ಇಂದು ಈ ರಾಶಿಯವರು ಗೊಂದಲಕ್ಕೆ ಸಿಲುಕಲಿದ್ದೀರಿ

Published : Nov 16, 2019, 07:13 AM ISTUpdated : Nov 16, 2019, 07:19 AM IST
ಇಂದು ಈ ರಾಶಿಯವರು ಗೊಂದಲಕ್ಕೆ ಸಿಲುಕಲಿದ್ದೀರಿ

ಸಾರಾಂಶ

ನವೆಂಬರ್ 16 ಶನಿವಾರ, ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?

ಮೇಷ: ಮುಂಜಾನೆಯೇ ಗೊಂದಲಕ್ಕೆ ಸಿಲುಕಲಿದ್ದೀರಿ. ಸಂಜೆ ವೇಳೆಗೆ ಗೊಂದಲಕ್ಕೆ ತೆರೆ ಬೀಳಲಿದೆ. ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಸಾಧ್ಯ.

ವೃಷಭ: ಹುಚ್ಚು ಮನಸ್ಸು ಹೇಳಿದ ಹಾಗೆ ಕುಣಿದರೆ ಸಂಕಷ್ಟ ಶತ ಸಿದ್ಧ. ಹಿರಿಯರ ಮಾತಿಗೆ ಗೌರವ ನೀಡಿ ಅವರ ಮಾರ್ಗದರ್ಶನದಂತೆ ಸಾಗಿ.

ಮಿಥುನ: ಗುರುಬಲವಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಎಲ್ಲಾ ವಿಚಾರಗಳಲ್ಲಿಯೂ ಆಸಕ್ತಿ ತಾಳಲಿದ್ದೀರಿ.

ಕಟಕ: ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಸಕಾಲ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಬಂಧುಗಳ ಆಗಮನವಾಗಲಿದೆ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ಸಿಂಹ: ಎಷ್ಟೇ ಕಷ್ಟ ಬಂದರೂ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಿಮ್ಮ ಪಾಲಿನ ಕಾರ್ಯಗಳನ್ನು ನೀವು ಮಾಡಿ ಮುಗಿಸಿ.

ಕನ್ಯಾ: ಪದೇ ಪದೇ ಅದದೇ ತಪ್ಪುಗಳನ್ನು ಮಾಡುವುದು ಸರಿಯಲ್ಲ. ದೊಡ್ಡವರ ದೃಷ್ಟಿಯಲ್ಲಿ ನಿಮ್ಮ ಬಗ್ಗೆ ಸದಭಿಪ್ರಾಯ ಮೂಡಲಿದೆ.

ತುಲಾ: ಇಂದು ಅಧಿಕಾರ ಕೇಂದ್ರದ ಸುತ್ತಬೇಕಾದ ಸಂದರ್ಭ ಬರಲಿದೆ. ಹಣಕಾಸಿನ ವಿಚಾರದಲ್ಲಿ ಸೂಕ್ತ ಮಾಹಿತಿ ಪಡೆದು ಮುಂದೆ ಸಾಗಿ.

ವೃಶ್ಚಿಕ: ಎಲ್ಲವೂ ನಿಮ್ಮ ಇಷ್ಟದಂತೆಯೇ ಆಗಬೇಕು ಎಂದುಕೊಳ್ಳುವುದು ತಪ್ಪು. ಇಂದು ಪರಿಸ್ಥಿತಿಯ ಕೈಗೊಂಬೆಯಾಗಬೇಕಾದೀತು.

ಧನಸ್ಸು: ಆರೋಗ್ಯದಲ್ಲಿ ಕೊಂಚ ಸಮಸ್ಯೆ ಉಂಟಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.

ಮಕರ: ಮನೆಯಲ್ಲಿ ಸಣ್ಣ ಪ್ರಮಾಣದ ಮನಸ್ತಾಪ ಉಂಟಾಗಲಿದೆ. ಕಚೇರಿಯ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ಕುಂಭ: ಯಾರೋ ಮಾಡಿದ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಿ ಬರಬಹುದು. ಅಂಜಿಕೆ ಬಿಟ್ಟು ಮುಂದೆ ಸಾಗಿ. ಧೈರ್ಯ ಹೆಚ್ಚಾಗಲಿದೆ.

ಮೀನ: ಸ್ನೇಹಿತರಿಂದ ಸ್ಫೂರ್ತಿಗೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದೀರಿ. ಹಣಕ್ಕೆ ಆಸೆಪಟ್ಟು ಪೇಚಿಗೆ ಸಿಲುಕುವ ಸಾಧ್ಯತೆ. ಎಚ್ಚರವಿರಲಿ.

 

PREV
click me!

Recommended Stories

ಬಾಬಾ ವಂಗಾ 3ನೇ ಮಹಾಯುದ್ಧದ ಭವಿಷ್ಯವಾಣಿ ನಿಜವಾಯ್ತಾ? ಸೌದಿ, ಬಹ್ರೇನ್, ಕತಾರ್, ಕುವೈತ್‌,ಯುಎಇ ಮೇಲೆ ಇರಾನ್ ದಾಳಿ
ಇಂದು ಬಾನಂಗಳದಲ್ಲಿ ಅದ್ಭುತ: ಹಲವು ಗ್ರಹಗಳ ಮೆರವಣಿಗೆ- ಇಷ್ಟಾರ್ಥ ಈಡೇರಿಸಿಕೊಳ್ಳುವುದು ಹೇಗೆ?