ಇಂದು ಈ ರಾಶಿಯವರ ಖರ್ಚು ಅಧಿಕವಾಗಲಿದೆ

Published : Nov 14, 2019, 07:08 AM IST
ಇಂದು ಈ ರಾಶಿಯವರ  ಖರ್ಚು ಅಧಿಕವಾಗಲಿದೆ

ಸಾರಾಂಶ

ನವೆಂಬರ್ 14 ಗುರುವಾರ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ ?

ಮೇಷ: ಮತ್ತೊಬ್ಬರಿಗೆ ಆದೇಶ ಮಾಡುವ ಮೊದಲಿಗೆ ನಿಮ್ಮ ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ಹಿಡಿದ ಕಾರ್ಯವನ್ನು ಮುಗಿಸುವಿರಿ.

ವೃಷಭ: ಆದಾಯದಲ್ಲಿ ಏರಿಕೆ ಕಂಡರೂ ಖರ್ಚು ಕೂಡ ಅಧಿಕವಾಗಲಿದೆ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗರೂಕವಾಗಿ ಇದ್ದರೆ ಒಳಿತು.

ಮಿಥುನ: ಹಿಂದೆ ಮಾಡಿದ ಧರ್ಮ ಕಾರ್ಯಗಳು ಇಂದು ನಿಮ್ಮ ನೆರವಿಗೆ ಬರಲಿವೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ.

ಕಟಕ: ದೊಡ್ಡವರು ಹೇಳಿದ ಮಾತನ್ನು ಕೇಳಿ. ನಿತ್ಯವೂ ಕಾಡುತ್ತಿದ್ದ ಚಿಂತೆ ಇಂದು ಶಮನವಾಗಲಿದೆ. ಒಳ್ಳೆಯ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ಸಿಂಹ: ಆತ್ಮೀಯರಿಂದ ಸಹಾಯ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ವ್ಯಾಪಾರಿಗಳಿಗೆ ಇದು ಒಳ್ಳೆಯ ದಿನ.

ಕನ್ಯಾ: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಹಾಗೆಯೇ ಸಂಪಾದನೆಗೆ ತಕ್ಕಂತೆ ಖರ್ಚು ಮಾಡಬೇಕು. ಒಳ್ಳೆಯ ಸುದ್ದಿ ಕೇಳಲಿದ್ದೀರಿ.

ತುಲಾ: ಮಾತು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಸಮತೋಲನ ಕಾಯ್ದುಕೊಳ್ಳಿ. ಕೋಪ ಮಾಡಿಕೊಳ್ಳುವುದರಿಂದ ಏನೂ ಆಗದು.

ವೃಶ್ಚಿಕ: ನಿಮ್ಮ ಲಾಭಕ್ಕಾಗಿ ಮತ್ತೊಬ್ಬರ ಹಿತಾಸಕ್ತಿಯನ್ನು ಬಲಿ ಕೊಡುವ ಕೆಲಸ ಮಾಡದಿರಿ.ಉಳಿತಾಯದ ಕಡೆಗೆ ಹೆಚ್ಚು ಗಮನ ನೀಡಿ.

ಧನಸ್ಸು: ಮನೆಯಲ್ಲಿ ಶುಭ ಕಾರ್ಯ ನಡೆಯುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದೀರಿ. ಶುಭ ಫಲ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ಮಕರ: ನೀವು ನಂಬಿದ ವ್ಯಕ್ತಿಗಳಿಂದ ಇಂದು ನಿಮಗೆ ದೊಡ್ಡ ಮಟ್ಟದ ಸಹಾಯವಾಗಲಿದೆ. ಕಲೆ, ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಉಂಟಾಗಲಿದೆ.

ಕುಂಭ: ನೀವು ಮಾಡಿದ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದು. ಸಂದರ್ಭಕ್ಕೆ ತಕ್ಕ ಹಾಗೆ ಯೋಚಿಸಿ ಮುಂದೆ ಸಾಗಿ.

ಮೀನ: ನಡೆಯಬೇಕಾದ ದಾರಿ ತುಂಬಾ ದೂರ ಇದೆ ಎಂದು ಸುಮ್ಮನೆ ಕೂರದಿರಿ. ನಿಮ್ಮಿಂದ ಸಾಧ್ಯವಾದಷ್ಟು ದೂರ ನಡೆಯಲು ಆರಂಭಿಸಿ.

PREV
click me!

Recommended Stories

ಎರಡು ಹಲ್ಲಿಗಳು ಪರಸ್ಪರ ಕಾದಾಡುವುದನ್ನ ನೋಡಿದ್ರಾ?, ವಾಸ್ತು ಶಾಸ್ತ್ರದಲ್ಲಿ ಇದಕ್ಕಿದೆ ವಿಶೇಷ ಅರ್ಥ
850 ವರ್ಷಗಳ ಬಳಿಕ ಅಪರೂಪದ ಘಟನೆ, ಖಗೋಳ ಕೌತುಕ ನೋಡಲು 2 ವರ್ಷ ಮುನ್ನವೇ ಈ ನಗರದಲ್ಲಿ ಹೋಟೆಲ್‌ಗಳು ಸೋಲ್ಡ್ ಔಟ್!