ವಾಸ್ತು ಎಂದರೆ ಜೀವನದ ಪ್ರತಿಯೊಂದೂ ಏಳು ಬೀಳಿಗೆ ಕಾರಣವಾಗುತ್ತದೆ. ಜೀವನದ ಪ್ರಮುಖ ಘಟ್ಟ ಒಳ್ಳೆ ಕೆಲಸ ಗಿಟ್ಟಿಸಿಕೊಳ್ಳುವುದು. ಇದಕ್ಕೆ ವಾಸ್ತು ಹೇಗಿರಬೇಕು?
ವಾಸ್ತು ದೋಷವೂ ಕೆಲಸ ಸಿಗದಿರುವಂತೆ ಮಾಡುತ್ತದೆ. ನೀವು ಕೆಲಸ ಸಿಗಲಿಲ್ಲ ಎಂದು ತಲೆಕೆಡಿಸಿಕೊಳ್ಳುವ ಬದಲು ವಾಸ್ತು ಟಿಪ್ಸ್ ಪಾಲಿಸಿದರೆ ಬೇಗ ಕೆಲಸ ದೊರೆಯುತ್ತದೆ.
ಕಾಲೇಜು ಮುಗಿಸಿದ ನಂತರ ಎಲ್ಲೆಡೆ ಕೆಲಸ ಹುಡುಕಿ ಹುಡುಕಿ ಸೋತು ಹೋಗಿದ್ದೀರಾ? ಈ ಬಗ್ಗೆ ಯೋಚನೆ ಬೇಡ. ಖಂಡಿತಾ ಉತ್ತಮ ಕೆಲಸ ಸಿಗುತ್ತದೆ. ಆದರೆ ಆದಕ್ಕಾಗಿ ನೀವು ಕೆಲವೊಂದಿಷ್ಟು ಕೆಲಸ ಮಾಡಬೇಕು. ಅದನ್ನು ಮಾಡಿದರೆ ಮಾತ್ರ ನೀವು ಅಂದುಕೊಂಡ ಕೆಲಸ ಸಿಗಲು ಸಾಧ್ಯ. ಈ ವಾಸ್ತು ಟಿಪ್ಸ್ ಪಾಲಿಸಿ ನೋಡಿ, ಯಶಶ್ಸು ಕಟ್ಟಿಟ್ಟ ಬುತ್ತಿ...
undefined
- ಪ್ರತಿದಿನ ಏಳು ರೀತಿಯ ಧಾನ್ಯ ಮಿಕ್ಸ್ ಮಾಡಿ ಪಕ್ಷಿಗಳಿ ತಿನಿಸಿ. ಜೊತೆಗೆ ಸ್ನಾನದ ನಂತರ ಗಣೇಶನ ದರ್ಶನ ಮಾಡುವುದರಿಂದ ಬೇಗ ಕೆಲಸ ಸಿಗುತ್ತದೆ.
- ತಿಂಗಳ ಮೊದಲ ಸೋಮವಾರ ಬಿಳಿ ಬಟ್ಟೆಯಲ್ಲಿ ಅಕ್ಕಿಯನ್ನು ಕಟ್ಟಿ ಕಾಳಿ ದೇವಿಗೆ ಅರ್ಪಿಸಿ. ಇದರಿಂದ ನೌಕರಿ ಸಮಸ್ಯೆ ನಿವಾರಣೆಯಾಗುತ್ತದೆ.
- ಇಂಟೆರ್ವ್ಯೂಗೆ ಹೋಗೋ ಸಮಯದಲ್ಲಿ ಹನುಮಾನ್ ಚಾಲೀಸ್ ಪಠಿಸಿ. ಇದು ಇಂಟೆರ್ವ್ಯೂ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.
- ಇಷ್ಟ ಪಟ್ಟ ಕೆಲಸ ಸಿಗಲು ಅಥವಾ ಪ್ರಮೋಷನ್ ಸಿಗಲು ಶನಿವಾರ ಶನಿ ದೇವನ ದರ್ಶನ ಮಾಡಿ. ಮತ್ತು ಓಂ ಶನೈಶ್ಚರಾಯ ನಮಃ ಎಂದು 108 ಬಾರಿ ಪಠಿಸಿ.
- ಶಿವಲಿಂಗಕ್ಕೆ ಪ್ರತಿದಿನ ಕ್ಷೀರಾಭಿಷೇಕ ಮಾಡಿ.
- ಕೆಲಸದ ಹುಡುಕಾಟದಲ್ಲಿ ನೀವಿದ್ದರೆ ಸುಮೇರು ಪರ್ವತವನ್ನು ಕೈಯಲ್ಲಿ ಹಿಡಿದಿರುವ ಹನುಮಂತನ ಫೋಟೋವನ್ನು ದಿನಾಲೂ ಪೂಜಿಸಿ.
- ಇಂಟರ್ವ್ಯೂಗೆ ಹೋಗುವಾಗ ಓಂ ಮಂತ್ರ ಪಠಿಸುತ್ತಿದ್ದರೆ, ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ನಿವಾರಣೆಯಾಗಿ ಪಾಸಿಟಿವ್ ಆಗಿ ಯೋಚನೆ ಮಾಡುವ ಶಕ್ತಿ ಬರುತ್ತದೆ.
- ಇಂಟರ್ವ್ಯೂ ದಿನ ಬೆಳಗ್ಗೆ ಸ್ನಾನ ಮಾಡುವ ನೀರಿಗೆ ಅರಿಶಿನ ಮಿಕ್ಸ್ ಮಾಡಿ ಸ್ನಾನ ಮಾಡಿ, ಸ್ವಲ್ಪ ನೀರು ಹಾಗೆ ಬಿಡಿ. ಇಂಟರ್ ವ್ಯೂ ಹೋಗಿ ಬಂದು ಆ ನೀರನ್ನು ಚೆಲ್ಲಿ , ನಂತರ ದೇವರನ್ನು ಪ್ರಾರ್ಥಿಸಿ.
- ಗೋ ಮಾತೆಗೆ ಬೆಲ್ಲ ಮತ್ತು ಗೋಧಿಯಿಂದ ಮಾಡಿದ ತಿಂಡಿ ನೀಡಿದರೆ ಇಂಟರ್ವ್ಯೂ ಚೆನ್ನಾಗಿ ಆಗುತ್ತದೆ.
ಉದ್ಯೋಗ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ