ಕೆ ಮನಸ್ಸು ಕೆಡಿಸಿಕೊಳ್ಳದಿರಿ.

ಮೀನ 
ವ್ಯಾಪಾರದಲ್ಲಿ ಲಾಭವೇ ಮುಖ್ಯ. ಹಾಗೆಂದು
ವ್ಯಾಪಾರಿ ಧರ್ಮ ಬಿಡದಿರಿ. ಬೆಳೆದ ಬೆಳೆಗೆ
ಒಳ್ಳೆಯ ಪ್ರತಿಫಲ ದೊರೆಯಲಿದೆ. ಶುಭ ಫಲ.

PREV
click me!

Recommended Stories

ಜನವರಿ 2026 ರಲ್ಲಿ ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಈ ರಾಶಿಗೆ ಕರೆನ್ಸಿ ನೋಟುಗಳ ಮಳೆ, ಅದೃಷ್ಟ
ಈ 3 ಮಾಸ್ಟರ್ ಸಂಖ್ಯೆಗಳು ಜೀವನದಲ್ಲಿ ದೊಡ್ಡ ಬದಲಾವಣೆಗಳ ಸಂಕೇತ